HEALTH TIPS

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ವಿಡಿಯೊ ಹಂಚಿಕೆಗೆ ಟೆಲಿಗ್ರಾಮ್ ವ್ಯಾಪಕ ಬಳಕೆ!

ನವದೆಹಲಿ: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ವಿಷಯ, ವಿಡಿಯೊಗಳನ್ನು ಹಂಚಿಕೆ ಮಾಡಲು ಹಾಗೂ ಹಣಕಾಸು ಅಕ್ರಮಗಳಿಗಾಗಿ ಟೆಲಿಗ್ರಾಮ್‌ ಆಯಪ್‌ ಅನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ ಎಂಬುದು ತನಿಖೆಯಿಂದ ಬಹಿರಂಗವಾಗಿದೆ.

ಇತ್ತೀಚೆಗೆ ನೀಟ್‌ ಮರುಪರೀಕ್ಷೆ ವೇಳೆ ಅಕ್ರಮಗಳನ್ನು ತಡೆಯುವ ಸಲುವಾಗಿ ಟೆಲಿಗ್ರಾಮ್‌ ಆಯಪ್‌ ಅನ್ನು ಕೇಂದ್ರ ಸರ್ಕಾರವು ದೇಶದಾದ್ಯಂತ ತಾತ್ಕಾಲಿಕವಾಗಿ ನಿರ್ಬಂಧಿಸಿತ್ತು.

ಆ ಕ್ರಮವನ್ನು ಸಮರ್ಥಿಸಿಕೊಳ್ಳುವ ಸಲುವಾಗಿ, ಗೃಹ ಸಚಿವಾಲಯದ ಸೈಬರ್‌ ಅಪರಾಧ ಸಮನ್ವಯ ಕೇಂದ್ರದ 35 ಪುಟಗಳ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ.

ದೋಷಪೂರಿತ ಮಾಹಿತಿಗಳ ಪ್ರಸಾರ ತಡೆಗೆ ಟೆಲಿಗ್ರಾಮ್‌ ಸರಿಯಾದ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ.

ನೀಟ್‌ ಪರೀಕ್ಷೆ ವೇಳೆ ಅಕ್ರಮಗಳು ನಡೆಯುವುದನ್ನು ತಡೆಯುವ ಸಲುವಾಗಿ ಜೂನ್‌ 16ರಿಂದ 22ರ ವರೆಗೆ ಟೆಲಿಗ್ರಾಮ್‌ ಅನ್ನು ನಿರ್ಬಂಧಿಸಲಾಗಿತ್ತು. ಆದಾಗ್ಯೂ, ಜೂನ್‌ 30ರವರೆಗೆ ಹಳೇ ಸಂದೇಶಗಳನ್ನು ಎಡಿಟ್‌ ಮಾಡಲು ಸಾಧ್ಯವಾಗುವುದಿಲ್ಲ.

ಟೆಲಿಗ್ರಾಮ್‌ನ ಗೋಪ್ಯತಾ ಮಾನದಂಡ, ಸುರಕ್ಷತಾ ವೈಶಿಷ್ಟ್ಯಗಳ ಬಗ್ಗೆ ಕೇಂದ್ರ ಸರ್ಕಾರ ಕಳವಳ ವ್ಯಕ್ತಪಡಿಸಿದೆ. ಬಳಕೆದಾರರು, ಮೊಬೈಲ್‌ ನಂಬರ್‌ ಬಹಿರಂಗಪಡಿಸದೆಯೇ ಸಂವಹನ ನಡೆಸಲು ಅವಕಾಶ ಕಲ್ಪಿಸುವುದರಿಂದಾಗಿ, ಗುರುತುಪತ್ತೆ ಕಷ್ಟವಾಗುತ್ತದೆ. ಭಾರತದಲ್ಲಿ ಸುಮಾರು 50 ಕೋಟಿಗೂ ಹೆಚ್ಚು ಬಳಕೆದಾರರನ್ನು ಹೊಂದಿರುವ ವಾಟ್ಸ್‌ಆಯಪ್‌ನಲ್ಲಿ ಈ ಸಮಸ್ಯೆ ಇಲ್ಲ.

ಜೂನ್‌ 10ರಂದು ಪ್ರಕಟವಾಗಿರುವ ಕೇಂದ್ರದ ವರದಿಯಲ್ಲಿ, ಟೆಲಿಗ್ರಾಮ್‌ ಗ್ರೂಪ್‌ಗಳಲ್ಲಿ ಉದ್ಯೋಗಕ್ಕೆ ಸಂಬಂಧಿಸಿದ ನಕಲಿ ಜಾಹೀರಾತುಗಳು, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಅಥವಾ ಶೋಷಣೆಯನ್ನು ತೋರಿಸುವ ವಿಚಾರಗಳು, ದೇಶದಾದ್ಯಂತ ಯಶಸ್ವಿ ಪ್ರದರ್ಶನ ಕಂಡಿರುವ 'ಧುರಂಧರ್' ಸೇರಿದಂತೆ ಹಲವು ಸಿನಿಮಾಗಳ ನಕಲು ಕಾಪಿಗಳು ಹರಿದಾಡುತ್ತಿರುವ ಸ್ಕ್ರೀನ್‌ಶಾಟ್‌ಗಳೂ ಇವೆ.

ಆದರೆ, ಟೆಲಿಗ್ರಾಮ್‌ ಪರ ವಕೀಲರು, ತಮ್ಮ ಆನ್‌ಲೈನ್‌ ವೇದಿಕೆಯಲ್ಲಿ ಕಾನೂನುಬಾಹಿರ ವಿಚಾರಗಳ ಪ್ರಸಾರ ಪ್ರಮಾಣ ಶೇ 0.1ಕ್ಕಿಂತಲೂ ಕಡಿಮೆ ಇದೆ ಎಂಬುದು ಆಂತರಿಕ ಪರಿಶೀಲನೆ ವೇಳೆ ಕಂಡುಬಂದಿರುವುದಾಗಿ ನ್ಯಾಯಾಲಯದಲ್ಲಿ ವಾದಿಸಿದ್ದಾರೆ.

ಸರ್ಕಾರದ ವರದಿಯ ಪ್ರಕಾರ, 2023ರಿಂದ ಸೈಬರ್ ವಂಚನೆಗೆ ಟೆಲಿಗ್ರಾಮ್‌ ಮುಖ್ಯ ವೇದಿಕೆಯಾಗಿದೆ ಎಂಬುದಕ್ಕೆ ಸಂಬಂಧಿಸಿದಂತೆ 6.88 ಲಕ್ಷಕ್ಕೂ ಹೆಚ್ಚು ದೂರುಗಳು ಬಂದಿವೆ. ಇದರಿಂದಾಗಿ ಭಾರತೀಯರಿಗೆ ಆಗಿರುವ ನಷ್ಟ ಸುಮಾರು 750 ಮಿಲಿಯನ್ ಡಾಲರ್. ಅಂದರೆ ₹ 7,104 ಕೋಟಿ ಎಂದು ಅಂದಾಜಿಸಲಾಗಿದೆ.

ಕಿರುಕುಳ, ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದ ವಿಚಾರಗಳು ಹರಿದಾಡುತ್ತಿರುವ ಟೆಲಿಗ್ರಾಮ್‌ ಚಾನೆಲ್‌ಗಳು, ಗ್ರೂಪ್‌ಗಳು ಮತ್ತು ಬಳಕೆದಾರರ ಖಾತೆಗಳ ವಿರುದ್ಧ ಈ ವರ್ಷ ಜನವರಿ - ಮೇ ಅವಧಿಯಲ್ಲಿ ಬರೋಬ್ಬರಿ 1,556 ದೂರುಗಳು ದಾಖಲಾಗಿವೆ ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಭಾರತದಲ್ಲಿ 15 ಕೋಟಿಗೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಟೆಲಿಗ್ರಾಮ್‌ ಮೇಲೆ ಹೆಚ್ಚಿನ ನಿಗಾ ಇಡಲಾಗುತ್ತಿದೆ.

ವಿದೇಶಗಳಲ್ಲೂ ತನಿಖೆ

ಟೆಲಿಗ್ರಾಮ್‌ ಆಯಪ್‌ ಮೂಲಕ ನಡೆಯುವ ಸಂಘಟಿತ ಅಪರಾಧ ಚಟುವಟಿಕೆಗಳ ಬಗ್ಗೆ ಫ್ರಾನ್ಸ್‌ 2024ರಲ್ಲಿ ತನಿಖೆ ಆರಂಭಿಸಿತ್ತು. ಅದೇ ವರ್ಷ, ಟೆಲಿಗ್ರಾಮ್‌ ಚಾಟ್‌ರೂಮ್‌ಗಳಲ್ಲಿ ಡೀಪ್‌ಸೀಕ್‌ ಮೂಲಕ ರೂಪಿಸಲಾದ ಮಹಿಳೆಯರ ಅಸಭ್ಯ ವಿಡಿಯೊ, ಫೋಟೊಗಳು ದಕ್ಷಿಣ ಕೊರಿಯಾದಲ್ಲಿ ಕೋಲಾಹಲ ಸೃಷ್ಟಿಸಿದ್ದವು. ಸ್ಪೇನ್‌ನಲ್ಲಿಯೂ ಖಾಸಗಿತನಕ್ಕೆ ಸಂಬಂಧಿಸಿದಂತೆ ಆಯಪ್‌ ಬಳಕೆಯ ಮೇಲೆ ತಾತ್ಕಾಲಿಕ ನಿರ್ಬಂಧ ಹೇರಲಾಗಿತ್ತು.

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ವಿಚಾರಗಳನ್ನು ಹಂಚಿಕೊಳ್ಳಲಾಗುತ್ತಿದೆ ಎಂಬ ಸಾಕ್ಷ್ಯಾಧಾರಗಳು ಲಭ್ಯವಾಗುತ್ತಿದ್ದಂತೆ ಬ್ರಿಟನ್‌ನಲ್ಲಿಯೂ ತನಿಖೆ ಆರಂಭವಾಗಿತ್ತು. ಆದರೆ, ಆರೋಪಗಳನ್ನು ನಿರಾಕರಿಸಿರುವ ಟೆಲಿಗ್ರಾಮ್‌, 2018ರಿಂದ ಬಳಕೆದಾರರ ಗುರುತು ಪತ್ತೆಗೆ ಸಂಬಂಧಿಸಿದ ಅಲ್ಗಾರಿದಮ್‌ಗಳಲ್ಲಿ ಬದಲಾವಣೆ ಮಾಡಲಾಗಿದೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ವಿಚಾರಗಳ ಹರಡುವಿಕೆಯನ್ನು ನಿರ್ಬಂಧಿಸಲಾಗಿದೆ ಎಂದು ಹೇಳಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries