HEALTH TIPS

ಬಾಹ್ಯಾಕಾಶದಲ್ಲಿ ತೇಲಾಡಿದ ಫಿಫಾ ವಿಶ್ವಕಪ್ ಚೆಂಡು: ನಾಸಾದಿಂದ ಅಧ್ಯಯನ

 2026ರ ಫಿಫಾ ವಿಶ್ವಕಪ್‌ನ ಅಧಿಕೃತ 'ಟ್ರಿಯಾಂಡ್' ಬಾಲ್ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿದೆ. ಗಗನಯಾತ್ರಿಗಳು ಶೂನ್ಯ ಗುರುತ್ವಾಕರ್ಷಣೆಯಲ್ಲಿ ಈ ಚೆಂಡಿನ ಚಲನಶೀಲತೆ ಮತ್ತು ಅದರ ಕಾರ್ಯಕ್ಷಮತೆಯ ಬಗ್ಗೆ ಪ್ರಯೋಗವನ್ನು ನಡೆಸುತ್ತಿದ್ದಾರೆ. ಈ ಬಗ್ಗೆ ನಾಸಾ ಮಾಹಿತಿ ಹಂಚಿಕೊಂಡಿದೆ. 


ಈ ಕುರಿತು ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ವಿಡಿಯೊ ಒಂದನ್ನು ಹಂಚಿಕೊಂಡಿದೆ. 'ಬಾಹ್ಯಾಕಾಶ ಸಂಶೋಧನೆಯಿಂದ ಕ್ರೀಡೆ ಮತ್ತು ದೈನಂದಿನ ಜೀವನದಲ್ಲಿ ಹೊಸ ಆವಿಷ್ಕಾರಗಳು ಬದಲಾವಣೆಗಳನ್ನು ಹೇಗೆ ತರಬಹುದು ಎಂದು ತೋರಿಸಿ, ಮುಂದಿನ ಪೀಳಿಗೆಗೆ ಸ್ಪೂರ್ತಿಯಾಗಲು ನಾವು ಕೆಲಸ ಮಾಡುತ್ತಿದ್ದೇವೆ' ಎಂದಿದೆ.

'ಕಡಿಮೆ ಗುರುತ್ವಾಕರ್ಷಣೆಯಲ್ಲಿ ಈ ಫುಟ್‌ಬಾಲ್ ಹೇಗೆ ಚಲಿಸುತ್ತದೆ ಮತ್ತು ಅದರ ಕಾರ್ಯಕ್ಷಮತೆ ಹೇಗಿರುತ್ತದೆ ಎಂಬುದನ್ನು ತಿಳಿಸಲು ಪ್ರಯೋಗಗಳನ್ನು ನಡೆಸುತ್ತಿದ್ದಾರೆ. ಈ ಪ್ರಯೋಗ ಮಾಡಲು ಗಗನಯಾತ್ರಿಗಳು ಅಡಿಡಾಸ್ ಕಂಪನಿ ತಯಾರಿಸಿದ ಈ 'ಟ್ರಿಯಾಂಡ್' ಫುಟ್‌ಬಾಲ್ ಅನ್ನು ಬಳಸಿದ್ದಾರೆ. 2019 ರಲ್ಲೇ ನಡೆದಿದ್ದ ಒಂದು ಅಧ್ಯಯನವನ್ನು ಈ ಮೂಲಕ ಮತ್ತೆ ಮರುಸೃಷ್ಟಿ ಮಾಡಿದ್ದಾರೆ.

ಫುಟ್‌ಬಾಲ್ ಆಟದಲ್ಲಿ ಸರಿಯಾದ ಸಮತೋಲನ ಇದ್ದರೆ ಏನಾಗಬಹುದು ಮತ್ತು ಇಲ್ಲದಿದ್ದರೆ ಏನಾಗುತ್ತದೆ ಎಂದು ತೋರಿಸಲು ಗಗನಯಾತ್ರಿಗಳು ಈ ಪ್ರಯೋಗವನ್ನು ಮತ್ತೆ ಮರುಕಳಿಸಿದ್ದಾರೆ. ಚೆಂಡಿನ ಒಳಗಿರುವ ಸೆನ್ಸಾರ್‌ಗಳಂತಹ ಹೊಸ ತಂತ್ರಜ್ಞಾನಗಳು ಆಟಗಾರರ ಪ್ರದರ್ಶನಕ್ಕೆ ಹೇಗೆ ಸಹಕರಿಸಲಿದೆ ಎಂಬುದನ್ನು ಅರ್ಥೈಸಲು ಈ ಪ್ರಯೋಗ ಸಹಕರಿಸಿದೆ' ಎಂದು ಹೇಳಿದೆ.

ಬಾಹ್ಯಾಕಾಶಕ್ಕೆ ಒಯ್ದಿರುವ ಈ ಚೆಂಡು ಈ ಬಾರಿಯ ಫುಟ್‌ಬಾಲ್ ವಿಶ್ವಕಪ್ ಅನ್ನು ಜಂಟಿಯಾಗಿ ಆಯೋಜಿಸುತ್ತಿರುವ ಕೆನಡಾ, ಮೆಕ್ಸಿಕೊ ಮತ್ತು ಅಮೆರಿಕ ಮೂರು ದೇಶಗಳನ್ನು ಪ್ರತಿನಿಧಿಸುತ್ತದೆ.

ಈ ಚೆಂಡಿನ ಮೇಲಿರುವ ಕೆಂಪು, ಹಸಿರು ಮತ್ತು ನೀಲಿ ಬಣ್ಣು ಪಂದ್ಯಾವಳಿ ನಡೆಸುವ ಮೂರು ದೇಶಗಳ ಸಂಕೇತವಾಗಿದೆ. ಈ ಚೆಂಡು ನಾಲ್ಕು ಭಾಗಗಳ ವಿನ್ಯಾಸ ಹೊಂದಿದೆ. ಕೆನಡಾದ 'ಮ್ಯಾಪಲ್ ಲೀಫ್', ಮೆಕ್ಸಿಕೊದ 'ಈಗಲ್' ಅಮೆರಿಕದ 'ಸ್ಟಾರ್' ಗುರುತನ್ನು ಇದರಲ್ಲಿ ಕಾಣಬಹುದು' ಎಂದಿದೆ.

ಈ ಚೆಂಡಿನೊಳಗೆ ಸುಧಾರಿತ 'ಕನೆಕ್ಟೆಡ್-ಬಾಲ್' ತಂತ್ರಜ್ಞಾನವಿದ್ದು, ಇದರಲ್ಲಿ 500ಊz ಚಲನೆಯ ಸೆನ್ಸಾರ್ ಚಿಪ್ ಅಳವಡಿಸಲಾಗಿದೆ. ಇದು ಚೆಂಡಿನ ಚಲನೆಯ ನಿಖರವಾದ ಮಾಹಿತಿಯನ್ನು ನೇರವಾಗಿ ವಿಡಿಯೊ ಸಹಾಯಕ ರೆಫರಿ ವ್ಯವಸ್ಥೆಗೆ ಕಳುಹಿಸುತ್ತದೆ. ಇದರಿಂದ ರೆಫರಿಗಳಿಗೆ ಆಫ್‌ಸೈಡ್ ಮತ್ತು ಪಂದ್ಯದ ಇತರ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಸುಲಭವಾಗುತ್ತದೆ' ಎಂದು ತಿಳಿಸಿದೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries