ಬದಿಯಡ್ಕ: ಪೆರಡಾಲ ಶ್ರೀಉದನೇಶ್ವರ ದೇವಸ್ಥಾನದ ಆವರಣದಲ್ಲಿ "ಶ್ರೀ ಉದನೇಶ್ವರ ಹಸಿರು ನಮನೋತ್ಸವ" ಎಂಬ ವನಮಹೋತ್ಸವ ಕಾರ್ಯಕ್ರಮಕ್ಕೆ ಇತ್ತೀಚೆಗೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.
ದೇವಸ್ಥಾನದ ಆಡಳಿತ ಸಮಿತಿ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಆಶ್ರಯದಲ್ಲಿ "ಹಸಿರು ನೆಟ್ಟು ಪುಣ್ಯ ಸಂಪಾದಿಸೋಣ, ಉದನೇಶ್ವರ ಕೃಪೆಗೆ ಪಾತ್ರರಾಗೋಣ" ಎಂಬ ಘೋಷವಾಕ್ಯದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ವಕೀಲ. ವೆಂಕಟ್ರಮಣ ಭಟ್ ಚಂಬಲ್ತಿಮಾರು ಮಾತನಾಡಿ, ದೇವರ ಸೇವೆ ಜೊತೆಗೆ ಪ್ರಕೃತಿ ಸೇವೆ ಮಾಡುವುದು ನಮ್ಮ ಕರ್ತವ್ಯ. ಈ ಹಸಿರು ನಮನೋತ್ಸವವನ್ನು ಪ್ರತಿ ವರ್ಷ ಆಚರಿಸಿ, ದೇವರ ಅನುಗ್ರಹಕ್ಕೆ ಪಾತ್ರರಾಗೋಣ ಎಂದು ಕರೆ ನೀಡಿದರು.
ಮೊಕ್ತೇಸರ, ಬ್ರಹ್ಮಕಲಶೋತ್ಸವ ಕಾರ್ಯಾಧ್ಯಕ್ಷ ಜಗನ್ನಾಥ ರೈ ಪೆರಡಾಲ ಗುತ್ತು, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ನಿರಂಜನ್ ರೈ ಪೆರಡಾಲ, ಮೊಕ್ತೇಸರ ಸೀತಾರಾಮ ನವಕಾನ, ಮಾಜಿ ಮೊಕ್ತೇಸರ ಚಂದ್ರಹಾಸ ರೈ ಪೆರಡಾಲ ಗುತ್ತು, ಬ್ರಹ್ಮಕಲಶೋತ್ಸವ ಉಪಾಧ್ಯಕ್ಷ ಜಯಪ್ರಕಾಶ ಶೆಟ್ಟಿ ಕಡಾರು ಬೀಡು, ಜತೆಕಾರ್ಯದರ್ಶಿ ಭಾಸ್ಕರ ಪಂಜಿತ್ತಡ್ಕ, ಡಾ.ಶ್ರೀಶ ಕುಮಾರ್ ಪಂಜಿತ್ತಡ್ಕ, ಸದಾಶಿವ ಪೆರಡಾಲ, ಪುಟ್ಟ ನಾಯ್ಕ, ಮಾತೃ ಸಮಿತಿ ಅಧ್ಯಕ್ಷೆ ವಿನಯ ಜೆ.ರೈ, ಭಕ್ತರು, ಸಂಘಸಂಸ್ಥೆ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ದೇವರಿಗೆ ಪ್ರಿಯವಾದ ಬಿಲ್ವ, ರುದ್ರಾಕ್ಷಿ, ಶಮಿ, ಪಾಲಾಶ, ಅಶೋಕ ಹಾಗೂ ಹಲಸು, ಮಾವು, ತೆಂಗು, ದೀವಿಹಲಸು, ಚಿಕ್ಕು, ಪೇರಳೆ, ಅಬ್ಳುಕ, ದಂತಪಾಲ, ಮಹಾಗನಿ ಮುಂತಾದ ವಿವಿಧ ಜಾತಿಯ ವೃಕ್ಷಗಳ ಸಸಿಗಳನ್ನು ಸಮರ್ಪಣೆ ಮಾಡಲಾಯಿತು. ದೇವಸ್ಥಾನದ ಆವರಣದಲ್ಲಿ ಸಮಿತಿಯ ಪದಾಧಿಕಾರಿಗಳು, ಊರಿನ ಹಿರಿಯರು, ಮಹಿಳೆಯರು ಹಾಗೂ ಯುವಕರು ಸೇರಿ ಸಾಮೂಹಿಕ ವನಮಹೋತ್ಸವಕ್ಕೆ ಚಾಲನೆ ನೀಡಿದರು. ಸಸಿ ನಾಟಿ ಕಾರ್ಯವು ಇನ್ನೂ ಕೆಲವು ದಿನಗಳ ಕಾಲ ಮುಂದುವರಿಯಲಿದ್ದು, ದೇವಸ್ಥಾನದ ಆವರಣವನ್ನು ಸಂಪೂರ್ಣ ಹಸಿರುಮಯ ಮಾಡುವ ಸಂಕಲ್ಪ ಮಾಡಲಾಯಿತು.

.jpg)
.jpg)
