HEALTH TIPS

ಪೊಯ್ಯೆ ಶ್ರೀ ಚಾಮುಂಡಿ ದೈವಸ್ಥಾನ ಆಡಳಿತ ಮಂಡಳಿ ಮಹಾಸಭೆ

ಮಂಜೇಶ್ವರ: ವರ್ಕಾಡಿ ಪಾವೂರು ಪೆÇಯ್ಯೆ ಶ್ರೀ ಚಾಮುಂಡಿ ದೈವಸ್ಥಾನ ಆಡಳಿತ ಮಂಡಳಿಯ 25-26ರ ವಾರ್ಷಿಕ ಮಹಾಸಭೆ , ಲೆಕ್ಕಪತ್ರ ಮಂಡನೆ, ಮತ್ತು ನೂತನ ಪದಾಧಿಕಾರಿಗಳ ಆಯ್ಕೆ ಕ್ಷೇತ್ರ ವಠಾರದಲ್ಲಿ ಜರುಗಿತು.  ಆಡಳಿತ ಮಂಡಳಿಯ ಅಧ್ಯಕ್ಷ ಮನೋಹರ ಶೆಟ್ಟಿ ಕೆದುಂಬಾಡಿ ಅಧ್ಯಕ್ಷತೆ ವಹಿಸಿದ್ದರು. 

ನಾರಾಯಣಶೆಟ್ಟಿ ಕಿನ್ಯಗುತ್ತು,  ಸಮಿತಿಯ ಮಾಜಿ ಅಧ್ಯಕ್ಷರಾದ ಚಂದ್ರಹಾಸ ಪೂಜಾರಿ ಮುಡಿಮಾರು, ವಸಂತ ರೆಂಜಪಡುಪು, ನಾರಾಯಣಶೆಟ್ಟಿ ಬಜಾಲ್, ಭುಜಂಗ ಸಿಂತಾಜೆ, ಶಿವರಾಮ ಶೆಟ್ಟಿ ಮುಗೇರು ಗುತ್ತು, ತ್ಯಾಂಪಣ್ಣರೈ ಪಾವೂರು ,ಭೋಜ ಮಾಸ್ಟರ್, ಮಾಧವ ಪೂಜಾರಿ ಕುದುಕೋರಿ, ಮೊದಲಾದವರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಅಶೋಕ್ ತಚ್ಚಿರೆ ವರದಿ ವಾಚಿಸಿ, ಭೋಜ ಮಾಸ್ಟರ್ ಲೆಕ್ಕಪತ್ರ ಮಂಡಿಸಿದರು.  

ಈ ಸಂದರ್ಭ ಕ್ಷೇತ್ರಾಡಳಿತ ಮಂಡಳಿಯ ನೂತನ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ವಿನೋದ್ ಕುಮಾರ್ ರೆಂಜೆಪಡ್ಪು,ಪ್ರಧಾನ ಕಾರ್ಯದರ್ಶಿಯಾಗಿ ಪುನೀತ್ ರೈ ಪಾವೂರು, ಕೋಶಾಧಿಕಾರಿಯಾಗಿ ರವಿ ಮುಡಿಮಾರು, ಉಪಾಧ್ಯಕ್ಷರಾಗಿ ಶಿವರಾಮ ಶೆಟ್ಟಿ ಮುಗೇರು ಗುತ್ತು ,ಮಾಧವ ಪೂಜಾರಿ ಕುದುಕೋರಿ, ಆಯ್ಕೆಯಾದರೆ ಜೊತೆ ಕಾರ್ಯದರ್ಶಿ ಯಾಗಿ ರಾಜೇಶ್ ಕಾನದ ಕಟ್ಟ ,ಗೋಪಾಲ ಅಂಚನ್  ನೆಕ್ಕಳ, ಲೆಕ್ಕಪರಿಶೋಧಕರಾಗಿ ತ್ಯಾಂಪಣ್ಣರೈ ಪಾವೂರು, ಭೋಜ ಮಾಸ್ಟರ್ ಬಳ್ಳೂರು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭ 2025-26ನೇ ಸಾಲಿನ ಮಿತಿಯ ದಾಖಲೆ ಪತ್ರಗಳನ್ನು ನೂತನ ಸಮಿತಿಗೆ ಹಸ್ತಾಂತರಿಸುವ ಮೂಲಕ ಹೊಸ ಸಮಿತಿಗೆ ಅಧಿಕಾರ ವಹಿಸಿಕೊಡಲಾಯಿತು. ರವಿ ಮುಡಿಮಾರು ಸ್ವಾಗತಿಸಿದರು. ಭೋಜ ಮಾಸ್ತರ್ ವಂದಿಸಿದರು.  

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries