HEALTH TIPS

ಎರಡು ದಿನಗಳಲ್ಲಿ ಬ್ರಿಟನ್ ಪ್ರಧಾನಿ ಕಿಯರ್ ಸ್ಟಾರ್ಮರ್ ರಾಜೀನಾಮೆ ಘೋಷಣೆ ಸಾಧ್ಯತೆ?

 ಲಂಡನ್‌: ಬ್ರಿಟನ್‌ ಪ್ರಧಾನಿ ಕಿಯರ್‌ ಸ್ಟಾರ್ಮರ್ ಇನ್ನು ಎರಡು ದಿನಗಳಲ್ಲಿ ತಾವು ರಾಜೀನಾಮೆ ನೀಡುವ ಕುರಿತು ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ಬಗ್ಗೆ ಲೇಬರ್‌ ‍ಪಕ್ಷದ ಅಧಿಕೃತ ಮೂಲಗಳು ಖಚಿತಪಡಿಸಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ. 


ಸೋಮವಾರದ ಹೊತ್ತಿಗೆ ರಾಜೀನಾಮೆ ನೀಡುವ ಕುರಿತು ಘೋಷಣೆ ಮಾಡಲಿದ್ದಾರೆ.

ಚುನಾವಣೆ ವೇಳೆ ಜನರಿಗೆ ನೀಡಿದ್ದ ಭರವಸೆಯನ್ನು ಈಡೇರಿಸದ ಕಾರಣ ರಾಜೀನಾಮೆ ನೀಡಲು ಅವರದೇ ಲೇಬರ್‌ ‍ಪಕ್ಷದ ಸಂಸದರ ಒತ್ತಡ ಇದೆ ಎನ್ನಲಾಗುತ್ತಿದೆ.

ಕಳೆದ ವಾರ ಮಾರ್ಕರ್‌ಫೀಲ್ಡ್‌ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಲೇಬರ್‌ ಪಕ್ಷದ ಆಯಂಡಿ ಬರ್ನಮ್‌ ಜಯಗಳಿಸಿದ್ದಾರೆ. ಈವರೆಗೆ ಇವರು ಗ್ರೇಟರ್‌ ಮ್ಯಾಂಚಿಸ್ಟರ್‌ ಮೇಯರ್‌ ಆಗಿದ್ದರು. ಉಪಚುನಾವಣೆ ಗೆದ್ದ ಬಳಿಕ ಪಕ್ಷದೊಳಗೆ ಆಯಂಡಿ ಜನಪ್ರಿಯತೆ ಹೆಚ್ಚಾಗಿದೆ.

ಪಕ್ಷವನ್ನು ಮತ್ತು ದೇಶವನ್ನು ಮುನ್ನಡೆಸಲು ನಾನು ಸಮರ್ಥನಾಗಿದ್ದೇನೆ' ಎಂದು ಆಯಂಡಿ ಅವರು ಗೆಲುವಿನ ಬಳಿಕ ನೀಡಿದ ಭಾಷಣದಲ್ಲಿ ಹೇಳಿದ್ದಾರೆ. ಒಂದೋ ಸ್ಟಾರ್ಮರ್‌ ಅವರು ರಾಜೀನಾಮೆ ನೀಡಬೇಕು ಅಥವಾ ಆಯಂಡಿ ಅವರನ್ನು ಎದುರಿಸಬೇಕು ಎಂಬ ಸ್ಥಿತಿ ನಿರ್ಮಾಣವಾಗಿದೆ ಎಂದು ಮೂಲಗಳು ತಿಳಿಸಿವೆ.

ರಾಜೀನಾಮೆಗೆ ಯಾಕೆ ಒತ್ತಡ?

2024ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಸ್ಟಾರ್ಮರ್‌ ಅವರು, ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸುವುದಾಗಿ ಭರವಸೆ ನೀಡಿದ್ದರು. ಸಾರ್ವಜನಿಕ ಸೇವೆಗಳ ವ್ಯವಸ್ಥೆಯನ್ನು ಸರಿಪಡಿಸುತ್ತೇನೆ, ಜೀವನ ವೆಚ್ಚವನ್ನು ತಗ್ಗಿಸುತ್ತೇನೆ ಎಂಬ ಭರವಸೆಗಳನ್ನು ಜನರಿಗೆ ನೀಡಿದ್ದರು. ಆದರೆ ಇವು ಭರವಸೆಯಾಗೇ ಉಳಿದಿರುವುದರಿಂದ ಜನರು ನಿರಾಸೆಗೊಂಡಿದ್ದಾರೆ ಎನ್ನಲಾಗಿದೆ.

ಲೈಂಗಿಕ ಅಪರಾಧಿ ಜೆಫ್ರಿ ಎಪ್‌ಸ್ಟೈನ್‌ ಅವರ ಸ್ನೇಹಿತ ಪೀಟರ್‌ ಮಂಡೆಲ್‌ಸನ್‌ ಅವರನ್ನು ಅಮೆರಿಕಕ್ಕೆ ಬ್ರಿಟನ್‌ ರಾಯಭಾರಿಯನ್ನಾಗಿಸಿದ್ದು ಸೇರಿದಂತೆ ಆಡಳಿತಾತ್ಮಕವಾಗಿ ಹಲವು ತಪ್ಪು ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಈ ಎಲ್ಲ ಕಾರಣದಿಂದ ಲೇಬರ್‌ ಪಕ್ಷದ ಮತ್ತು ಸರ್ಕಾರದ ಜನಪ್ರೀಯತೆ ಕುಸಿಯುತ್ತಿದೆ ಎನ್ನವುದು ಲೇಬರ್‌ ಪಕ್ಷದ ಸಂಸದರ ಅಭಿಪ್ರಾಯವಾಗಿದೆ. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries