ಕಾಸರಗೋಡು: ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಎಂಜಿಎನ್ಆರ್ಜಿ)ಯ ಕಾಸರಗೋಡು ಜಿಲ್ಲೆಯ ಓಂಬುಡ್ಸ್ಮನ್ ಆಗಿ ಮುಳಿಯಾರ್ ನೆಕ್ರಂಪಾರೆಯ ಸಿ ರಾಜಾರಾಮಅಧಿಕಾರ ವಹಿಸಿಕೊಂಡಿದ್ದಾರೆ. ಅಸ್ಸಾಂನ ರಾಜ್ಯ ಲೆಕ್ಕಪರಿಶೋಧನಾ ಇಲಾಖೆಯಿಂದ ಜಂಟಿ ನಿರ್ದೇಶಕರಾಗಿ ಸೇವೆಯಿಂದ ನಿವೃತ್ತರಾದ ನಂತರ ಇವರು ಕೇರಳ ಸರ್ಕಾರದ ಲೆಕ್ಕಪರಿಶೋಧನಾ ಇಲಾಖೆಯಲ್ಲಿ ಪ್ರಮುಖ ತಜ್ಞರಾಗಿ ಸೇವೆ ಸಲ್ಲಿಸುತ್ತಿದ್ದರು.
ಜಿಲ್ಲೆಯಲ್ಲಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಆರಂಭಿಕ ಹಂತದಲ್ಲಿ ಅಧಿಕಾರಿಗಳು, ಕಾರ್ಮಿಕರು ಮತ್ತು 'ಸಂಗಾತಿಗಳಿಗೆ' ತರಬೇತಿ ನೀಡುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಇವರು ಸಾಕ್ಷರತಾ ಆಂದೋಲನ, ಸಮುದಾಯ ಯೋಜನಾ ಸಂಯೋಜಕ ಮತ್ತು ಕುಟುಂಬಶ್ರೀ ಮಿಷನ್ ಸಂಯೋಜಕರಾಗಿ ಕೆಲಸ ನಿರ್ವಹಿಸಿದ್ದಾರೆ. ಕೇರಳ ಇನ್ಸ್ಟಿಟ್ಯೂಟ್ ಓಫ್ ಲೋಕಲ್ ಅಡ್ಮಿನಿಸ್ಟ್ರೇಶನ್(ಕೆಐಎಲ್ಎ)ಶಿಕ್ಷಕ, ಕಾರಡ್ಕ ಬ್ಲಾಕ್ ಪಂಚಾಯಿತಿ ಯೋಜನಾ ಸಮಿತಿ ಉಪಾಧ್ಯಕ್ಷರಾಗಿ ಮತ್ತು ಜಿಲ್ಲಾ ಪಂಚಾಯತ್ ಯೋಜನಾ ಸಮಿತಿಯ ಸದಸ್ಯರಾಗಿಯೂ ಕೆಲಸ ನಿರ್ವಹಿಸುತ್ತಿದ್ದಾರೆ.



