HEALTH TIPS

ಗಾಝಾದಲ್ಲಿ 'ನರಮೇಧ'ದ ವೇಳೆ ಇಸ್ರೇಲ್‌ ಗೆ ಭಾರತದಿಂದ 2,596 ಶಸ್ತ್ರಾಸ್ತ್ರ ಸಾಗಣೆ: ಅಮ್ನೆಸ್ಟಿ ಆರೋಪ

ನವದೆಹಲಿ: ಗಾಝಾದಲ್ಲಿ ಇಸ್ರೇಲ್ ನಡೆಸಿದ ಮಿಲಿಟರಿ ಕಾರ್ಯಾಚರಣೆಯನ್ನು 'ನರಮೇಧ' ಎಂದು ಉಲ್ಲೇಖಿಸಿರುವ ಅಮ್ನೆಸ್ಟಿ ಇಂಟರ್‌ನ್ಯಾಷನಲ್, ಆ ಅವಧಿಯಲ್ಲಿ ಭಾರತದ ಸರ್ಕಾರಿ ಸ್ವಾಮ್ಯದ ಹಾಗೂ ಖಾಸಗಿ ಕಂಪೆನಿಗಳು ಲಕ್ಷಾಂತರ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಮಿಲಿಟರಿ ಘಟಕಗಳನ್ನು ಒಳಗೊಂಡಿರುವ ಕನಿಷ್ಠ 2,596 ಬಾರಿ ಶಸ್ತ್ರಾಸ್ತ್ರಗಳನ್ನು ಇಸ್ರೇಲ್‌ ಗೆ ರವಾನಿಸಿವೆ ಎಂದು ತನ್ನ ಹೊಸ ವರದಿಯಲ್ಲಿ ಆರೋಪಿಸಿದೆ.


ಗುರುವಾರ ಬಿಡುಗಡೆಗೊಂಡ 'Made in India: The Supply of Weapons and Ammunition to Israel' ದ ಇಸ್ರೇಲ್‌ಗೆ ಕನಿಷ್ಠ 2,596 ಶಸ್ತ್ರಾಸ್ತ್ರ ರವಾನೆಗಳು ನಡೆದಿವೆ ಎಂದು ಅಮ್ನೆಸ್ಟಿ ಆರೋಪಿಸಿದೆ.

ಅಮ್ನೆಸ್ಟಿ ಪ್ರಕಾರ, ಭಾರತದಿಂದ ಇಸ್ರೇಲ್‌ಗೆ ರವಾನೆಯಾದ ಸಾಮಗ್ರಿಗಳಲ್ಲಿ ಮೆಷಿನ್‌ಗನ್ ಘಟಕಗಳು, 155 ಎಂಎಂ ಉನ್ನತ ಸ್ಫೋಟಕ ಫಿರಂಗಿ ಶೆಲ್‌ಗಳು, ಡ್ರೋನ್‌ಗಳಿಗೆ ಬಳಸುವ ಸ್ಫೋಟಕ ಸಿಡಿತಲೆಗಳು ಹಾಗೂ ಶಸ್ತ್ರಸಜ್ಜಿತ ವಾಹನಗಳ ವಿವಿಧ ಘಟಕಗಳು ಸೇರಿವೆ.

ಈ ಪೈಕಿ 155 ಎಂಎಂ ಉನ್ನತ ಸ್ಫೋಟಕ ಫಿರಂಗಿ ಶೆಲ್‌ಗಳನ್ನು ಇಸ್ರೇಲಿ ರಕ್ಷಣಾ ಕಂಪೆನಿ ಎಲ್ಬಿಟ್ ಸಿಸ್ಟಮ್ಸ್‌ಗೆ ಪೂರೈಸಲಾಗಿದೆ ಎಂದು ವರದಿ ಹೇಳಿದೆ.

ಅಲ್ಲದೆ, ಖಾನ್ ಯೂನಿಸ್‌ನಲ್ಲಿ ಪತ್ತೆಯಾಗಿದ್ದ 'ಸ್ಕೈಸ್ಟ್ರೈಕರ್' ಕಾಮಿಕೇಜ್ ಡ್ರೋನ್‌ಗಳಿಗೆ ಬಳಸುವ ಮಾದರಿಯ ಸ್ಫೋಟಕ ಸಿಡಿತಲೆಗಳನ್ನೂ ಭಾರತದಿಂದ ರವಾನಿಸಲಾಗಿದೆ ಎಂದು ಅಮ್ನೆಸ್ಟಿ ಆರೋಪಿಸಿದೆ.

ವರದಿಯ ಪ್ರಕಾರ, ಭಾರತದಿಂದ 5,64,970 ಸ್ಫೋಟಕ ಶಸ್ತ್ರಾಸ್ತ್ರಗಳ ಬಿಡಿಭಾಗಗಳು (ಡ್ರೋನ್‌ಗಳ ಸಿಡಿತಲೆಗಳು, ಫಿರಂಗಿ ಶೆಲ್ ಕೇಸಿಂಗ್‌ಗಳು ಸೇರಿದಂತೆ) ಹಾಗೂ 3,90,516 ಸಣ್ಣ ಶಸ್ತ್ರಾಸ್ತ್ರಗಳ ಬಿಡಿಭಾಗಗಳು ಇಸ್ರೇಲ್‌ಗೆ ರವಾನೆಯಾಗಿವೆ. ಅಲ್ಲದೆ, ಇಸ್ರೇಲಿ ಸಶಸ್ತ್ರ ಪಡೆಗಳಿಗೆ ಪೂರೈಕೆ ಮಾಡುವ ಪ್ರಮುಖ ಕಂಪೆನಿಗಳಿಗೆ 298 ಮಿಲಿಟರಿ ವಾಹನಗಳ ಬಿಡಿಭಾಗಗಳನ್ನೂ ಪೂರೈಸಲಾಗಿದೆ ಎಂದು ವರದಿ ಹೇಳಿದೆ.

2023ರ ಅಕ್ಟೋಬರ್ 7ರಂದು ದಕ್ಷಿಣ ಇಸ್ರೇಲ್ ಮೇಲೆ ಹಮಾಸ್ ನೇತೃತ್ವದಲ್ಲಿ ನಡೆದ ದಾಳಿಯ ಬಳಿಕ ಆರಂಭವಾದ ಗಾಝಾ ಕಾರ್ಯಾಚರಣೆಯಲ್ಲಿ, 2026ರ ಜುಲೈ 29ರ ವೇಳೆಗೆ ಕನಿಷ್ಠ 2,47,387 ಪ್ಯಾಲೆಸ್ಟೀನಿಯನ್ನರು ಮೃತಪಟ್ಟಿದ್ದಾರೆ ಅಥವಾ ಗಾಯಗೊಂಡಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.

ತನ್ನ ಸಂಶೋಧನೆಗಳು 'ಉದ್ದೇಶಪೂರ್ವಕವಾಗಿ ಸಂಪ್ರದಾಯವಾದಿ ವಿಧಾನವನ್ನು' ಆಧರಿಸಿವೆ. ಹೀಗಾಗಿ, ಇಸ್ರೇಲ್‌ನ ಮಿಲಿಟರಿ ಪೂರೈಕೆ ಸರಪಳಿಗೆ ಭಾರತದ ನಿಜವಾದ ಕೊಡುಗೆ ಇದಕ್ಕಿಂತ ಹೆಚ್ಚಿರಬಹುದೆಂಬ ಸಾಧ್ಯತೆಯೂ ಇದೆ ಎಂದು ಅಮ್ನೆಸ್ಟಿ ಹೇಳಿದೆ.

2023ರ ಅಕ್ಟೋಬರ್ ನಂತರ ಭಾರತವು ಇಸ್ರೇಲ್‌ಗೆ ಯುದ್ಧ ಡ್ರೋನ್‌ಗಳು, ಬಾಂಬ್‌ಗಳು ಹಾಗೂ ಶಸ್ತ್ರಾಸ್ತ್ರಗಳ ವಿವಿಧ ಘಟಕಗಳನ್ನು ಪೂರೈಸಿದೆ ಎಂಬ ಹಿಂದಿನ ಆರೋಪಗಳ ನಂತರ, ಗಾಝಾದಲ್ಲಿ ಇಸ್ರೇಲ್ ನಡೆಸಿದ ಮಿಲಿಟರಿ ಕಾರ್ಯಾಚರಣೆಗೆ ಭಾರತವು ಭೌತಿಕ ಬೆಂಬಲ ನೀಡಿದೆ ಎಂದು ಆರೋಪಿಸುವ ಸರಣಿಯಲ್ಲಿನ ಇತ್ತೀಚಿನ ವರದಿ ಇದಾಗಿದೆ.

ಈ ವರ್ಷದ ಮೇ ತಿಂಗಳಲ್ಲಿ ಫೆಲೆಸ್ತೀನ್ ನೇತೃತ್ವದ ಬಾಯ್ಕಾಟ್, ಡೈವೆಸ್ಟ್‌ಮೆಂಟ್ ಅಂಡ್ ಸ್ಯಾಂಕ್ಷನ್ಸ್ (ಃಆS) ಆಂದೋಲನ ಹಾಗೂ 'ನೋ ಹಾರ್ಬರ್ ಫಾರ್ ಜಿನೊಸೈಡ್' ಸಂಘಟನೆಗಳು ಭಾರತದಿಂದ ಇಸ್ರೇಲ್‌ ಗೆ ಮಿಲಿಟರಿ ಸರಬರಾಜುಗಳ ನಿರಂತರ 'ಪ್ರವಾಹ'ದ ಬಗ್ಗೆ ಎಚ್ಚರಿಕೆ ನೀಡಿದ್ದವು.

ಆ ಸಂದರ್ಭದಲ್ಲಿ 'ನೋ ಹಾರ್ಬರ್ ಫಾರ್ ಜಿನೊಸೈಡ್' ಸಂಘಟನೆಯ ವಕ್ತಾರರು, "ಇಸ್ರೇಲ್ ದೊಡ್ಡ ಪ್ರಮಾಣದ ದೇಶೀಯ ಉತ್ಪಾದನಾ ಸಾಮರ್ಥ್ಯ ಹೊಂದಿದ್ದರೂ, ಏರೋಸ್ಪೇಸ್ ಕ್ಷೇತ್ರಕ್ಕೆ ಅಗತ್ಯವಾದ ಉನ್ನತ ತಂತ್ರಜ್ಞಾನದ ವಸ್ತುಗಳು ಹಾಗೂ ಮಿಲಿಟರಿ ಉಕ್ಕಿನಂತಹ ಪ್ರಮುಖ ವಸ್ತುಗಳಿಗಾಗಿ ವಿದೇಶಿ ಪೂರೈಕೆಯನ್ನು ಅವಲಂಬಿಸಿದೆ" ಎಂದು ಮಿಡ್ಲ್ ಈಸ್ಟ್ ಐ (ಒಇಇ)ಗೆ ತಿಳಿಸಿದ್ದರು.

Aljazeera ತನಿಖೆಯ ಉಲ್ಲೇಖ

ಇಸ್ರೇಲಿ ತೆರಿಗೆ ಪ್ರಾಧಿಕಾರದ ಆಮದು ದತ್ತಾಂಶವನ್ನು ಆಧರಿಸಿ ಂಟರಿಚಿzeeಡಿಚಿ ನಡೆಸಿದ ತನಿಖೆಯ ಪ್ರಕಾರ, 2023ರ ಅಕ್ಟೋಬರ್‌ನಿಂದ 2025ರ ಅಕ್ಟೋಬರ್‌ವರೆಗೆ ಇಸ್ರೇಲ್‌ಗೆ ಮಿಲಿಟರಿ ಸಂಬಂಧಿತ ಸರಕುಗಳನ್ನು ರಫ್ತು ಮಾಡಿದ ರಾಷ್ಟ್ರಗಳಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ.

ಆದರೆ, ಈ ದತ್ತಾಂಶವು ಇಸ್ರೇಲ್‌ಗೆ ನಡೆದ ಎಲ್ಲ ಶಸ್ತ್ರಾಸ್ತ್ರ ರವಾನೆಗಳ ಸಂಪೂರ್ಣ ಚಿತ್ರಣವನ್ನು ನೀಡುವುದಿಲ್ಲ. ಹಾಗೆಯೇ, ಭಾರತದಿಂದ ರವಾನೆಯಾದ ಈ ಸಾಮಗ್ರಿಗಳನ್ನು ಗಾಝಾದಲ್ಲಿ ಬಳಸಲಾಗಿದೆ ಎಂಬುದನ್ನೂ ಈ ದತ್ತಾಂಶ ದೃಢಪಡಿಸುವುದಿಲ್ಲ ಎಂದು ಂಟರಿಚಿzeeಡಿಚಿ ಸ್ಪಷ್ಟಪಡಿಸಿದೆ.

HS ಕೋಡ್‌ಗಳ ಆಧಾರದಲ್ಲಿ ವಿಶ್ಲೇಷಣೆ

ಅಮ್ನೆಸ್ಟಿ ತನಿಖಾಧಿಕಾರಿಗಳು ಅಂತರರಾಷ್ಟ್ರೀಯ ಕಸ್ಟಮ್ಸ್ ವರ್ಗೀಕರಣ ವ್ಯವಸ್ಥೆಯಾದ ಹಾರ್ಮೊನೈಸ್ಡ್ ಸಿಸ್ಟಮ್ (ಊS) ಕೋಡ್‌ಗಳ ಅಡಿಯಲ್ಲಿ ವರ್ಗೀಕರಿಸಲಾದ ಸಾಗಣೆಗಳ ಆಧಾರದ ಮೇಲೆ ವಿಶ್ಲೇಷಣೆ ನಡೆಸಿದ್ದಾರೆ.

ಇದರಲ್ಲಿ ಊS ಕೋಡ್ 9301-9307 ಅಡಿಯಲ್ಲಿ ಬರುವ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಹಾಗೂ ಅವುಗಳ ಭಾಗಗಳು ಮತ್ತು ಪರಿಕರಗಳು, ಹಾಗೆಯೇ ಊS ಕೋಡ್ 8710 ಅಡಿಯಲ್ಲಿ ಬರುವ ಶಸ್ತ್ರಸಜ್ಜಿತ ಹಾಗೂ ಯುದ್ಧ ವಾಹನಗಳು ಮತ್ತು ಅವುಗಳ ಘಟಕಗಳು ಸೇರಿವೆ.

ಆಂತರಿಕ ಉತ್ಪನ್ನ ಅಥವಾ ಭಾಗ ಸಂಖ್ಯೆಗಳೊಂದಿಗೆ ಮಾತ್ರ ಗುರುತಿಸಲಾದ ಸಾಗಣೆಗಳನ್ನು, ಅವು ಮಿಲಿಟರಿ ಬಳಕೆಯವೋ ಅಥವಾ ನಾಗರಿಕ ಬಳಕೆಯವೋ ಎಂಬುದನ್ನು ನಿರ್ಧರಿಸಲು ಸಾಧ್ಯವಾಗದ ಕಾರಣ ಹೊರಗಿಡಲಾಗಿದೆ.

ಇದಲ್ಲದೆ, ನೂರಾರು ದ್ವಿ-ಬಳಕೆಯ ಸಣ್ಣ ಶಸ್ತ್ರಾಸ್ತ್ರ ಘಟಕಗಳ ಸಾಗಣೆಗಳು ಹಾಗೂ ಕ್ಷಿಪಣಿ ನಿರೋಧಕ ವ್ಯವಸ್ಥೆಗಳಿಗೆ ಉದ್ದೇಶಿಸಲಾದ ಶಸ್ತ್ರಾಸ್ತ್ರಗಳು, ಭಾಗಗಳು ಮತ್ತು ಮದ್ದುಗುಂಡುಗಳ ಸಾಗಣೆಗಳನ್ನೂ ವರದಿಯಲ್ಲಿ ಸೇರಿಸಲಾಗಿಲ್ಲ.

ಆದ್ದರಿಂದ, ತನ್ನ ಸಂಶೋಧನೆಗಳು ಇಸ್ರೇಲ್‌ನ ಮಿಲಿಟರಿ ಪೂರೈಕೆ ಸರಪಳಿಗೆ ಭಾರತದ ನಿಜವಾದ ಕೊಡುಗೆಯನ್ನು ಕಡಿಮೆ ಅಂದಾಜು ಮಾಡಿರುವ ಸಾಧ್ಯತೆಯಿದೆ ಎಂದು ಅಮ್ನೆಸ್ಟಿ ಹೇಳಿದೆ.

ಸರಕಾರ, ಕಂಪೆನಿಗಳಿಗೆ ಪತ್ರ

ಇಸ್ರೇಲ್‌ಗೆ ಮಿಲಿಟರಿ ಸಾಮಗ್ರಿ ಪೂರೈಸುವಲ್ಲಿ ಸರ್ಕಾರಿ ಸ್ವಾಮ್ಯದ ಉದ್ಯಮಗಳು ಸೇರಿದಂತೆ ಹಲವು ಕಂಪೆನಿಗಳು ಭಾಗಿಯಾಗಿವೆ ಎಂದು ವರದಿ ಹೇಳಿದೆ.

ಈ ಸಂಬಂಧ ಭಾರತೀಯ ಸರಕಾರ ಹಾಗೂ ಒಂಭತ್ತು ಕಂಪೆನಿಗಳಿಗೆ ಪತ್ರ ಬರೆದಿದ್ದರೂ, ವರದಿ ಪ್ರಕಟವಾಗುವ ವೇಳೆಗೆ ಯಾವುದೇ ಉತ್ತರ ಬಂದಿರಲಿಲ್ಲ ಎಂದು ಅಮ್ನೆಸ್ಟಿ ತಿಳಿಸಿದೆ.

'ಭಾರತೀಯ ಅಧಿಕಾರಿಗಳಿಗೆ ತಿಳಿದಿರಲಿಲ್ಲ ಎಂದು ಹೇಳಲಾಗದು'

"ಗಾಝಾದಲ್ಲಿನ ಫೆಲೆಸ್ತೀನ್ ವಿರುದ್ಧ ನರಮೇಧ ಸಂಭವಿಸುವ ಅಪಾಯವಿದೆ ಎಂದು ಅಂತರರಾಷ್ಟ್ರೀಯ ನ್ಯಾಯಾಲಯ (ICJ) ತನ್ನ ತಾತ್ಕಾಲಿಕ ಆದೇಶಗಳಲ್ಲಿ ಗುರುತಿಸಿರುವ ಹಿನ್ನೆಲೆಯಲ್ಲಿ, ಇಸ್ರೇಲ್‌ಗೆ ಶಸ್ತ್ರಾಸ್ತ್ರ ವರ್ಗಾವಣೆಯನ್ನು ಅನುಮತಿಸುವುದು ಹಾಗೂ ಅದನ್ನು ಸುಗಮಗೊಳಿಸುವುದನ್ನು ಮುಂದುವರಿಸುವುದು ಅಂತರರಾಷ್ಟ್ರೀಯ ಕಾನೂನಿನ ಗಂಭೀರ ಉಲ್ಲಂಘನೆಗಳಿಗೆ ಕಾರಣವಾಗುವ ಅಪಾಯವಿದೆ ಎಂಬುದನ್ನು ಭಾರತೀಯ ಅಧಿಕಾರಿಗಳು ತಿಳಿದಿರಲಿಲ್ಲ ಎಂದು ನಂಬಲರ್ಹವಾಗಿ ವಾದಿಸಲು ಸಾಧ್ಯವಿಲ್ಲ" ಎಂದು ಅಮ್ನೆಸ್ಟಿ ಪ್ರಧಾನ ಕಾರ್ಯದರ್ಶಿ ಆಗ್ನೆಸ್ ಕ್ಯಾಲಮಾರ್ಡ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಗಾಝಾದಲ್ಲಿ ಇಸ್ರೇಲಿ ಮಿಲಿಟರಿ ಕಾರ್ಯಾಚರಣೆಯಿಂದ ಸಾವುನೋವುಗಳು ಮುಂದುವರಿದಿದ್ದರೂ, ಇಸ್ರೇಲ್‌ನ ರಕ್ಷಣಾ ವಲಯಕ್ಕೆ ಉದ್ದೇಶಿಸಲಾದ ಘಟಕಗಳು ಹಾಗೂ ಯುದ್ಧಸಾಮಗ್ರಿಗಳನ್ನು ಪೂರೈಸುವ ಮೂಲಕ ಭಾರತೀಯ ಕಂಪೆನಿಗಳು ಲಾಭ ಗಳಿಸುತ್ತಲೇ ಇದ್ದವು ಎಂದು ಅವರು ಆರೋಪಿಸಿದ್ದಾರೆ.

ಭಾರತ-ಇಸ್ರೇಲ್ ರಕ್ಷಣಾ ಸಂಬಂಧಗಳು

ಕಳೆದ ದಶಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ನೇತೃತ್ವದಲ್ಲಿ ಭಾರತ-ಇಸ್ರೇಲ್ ಸಂಬಂಧಗಳು ಮತ್ತಷ್ಟು ಬಲಗೊಂಡಿವೆ.

ಭಾರತವು ಇಸ್ರೇಲಿ ಶಸ್ತ್ರಾಸ್ತ್ರಗಳ ವಿಶ್ವದ ಅತಿದೊಡ್ಡ ಖರೀದಿದಾರ ರಾಷ್ಟ್ರಗಳಲ್ಲಿ ಒಂದಾಗಿದೆ. ಹಲವು ಇಸ್ರೇಲಿ ಶಸ್ತ್ರಾಸ್ತ್ರ ತಯಾರಕ ಕಂಪೆನಿಗಳು, ಭಾರತೀಯ ಕಂಪೆನಿಗಳ ಜಂಟಿ ಸಹಭಾಗಿತ್ವದ ಮೂಲಕ ಭಾರತದಲ್ಲೇ ಉತ್ಪಾದನಾ ಘಟಕಗಳನ್ನು ಸ್ಥಾಪಿಸಿವೆ.

ಈ ವರ್ಷದ ಆರಂಭದಲ್ಲಿ ಪ್ರಧಾನಿ ಮೋದಿ ಅವರ ಇಸ್ರೇಲ್ ಭೇಟಿಯ ಬಳಿಕ ಎರಡೂ ದೇಶಗಳು 'ಶಾಂತಿ, ಸಂಶೋಧನೆ ಮತ್ತು ಸಮೃದ್ಧಿಗಾಗಿ ವಿಶೇಷ ಕಾರ್ಯತಂತ್ರದ ಪಾಲುದಾರಿಕೆ'ಯನ್ನು ನವೀಕರಿಸಿದ್ದವು.

ಬಳಿಕ ಹೊಸ ತಿಳಿವಳಿಕೆ ಒಪ್ಪಂದಗಳು ಹಾಗೂ ಭಾರತವು ಇಸ್ರೇಲ್‌ಗಾಗಿ ಐರನ್ ಡೋಮ್ ಇಂಟರ್‌ಸೆಪ್ಟರ್ ಕ್ಷಿಪಣಿಗಳ ಉತ್ಪಾದನೆ ಕುರಿತು ಚರ್ಚೆಗಳು ಸೇರಿದಂತೆ ಹೊಸ ರಕ್ಷಣಾ ಸಹಭಾಗಿತ್ವಗಳ ಸಾಧ್ಯತೆಗಳ ವರದಿಗಳು ಪ್ರಕಟವಾಗಿವೆ.

ಭಾರತದ ನಿಲುವು

ರಾಜತಾಂತ್ರಿಕವಾಗಿ ಭಾರತವು ಇಸ್ರೇಲ್‌ನ ಪ್ರಮುಖ ಬೆಂಬಲಿಗ ರಾಷ್ಟ್ರಗಳಲ್ಲಿ ಒಂದಾಗಿದೆ.

ನರಮೇಧ ಒಪ್ಪಂದ ಉಲ್ಲಂಘನೆ ಆರೋಪಿಸಿ ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ಇಸ್ರೇಲ್ ವಿರುದ್ಧ ದಕ್ಷಿಣ ಆಫ್ರಿಕಾ ಹೂಡಿರುವ ಪ್ರಕರಣಕ್ಕೆ ಭಾರತವು ಸೇರ್ಪಡೆಯಾಗಲು ನಿರಾಕರಿಸಿದೆ. ಇಸ್ರೇಲ್ ವಿರುದ್ಧ ಶಸ್ತ್ರಾಸ್ತ್ರ ನಿರ್ಬಂಧ ವಿಧಿಸಬೇಕೆಂಬ ಕರೆಗಳನ್ನೂ ತಿರಸ್ಕರಿಸಿದೆ.

ಭಾರತದಲ್ಲಿ ಫೆಲೆಸ್ತೀನ್ ಪರ ಪ್ರತಿಭಟನೆಗಳು ಹಾಗೂ ಚಟುವಟಿಕೆಗಳ ಮೇಲೆ ನಿರ್ಬಂಧ ಹೇರಲಾಗಿದೆ ಎಂಬ ಟೀಕೆಗಳೂ ವ್ಯಕ್ತವಾಗಿವೆ.

2024ರ ಸೆಪ್ಟೆಂಬರ್‌ನಲ್ಲಿ ಭಾರತೀಯ ನಾಗರಿಕ ಸಮಾಜದ ಸಂಘಟನೆಗಳು ಇಸ್ರೇಲ್‌ಗೆ ಶಸ್ತ್ರಾಸ್ತ್ರ ರಫ್ತು ನಿಲ್ಲಿಸುವಂತೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದವು. ಆದರೆ ವಿದೇಶಾಂಗ ನೀತಿ ಕುರಿತ ನಿರ್ಧಾರಗಳು ನ್ಯಾಯಾಂಗದ ವ್ಯಾಪ್ತಿಗೆ ಬರುವುದಿಲ್ಲ, ಅವು ಸರಕಾರದ ವ್ಯಾಪ್ತಿಗೆ ಸೇರಿವೆ ಎಂದು ಹೇಳಿ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿತ್ತು.

ಭಾರತದ ಶಸ್ತ್ರಾಸ್ತ್ರ ರಫ್ತುಗಳು ದೇಶದ 'ರಾಷ್ಟ್ರೀಯ ಹಿತಾಸಕ್ತಿ'ಯನ್ನು ಆಧರಿಸಿವೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಸಮರ್ಥಿಸಿಕೊಂಡಿದ್ದಾರೆ.

"ನೇರವಾಗಿ ಅಥವಾ ಪರೋಕ್ಷವಾಗಿ ಮಿಲಿಟರಿ ಪರಿಣಾಮ ಹೊಂದಿರುವ ಯಾವುದೇ ವಸ್ತುವಿನ ರಫ್ತು ಸೇರಿದಂತೆ ಭಾರತದ ಎಲ್ಲಾ ರಫ್ತುಗಳು ರಾಷ್ಟ್ರೀಯ ಹಿತಾಸಕ್ತಿ ಹಾಗೂ ವಿವಿಧ ಅಂತರರಾಷ್ಟ್ರೀಯ ಬದ್ಧತೆಗಳಿಂದ ಮಾರ್ಗದರ್ಶಿಸಲ್ಪಡುತ್ತವೆ. ಇಸ್ರೇಲ್ ರಾಷ್ಟ್ರೀಯ ಭದ್ರತಾ ಕ್ಷೇತ್ರದಲ್ಲಿ ನಮ್ಮ ಪ್ರಮುಖ ಪಾಲುದಾರ ರಾಷ್ಟ್ರವಾಗಿದ್ದು, ಭಾರತದ ಭದ್ರತೆಗೆ ಸವಾಲು ಎದುರಾದ ವಿವಿಧ ಸಂದರ್ಭಗಳಲ್ಲಿ ನಮ್ಮೊಂದಿಗೆ ನಿಂತಿದೆ" ಎಂದು ಅವರು 2024ರ ಡಿಸೆಂಬರ್‌ನಲ್ಲಿ ಹೇಳಿದ್ದರು. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries