HEALTH TIPS

ನೀಟ್ ಮರುಪರೀಕ್ಷೆ: ಟೆಲಿಗ್ರಾಮ್ ಆಯಪ್ ಮೇಲಿನ ನಿರ್ಬಂಧ ತೆರವು

ನವದೆಹಲಿ: ಜೂನ್‌ 21ರಂದು ನಡೆದಿದ್ದ ನೀಟ್‌-ಯುಜಿ ಮರುಪರೀಕ್ಷೆ ಹಿನ್ನೆಲೆಯಲ್ಲಿ ಟೆಲಿಗ್ರಾಮ್ ಮೇಲೆ ವಿಧಿಸಲಾಗಿದ್ದ ನಿರ್ಬಂಧವನ್ನು ಕೇಂದ್ರ ಸರ್ಕಾರವು ತೆರವುಗೊಳಿಸಿದೆ. 

ಇದರೊಂದಿಗೆ ಗೂಗಲ್ ಪ್ಲೇ-ಸ್ಟೋರ್‌ನಲ್ಲಿ ಟೆಲಿಗ್ರಾಮ್ ಆಯಪ್ ಅನ್ನು ಪುನಃಸ್ಥಾಪಿಸಲಾಗಿದೆ.

ಅಲ್ಲದೆ ಮಂಗಳವಾರ ಬೆಳಿಗ್ಗೆಯಿಂದ ಬಳಕೆದಾರರಿಗೆ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತಿದೆ.

ಮತ್ತೊಂದೆಡೆ ಆಯಪಲ್ ಆಯಪ್‌ಸ್ಟೋರ್‌ನಲ್ಲಿ ಬೆಳಿಗ್ಗೆ 10 ತನಕ ಬಳಕೆದಾರರಿಗೆ ಟೆಲಿಗ್ರಾಮ್ ಲಭ್ಯವಿರಲಿಲ್ಲ. ಇನ್ನು ಕೆಲವು ಬಳಕೆದಾರರು ಟೆಲಿಗ್ರಾಮ್ ಆಯಪ್ ಬಳಕೆಗೆ ಸಿಗುತ್ತಿಲ್ಲ ಎಂದು ದೂರಿದ್ದಾರೆ.

ಈ ಮೊದಲು ಟೆಲಿಗ್ರಾಮ್ ಆಯಪ್ ಅನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿರುವ ಕೇಂದ್ರ ಸರ್ಕಾರದ ನಿರ್ಧಾರ ಸರಿಯಾಗಿದೆ ಎಂದಿದ್ದ ದೆಹಲಿ ಹೈಕೋರ್ಟ್‌, ಈ ಬಗ್ಗೆ ಟೆಲಿಗ್ರಾಮ್ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries