HEALTH TIPS

ಅರೆಕೆರೆ ಬೈಲು ತರವಾಡು ಮನೆ ಇಚ್ಲಂಗೋಡು: ಲಕ್ಕಿ ಕೂಪನ್ ಬಿಡುಗಡೆ

ಉಪ್ಪಳ: ಶ್ರೀ ನಾಗಬ್ರಹ್ಮ ಕೋಮಾರು ಚಾಮುಂಡೇಶ್ವರಿ ದೈವಸ್ಥಾನ ಇಚ್ಲಂಗೋಡು ಕುಟುಂಬಸ್ಥರ ಅರೆಕೆರೆ ಬೈಲು ತರವಾಡು ಮನೆಯ ಗೃಹ ಪ್ರವೇಶವು ಮುಂದಿನ ಜನವರಿ ತಿಂಗಳಲ್ಲಿ ಜರುಗಲಿದ್ದು ಇದರ ಅಂಗವಾಗಿ ವಿಜ್ಞಾಪನಾ ಪತ್ರ ಬಿಡುಗಡೆ ಹಾಗೂ ಲಕ್ಕಿ ಕೂಪನ್ ಬಿಡುಗಡೆ ಕಾರ್ಯಕ್ರಮವು ಕೈಕಂಬ ಪಂಚಮಿ ಹಾಲ್ ನಲ್ಲಿ ಜರಗಿತು.


ತರವಾಡು ಮನೆಯ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ವಿಶ್ವನಾಥ್ ಕುಬಣೂರು ಅವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮವನ್ನು ಹದಿನೆಂಟು ದೈವಸ್ಥಾನಗಳ ದೈವದ ಪಾತ್ರಿಗಳ ಹಾಗೂ ಕಾರ್ನವರ ಒಕ್ಕೂಟದ ಅಧ್ಯಕ್ಷ ಗಣೇಶ್ ಮಂಗಳೂರು ಉದ್ಘಾಟಿಸಿದರು. ಬಡಾಜೆ ದೈವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ಸುಕುಮಾರ ಮಂಗಲ್ಪಾಡಿ ವಿಜ್ಞಾಪನ ಪತ್ರ ಬಿಡುಗಡೆಗೊಳಿಸಿದರು. ಸಾಮಾಜಿಕ ಧಾರ್ಮಿಕ ಯುವ ಮುಂದಾಳು ಮಂಜು ಕಾರ್ಲೆ ಲಕ್ಕಿ ಕೂಪನ್ ಬಿಡುಗಡೆ ಮಾಡಿದರು. 

ಕಾರ್ಯಕ್ರಮದಲ್ಲಿ ಹಿರಿಯರಾದ ಸುಧಾಕರ ಅಂಗಡಿಪದವು, ರಾಜು ಮಂಜೇಶ್ವರ, ನೇಮು ಅಂಗಡಿಪದವು, ರಾಜು ಇಚ್ಲಂಗೋಡು, ಆಡಳಿತ ಸಮಿತಿ ಅಧ್ಯಕ್ಷ ಪರಮೇಶ್ವರ ಅತ್ತಾವರ, ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಆನಂದ ಅಡ್ಕತ್ತಬೈಲ್, ಸೀತಾರಾಮ ಅಂಗಡಿಪದವು, ಮಹಿಳಾ ಸಮಿತಿ ಅಧ್ಯಕ್ಷೆ ಸಜಿನಿ ಸೋಂಕಾಲ್, ಪದಾಧಿಕಾರಿಗಳಾದ ಭಾಸ್ಕರ ಮೊಗ್ರಾಲ್ ಪುತ್ತೂರು, ತುಳಸಿದಾಸ್ ಮಂಜೇಶ್ವರ, ರೋಹಿತ್ ಪಾಂಡೇಶ್ವರ, ಜಿತೇಂದ್ರ ಕುಂಜತ್ತೂರು, ರೀನಾ ಮಂಗಲ್ಪಾಡಿ, ಧನುಷ್ ಪೊಯ್ಯಕಂಡ, ಗಣೇಶ್ ಆರಿಕ್ಕಾಡಿ, ರಘು ಬಂಬ್ರಾಣ, ಶಿವಪ್ರಸಾದ್ ಸೋಂಕಾಲ್, ರವಿ ಇಚ್ಲಂಗೋಡು, ಅಶೋಕ್ ಮೊಗ್ರಾಲ್ ಪುತ್ತೂರು, ಶ್ರೀಜ ಆರಿಕ್ಕಾಡಿ ಮೊದಲಾದವರು ಉಪಸ್ಥಿತರಿದ್ದರು. ಸಮಿತಿ ಸಂಚಾಲಕ ರಾಜೇಶ್ ಕೊಡ್ಲಮೊಗರು ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಅಶೋಕ್ ಕೊಡ್ಲಮೊಗರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries