ಕುಂಬಳೆ: ಸೂರಂಬೈಲು ಸರ್ಕಾರಿ ಪ್ರೌಢಶಾಲೆಯಲ್ಲಿ ಖಾಲಿ ಇರುವ ಹೈಸ್ಕೂಲ್ ವಿಭಾಗದ ಇಂಗ್ಲೀಷ್ ಶಿಕ್ಷಕ(ಎಚ್.ಎಸ್.ಟಿ. ಇಂಗ್ಲೀಷ್) ಹುದ್ದೆಗಾಗಿ ದಿನವೇತನ ಆಧಾರದಲ್ಲಿ ನೇಮಕಾತಿ ನಡೆಸಲು ಸಂದರ್ಶನವು ಜೂ.27 ಶನಿವಾರ ಪೂವಾಹ್ನ 10.30ಕ್ಕೆ ಶಾಲಾ ಕಛೇರಿಯಲ್ಲಿ ನಡೆಯಲಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ತಮ್ಮ ಅಸಲಿ ದಾಖಲೆ ಪತ್ರಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬಹುದು. ಹೆಚ್ಚಿನ ಮಾಹಿತಿಗಾಗಿ 9495094859 ಎಂಬ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.


