ಕುಂಬಳೆ: ಮಾದಕ ವಸ್ತುಗಳ ವಿರುದ್ಧ ಪೆÇಲೀಸರು ಆರಂಭಿಸಿರುವ ಆಪರೇಶನ್ ತೂಫಾನ್ ಕಾರ್ಯಾಚರಣೆಯನ್ವಯ ಬಂಬ್ರಾಣ ಕಲ್ಲೆಟ್ಟಿ ಹೌಸ್‍ನ ಹಂಸ (40) ಹಾಗೂ ಕುಂಟಂಗೇರಡ್ಕ ಪೆಲ್ಫೇರ್ ಶಾಲೆ ಬಳಿಯ ನಿವಾಸಿ ಅಬ್ದುಲ್ ನಿಸಾರ್ (32) ಎಂಬವರನ್ನು ಕುಂಬಳೆ ಠಾಣೆ ಎಸ್‍ಐ ಗಣೇಶ್ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ.
ಬುಧವಾರ ರಾತ್ರಿ ಕಾರ್ಯಾಚರಣೆ ನಡೆಸಿದ ಪೆÇಲೀಸರು ಹಂಸನ ವಶದಲ್ಲಿದ್ದ 0.61 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದು, ಈತನನ್ನು ತನಿಖೆಗೊಳಪಡಿಸಿದಾಗ ಈತನಿಗೆ ಎಂಡಿಎಂಎ ನೀಡಿದ್ದ ಅಬ್ದುಲ್ ನಿಸಾರ್ ಬಗ್ಗೆ ಮಾಹಿತಿ ನೀಡಿದ್ದನು. ಅಬ್ದುಲ್ ನಿಸಾರ್‍ನನ್ನು ವಶಕ್ಕೆ ತೆಗೆದು ತಪಾಸಣೆ ನಡೆಸಿದಾಗ ಆತನ ವಶದಲ್ಲಿ 0.9 ಗ್ರಾಂ ಎಂಡಿಎಂಎ ಪತ್ತೆಯಾಗಿದೆ. ಎಂಡಿಎಂಎ ಸಹಿತ ಮಾದಕವಸ್ತು ದಂಧೆಯ ಹಿಂದೆ ದೊಡ್ಡ ಜಾಲ ಇರುವ ಅನುಮಾನ ಇದ್ದುದರಿಂದ ತೀವ್ರಗೊಳಿಸಿರುವುದಾಗಿ ಪೆÇಲೀಸರು ತಿಳಿಸಿದ್ದಾರೆ.



