HEALTH TIPS

ಅಮೆರಿಕಾದ ಅಸ್ಮಿತೆಯ ಮೇಲೆ ದಾಳಿ ನಡೆಯುತ್ತಿದೆ: ಡೊನಾಲ್ಡ್ ಟ್ರಂಪ್ ಎಚ್ಚರಿಕೆ

ವಾಶಿಂಗ್ಟನ್: ಇತ್ತೀಚಿನ ವರ್ಷಗಳಲ್ಲಿ ಅಮೆರಿಕನ್ ಮನೋಭಾವವನ್ನು ನಮ್ಮಿಂದ ಕಿತ್ತುಹಾಕಲು ಮತ್ತು ನಮ್ಮ ಇತಿಹಾಸದಿಂದ ನಮ್ಮನ್ನು ದೂರ ಮಾಡಲು ಪ್ರಯತ್ನಗಳು ನಡೆದಿವೆ. ಅಮೆರಿಕಾದ ಅಸ್ಮಿತೆಯು ಈಗ ಮತ್ತೆ ದಾಳಿಗೆ ಒಳಗಾಗಿದ್ದು ಈ ಬಗ್ಗೆ ಅಮೆರಿಕನ್ನರು ಎಚ್ಚರಿಕೆ ವಹಿಸಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಅಮೆರಿಕ ಶನಿವಾರ ತನ್ನ 250ನೇ ಸ್ವಾತಂತ್ರ್ಯೋತ್ಸವದ ಐತಿಹಾಸಿಕ ಮೈಲಿಗಲ್ಲನ್ನು ಆಚರಿಸುತ್ತಿದೆ. ಶುಕ್ರವಾರ ತಡರಾತ್ರಿ, ಅಧ್ಯಕ್ಷರು ಮೌಂಟ್ ರಶ್‍ಮೋರ್ ರಾಷ್ಟ್ರೀಯ ಸ್ಮಾರಕಕ್ಕೆ ಭೇಟಿ ನೀಡಿದ್ದರು. ಅಲ್ಲಿ ಗ್ರಾನೈಟ್ ಶಿಲೆಯಲ್ಲಿ ಕೆತ್ತಲಾದ ನಾಲ್ಕು ಪ್ರಸಿದ್ಧ ಮಾಜಿ ಅಧ್ಯಕ್ಷರಾದ ಜಾರ್ಜ್ ವಾಷಿಂಗ್ಟನ್, ಥಾಮಸ್ ಜೆಫರ್ಸನ್, ಅಬ್ರಹಾಂ ಲಿಂಕನ್ ಮತ್ತು ಥಿಯೋಡರ್ ರೂಸ್ವೆಲ್ಟ್ ಅವರ ದೈತ್ಯ ಮೂರ್ತಿಗಳ ಅಡಿಯಲ್ಲಿ ನಿಂತು ಭಾಷಣ ಮಾಡಿದರು.

`ನಮ್ಮ ನೆಲದಲ್ಲಿ ಕಮ್ಯುನಿಸ್ಟ್ ಪಿಡುಗು ಮತ್ತೆ ತಲೆಯೆತ್ತುತ್ತಿದೆ. ಕಮ್ಯುನಿಸ್ಟರ ಅಬ್ಬರ ದೇಶಕ್ಕೆ ದೊಡ್ಡ ದೊಡ್ಡ ಆಪತ್ತು. ಕಮ್ಯುನಿಸಂ ಸಿದ್ಧಾಂತವು ಅಮೆರಿಕದ ಇತಿಹಾಸವನ್ನು ವ್ಯಾಖ್ಯಾನಿಸಿರುವ ಬದುಕು ಮತ್ತು ಸ್ವಾತಂತ್ರ್ಯದ ತತ್ವಗಳಿಗೆ ಮೂಲಭೂತವಾಗಿ ಹೊಂದಿಕೆಯಾಗುವುದಿಲ್ಲ ಎಂದು ಟ್ರಂಪ್ ಪ್ರತಿಪಾದಿಸಿದರು. ನೀವು ಇಲ್ಲೇ ಹುಟ್ಟಬೇಕಾಗಿಲ್ಲ, ಆದರೆ ನಾವು ಇಲ್ಲಿ ಏನು ನಿರ್ಮಿಸಿದ್ದೇವೆಯೋ ಅದನ್ನು ನೀವು ಪ್ರೀತಿಸಬೇಕು ಎಂದು ವಲಸಿಗರನ್ನು ಉದ್ದೇಶಿಸಿ ಟ್ರಂಪ್ ಹೇಳಿರುವುದಾಗಿ ವರದಿಯಾಗಿದೆ.

ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುತ್ತಿರುವ ತೀವ್ರವಾದ ಬಿಸಿಗಾಳಿಯನ್ನು ಎದುರಿಸುತ್ತಿದ್ದರೂ ಸಹ, ಅಮೆರಿಕ ಶನಿವಾರ ದೇಶಾದ್ಯಂತ ಸಂಭ್ರಮಾಚರಣೆಗಳೊಂದಿಗೆ ತನ್ನ ಸ್ವಾತಂತ್ರ್ಯದ 250 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ.

ಈ ಐತಿಹಾಸಿಕ ಮೈಲಿಗಲ್ಲು ಸ್ವಾತಂತ್ರ್ಯ ಘೋಷಣೆಗೆ ಸಹಿ ಹಾಕಿದ ನೆನಪನ್ನು ಸ್ಮರಿಸುತ್ತದೆ, ಮತ್ತು ಇದರ ಅಂಗವಾಗಿ ದೇಶದಾದ್ಯಂತ ವಿವಿಧ ಕಾರ್ಯಕ್ರಮಗಳು ನಡೆಯುತ್ತಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries