HEALTH TIPS

Oman | ಸಮುದ್ರದಲ್ಲಿ ಮುಳುಗುತ್ತಿದ್ದ 14 ಭಾರತೀಯರ ರಕ್ಷಣೆ: ಅಮೆರಿಕ

 ಮಸ್ಕತ್ : ತಾಂತ್ರಿಕ ವೈಫಲ್ಯದಿಂದ ಒಮಾನ್ ಕರಾವಳಿಯಲ್ಲಿ ಮುಳುಗುತ್ತಿದ್ದ ಭಾರತೀಯ ವ್ಯಾಪಾರಿ ಹಡಗು ವಿರಾಟ್-1ನಲ್ಲಿದ್ದ 14 ನಾವಿಕರನ್ನು ರಕ್ಷಿಸಲಾಗಿದೆ ಎಂದು ಅಮೆರಿಕದ ನೌಕಾಪಡೆ ಹೇಳಿದೆ. ರಕ್ಷಿಸಲ್ಪಟ್ಟ ಎಲ್ಲ ಭಾರತೀಯ ನಾವಿಕರು ಸುರಕ್ಷಿತವಾಗಿದ್ದಾರೆ ಹಾಗೂ ಉತ್ತಮ ಆರೋಗ್ಯದಿಂದಿದ್ದಾರೆ. 


ಎಲ್ಲರನ್ನೂ ಮುಂಬೈಗೆ ಬರುತ್ತಿದ್ದ ಹಡಗಿಗೆ ಸ್ಥಳಾಂತರಿಸಲಾಗಿದೆ ಎಂದು ಒಮಾನ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸ್ಪಷ್ಟಪಡಿಸಿದೆ.

"ಅಮೆರಿಕದ ನೌಕಾಪಡೆ ಸಿಬ್ಬಂದಿ ಮಧ್ಯಪ್ರಾಚ್ಯದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಜೂನ್ 14ರಂದು ಅರಬ್ಬಿ ಸಮುದ್ರದಲ್ಲಿ ಅತಂತ್ರರಾಗಿದ್ದ 14 ಭಾರತೀಯ ಸಾಗರಯಾನಿಗಳನ್ನು ರಕ್ಷಿಸಿದ್ದಾರೆ" ಎಂದು ಸೆಂಟ್ರಲ್ ಕಮಾಂಡ್ ಎಕ್ಸ್ ಪೋಸ್ಟ್‌ನಲ್ಲಿ ಹೇಳಿದೆ. ಅಮೆರಿಕದ ನೌಕಾಪಡೆಯ ಸೆಂಟ್ರಲ್ ಕಮಾಂಡ್/ಯುಎಸ್ 5ನೇ ಫ್ಲೀಟ್ ಕಾರ್ಯಾಚರಣೆ ಬಗ್ಗೆ ಮರುಪೋಸ್ಟ್ ಮಾಡಿವೆ.

ನಾವಿಕರು ಅತಂತ್ರರಾಗಿ ಸಿಕ್ಕಿಹಾಕಿಕೊಂಡಿರುವ ಬಗ್ಗೆ ಕರೆ ಸ್ವೀಕರಿಸಿದ ತಕ್ಷಣ ಅಮೆರಿಕ ನೌಕಾಪಡೆಯ ಪಿ-8 ವಿಮಾನ ಸ್ಥಳಕ್ಕೆ ಧಾವಿಸಿ ಶೋಧನೆ ಮತ್ತು ರಕ್ಷಣಾ ಕಿಟ್‌ಗಳನ್ನು ಕೆಳಕ್ಕೆ ಇಳಿಬಿಟ್ಟಿದ್ದು, 14 ನಾವಿಕರು ಅದನ್ನು ಏರಿ ಪಾರಾದರು ಎಂದು ಕಾರ್ಯಾಚರಣೆ ಬಗ್ಗೆ ವಿವರ ನೀಡಿದೆ.

ಕರಾವಳಿಯ ಅಧಿಕಾರಿಗಳು ಮತ್ತು ಭಾರತೀಯ ನೌಕಾಪಡೆಗೆ ಈ ಬಗ್ಗೆ ಸಂದೇಶ ರವಾನಿಸಿ, ರಾಸ್ ಅಲ್ ಹದ್‌ನಿಂದ 80 ನಾಟಿಕಲ್ ಮೈಲು ದೂರದಲ್ಲಿ ಭಾರತೀಯ ಹಡಗು ಮುಳುಗುತ್ತಿರುವ ಬಗ್ಗೆ ಮಾಹಿತಿ ನೀಡಲಾಗಿದೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries