ನವದೆಹಲಿ (PTI): ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿಯು (ಸಿಬಿಎಸ್ಇ) ಪ್ರಸಕ್ತ ವರ್ಷ 10ನೇ ತರಗತಿಯ ವಿದ್ಯಾರ್ಥಿಗಳಿಗೆ ತ್ರಿಭಾಷಾ ನೀತಿಯಿಂದ ವಿನಾಯಿತಿ ನೀಡಿದೆ.
ತ್ರಿಭಾಷಾ ನೀತಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಮಂಡಳಿ ಸೋಮವಾರ ಹೊಸ ಮಾರ್ಗಸೂಚಿ ಹೊರಡಿಸಿದ್ದು, '2026-27ನೇ ಸಾಲಿನ 10ನೇ ತರಗತಿ ವಿದ್ಯಾರ್ಥಿಗಳಿಗೆ ಯಾವುದೇ ಬದಲಾವಣೆ ಇರುವುದಿಲ್ಲ.
ಅವರು ಎರಡು ಭಾಷೆಗಳನ್ನು ಓದುವ ಹಳೆ ವ್ಯವಸ್ಥೆಯಲ್ಲಿಯೇ ಮುಂದುವರಿಯಲಿದ್ದಾರೆ. ಮೂರನೇ ಭಾಷೆ ತೆಗೆದುಕೊಳ್ಳುವ ಅಗತ್ಯವಿಲ್ಲ' ಎಂದು ಹೇಳಿದೆ.
l ಈ ವರ್ಷ 9ನೇ ತರಗತಿಯಲ್ಲಿ ಇರುವ ವಿದ್ಯಾರ್ಥಿಗಳಿಗೆ ಒಂದು ಬಾರಿಯ ಸಡಿಲಿಕೆ ನೀಡಲಾಗಿದೆ. ಅಂದರೆ ಅವರು ಈಗಾಗಲೇ ಓದುತ್ತಿರುವ ಎರಡು ವಿದೇಶಿ ಭಾಷೆಯನ್ನು ಮುಂದುವರಿಸಬಹುದು. ಅದರ ಜತೆಗೆ ಒಂದು ಭಾರತೀಯ ಭಾಷೆಯನ್ನು ಕಡ್ಡಾಯವಾಗಿ ಕಲಿಯಬೇಕು
l ಪ್ರಸಕ್ತ ವರ್ಷ 7ರಿಂದ 9ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು 10ನೇ ತರಗತಿಗೆ ಹೋದಾಗ, ಅವರ ಬೋರ್ಡ್ ಪರೀಕ್ಷೆಗಳಿಗೆ ಮೂರನೇ ಭಾಷೆ ಇರುವುದಿಲ್ಲ.

