HEALTH TIPS

2021ರಿಂದ 2025ರ ವರೆಗಿನ ʼಶ್ರೀವಿಜಯ ಸಾಹಿತ್ಯ ದತ್ತಿ ಪ್ರಶಸ್ತಿ' ಪುರಸ್ಕೃತರ ಪಟ್ಟಿ ಪ್ರಕಟ

ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಠಿತ `ಶ್ರೀವಿಜಯ ಸಾಹಿತ್ಯ ದತ್ತಿ ಪ್ರಶಸ್ತಿ'ಗೆ 2021ರಿಂದ 2025ರ ವರೆಗೆ ಆಯ್ಕೆಯಾಗಿರುವ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, 2021ನೇ ಸಾಲಿಗೆ ಮಂಡ್ಯದ ಟಿ.ಸತೀಶ್ ಜವರೇಗೌಡ ಮತ್ತು ಮಂಗಳೂರಿನ ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಆಯ್ಕೆಯಾಗಿದ್ದಾರೆ.
2022ನೇ ಸಾಲಿಗೆ ದಕ್ಷಿಣ ಕನ್ನಡದ ವಿಲ್ಸನ್ ರೋಶನ್ ಸಿಕ್ವೇರಾ ಮತ್ತು ಹಾಸನದ ಮಮತಾ ಅರಸೀಕೆರೆ (ಬಿ.ಎ.ಮಮತ), 2023ನೇ ಸಾಲಿಗೆ ಕಲಬುರಗಿಯ ಡಾ.ಗಿರೀಶ್ ಚಂದ್ರಕಾಂತ್ ಜಕಾಪುರೆ ಮತ್ತು ಧಾರವಾಡ ಹೆಬಸೂರ ರಂಜಾನ್, 2024ನೇ ಸಾಲಿಗೆ ಬೆಂಗಳೂರಿನ ಡಾ.ಬೇಲೂರು ರಘುನಂದನ ಮತ್ತು ಕೋಲಾರದ ಡಾ.ನೇತ್ರಾವತಿ ಕೆ.ವಿ. ಹಾಗೂ 2025ನೇ ಸಾಲಿಗೆ ರಾಯಚೂರಿನ ಲಕ್ಷ್ಮಣ್ ಕನಕುಂಟ್ಲಾ ಮತ್ತು ಹಾವೇರಿಯ ಡಾ.ರವಿ ಎಂ.ಸಿದ್ಲಿಪುರ ಅವರನ್ನು ಆಯ್ಕೆ ಮಾಡಲಾಗಿದೆ.
ಕಸಾಪಗೆ ಶತಮಾನೋತ್ಸವ ತುಂಬುತ್ತಿರುವ ಹಿನ್ನಲೆಯಲ್ಲಿ ತನ್ನ ಸಂಪನ್ಮೂಲಗಳಿಂದ 20ಲಕ್ಷ ರೂ.ಗಳ ಸ್ಥಾಯಿ ನಿಧಿಯನ್ನು ಸ್ಥಾಪಿಸಿ, ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸಮೃದ್ಧ ಹಾಗೂ ಮೌಲಿಕವಾದ ಕೊಡುಗೆ ನೀಡಿದ 45 ವಯಸ್ಸಿನ ಮಿತಿಯೊಳಗಿರುವ ಇಬ್ಬರು ಸಾಹಿತಿಗಳಿಗೆ 'ಶ್ರೀವಿಜಯ ಸಾಹಿತ್ಯ ದತ್ತಿ ಪ್ರಶಸ್ತಿ'ಯನ್ನು ರಾಜ್ಯ ಮಟ್ಟದಲ್ಲಿ ನೀಡುತ್ತಾ ಬಂದಿದ್ದು, ಈ ಪ್ರಶಸ್ತಿಯು ತಲಾ 60ಸಾವಿರ ರೂ.ನಗದು, ಸ್ಮರಣಿಕೆ ಹಾಗೂ ಪ್ರಶಸ್ತಿ ಫಲಕವನ್ನು ಹೊಂದಿರುತ್ತದೆ ಎಂದು ಕಸಾಪ ಆಡಳಿತಾಧಿಕಾರಿ ಕೆ.ಎ.ದಯಾನಂದ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries