HEALTH TIPS

ಜುಲೈ 6ರಂದು ಸೂರ್ಯನಿಂದ ಅತ್ಯಂತ ದೂರ ಸರಿಯಲಿದೆ ಭೂಮಿ,ಈ ಘಟನೆಯಿಂದ ಆಗೋ ಪರಿಣಾಣವೇನು?

 ಬಾಹ್ಯಾಕಾಶ, ಭೂಮಿ, ಸಮುದ್ರ ಸೇರಿದಂತೆ ಬ್ರಹ್ಮಾಂಡದ ಕೌತುಕ ಬಗೆದಷ್ಟು ಹೊರಬರುತ್ತಲೇ ಇರುತ್ತದೆ. ಆದರೆ ಕೆಲ ಘಟನೆಗಳು ಆತಂಕ ತರುತ್ತದೆ. ಈ ಘಟನೆಗಳಿಂದ ಭೂಮಿಯಲ್ಲೂ ಕೆಲ ಅಲ್ಲೋಲ ಕಲ್ಲೋಲಗಳಾಗುತ್ತದೆ. ಇದೀಗ ಜುಲೈ 6 ರಂದು ಅಪರೂಪದ ವಿದ್ಯಮಾನವೊಂದು ಬ್ರಹ್ಮಾಂಡದಲ್ಲಿ ಘಟಿಸುತ್ತಿದೆ. ಹೌದು, ಜುಲೈ 6 ರಂದು ಭೂಮಿಯು ಸೂರ್ಯನಿಂದ ಅತ್ಯಂದ ದೂರ ಸರಿಯಲಿದೆ. ಭೂಮಿ ತನ್ನ ಕಕ್ಷೆಯಲ್ಲೇ ಇದ್ದರೂ ಭೂಮಿಯಿಂದ ಅತ್ಯಂತ ಗರಿಷ್ಠ ದೂರಕ್ಕೆ ತೆರಳಲಿದೆ.


ಮಳೆಯೂ ಇಲ್ಲ ಜೊತೆಗೆ ಭೂಮಿ ದೂರ ಸರಿದ ಪರಿಣಾಮ ಘೋರ

ಎಲ್ ನಿನೋ ಪರಿಣಾಮದಿಂದ ಭಾರತದಲ್ಲಿ ತೀವ್ರ ಬರಗಾಲದ ಪರಿಸ್ಥಿತಿಗಳು ಸೃಷ್ಟಿಯಾಗುತ್ತಿದೆ.ಜೂನ್ ಕಳೆದು ಜುಲೈ ತಿಂಗಳಾದರೂ ಮಳೆ ಇಲ್ಲ. ಕೆಲವೆಡೆ ವಿಪರೀತ ಮಳೆಯಿಂದ ಪ್ರವಾಹ ಸೃಷ್ಟಿಯಾಗಿದೆ. ಇದಕ್ಕೆ ಭೂಮಿ ಹಾಗೂ ಸೂರ್ಯನ ನಡುವಿನ ಅಫೆಲಿಯನ್ ಕೂಡ ಸೇರಿಕೊಳ್ಳಲಿದೆ. ಸೂರ್ಯನಿಂದ ಭೂಮಿ ದೂರ ಸರಿಯುತ್ತಿದ್ದಂತೆ ಭೂಮಿಯ ಮೇಲಿನ ಹವಾಮಾನದ ಮೇಲೆ ತೀವ್ರ ಪರಿಣಾಮವಾಗುದಿಲ್ಲ. ಸಾಮಾನ್ಯವಾಗಿ ಸೂರ್ಯನಿಂದ ದೂರ ಸರಿಯುತ್ತಿದ್ದಂತೆ ಭೂಮಿಯಲ್ಲಿ ತಾಪಮಾನ ಕಡಿಮೆ ಅಥವಾ ಚಳಿ ಹೆಚ್ಚಾಗಬೇಕು. ಆದರೆ ಈ ಅಫೆಲಿಯನ್ ಘಟನೆಯಿಂದ ಉತ್ತರ ಗೋಳಾರ್ಧದಲ್ಲಿ ಅಂದರೆ ಭಾರತ ಇರುವ ಪ್ರದೇಶದಲ್ಲಿ ಬೇಸಿಗೆ ಧಗ ಇರಲಿದೆ. ಸದ್ಯ ಮಳೆಯೂ ಇಲ್ಲದ ಕಾರಣ ಈ ಉರಿ ಬಿಸಿಲು ಹಾಗೇ ಇರಲಿದೆ. ಇನ್ನು ದಕ್ಷಿಣ ಗೋಳಾರ್ಧದಲ್ಲಿ ಚಳಿಗಾಲ ಇರಲಿದೆ.

ಏನಿದು ಅಫೆಲಿಯನ್ ಘಟನೆ

ಸೂರ್ಯ ಹಾಗೂ ಭೂಮಿ ಕುರಿತು ಪ್ರತಿ ಅಧ್ಯಯನವೂ ಅತ್ಯಂತ ಕುತೂಹಲಕಾರಿ. ಖಗೋಳಶಾಸ್ತ್ರಜ್ಞ ಜೊಹಾನ್ಸ್ ಕೆಪ್ಲರ್ ಪ್ರಕಾರ ಸೂರ್ಯನ ಸುತ್ತ ಭೂಮಿ ಸಂಪೂರ್ಣ ವೃತ್ತಾಕಾರದಲ್ಲಿ ಸುತ್ತುವುದಿಲ್ಲ. ಇದರ ಬದಲು ಲಂಬವೃತ್ತಾಕಾರದ (ಇಟಟiಠಿಣiಛಿಚಿಟ ಔಡಿbiಣ) ಕಕ್ಷೆಯಲ್ಲಿ ಸುತ್ತಲಿದೆ. ಈ ರೀತಿ ಸುತ್ತುವ ಕಾರಣ ಸಾಮಾನ್ಯವಾಗಿ ವರ್ಷದಲ್ಲಿ ಒಂದು ದಿನ ಸೂರ್ಯನ ಹತ್ತಿರ ಭೂಮಿ ಬರಲಿದೆ. ಇದೇ ರೀತಿ ಒಂದು ದಿನ ಸೂರ್ಯನಿಂದ ಅತ್ಯಂತ ದೂರ ಸರಿಯಲಿದೆ. ಇದು ಭೂಮಿ ಲಂಭಾಸಾರದಲ್ಲಿ ಸೂರ್ಯನ ಸುತ್ತ ಸುತ್ತುವ ಕಾರಣ ಘಟಿಸುವ ಸಾಮಾನ್ಯ ವಿದ್ಯಮಾನವಾಗಿದೆ. ಇದೀಗ ಜುಲೈ 6 ರಂದು ಸೂರ್ಯನಿಂದ ಭೂಮಿ ಅತ್ಯಂತ ದೂರ ಸರಿಯಲಿದೆ. ಅಂದರೆ ಜುಲೈ 6 ರಂದು ಭೂಮಿ, ಸೂರ್ಯನಿಂದ 15.21 ಕೋಟಿ ಕಿಲೋಮೀಟರ್‌ನಷ್ಟು ದೂರದಲ್ಲಿ ಇರಲಿದೆ.

ಭೂಮಿ ತನ್ನ ಅಕ್ಷದಲ್ಲಿ 23.5 ಡಿಗ್ರಿಯಷ್ಟು ವಾಲಿಕೊಂಡಿದೆ. ಇದರಿಂದ ಭೂಮಿಯ ಮೇಲಿನ ಋತುಗಳ ಬದಲಾಗುತ್ತದೆ. ಸರಿಸುಮಾರು ಜುಲೈ ತಿಂಗಳಲ್ಲಿ ಭೂಮಿಯ ಉತ್ತರ ಧ್ರುವ ಸೂರ್ಯನ ಕಡೆ ವಾಲಿಕೊಂಡಿರುತ್ತದೆ. ಇದರ ಪರಿಣಾಮ ಸೂರ್ಯನ ಕಿರಣಗಳು ನೇರವಾಗಿ ಭೂಮಿಯ ಮೇಲೆ ಬೀಳುತ್ತದೆ. ಈ ವೇಳೆ ತಾಪಮಾನ ಹೆಚ್ಚಾಗಲಿದೆ. ಇನನು ಸುಮಾರು ಜನವರಿ ವೇಳೆಗೆ ಭೂಮಿ ಸೂರ್ಯನಿಗೆ ಹತ್ತಿರವಾದರೂ ಭಾರತದಲ್ಲಿ ಚಳಿಗಾಲ ಇರುತ್ತದೆ.

ಭೂಮಿ ಲಂಭಾಕಾರದ ವೃತ್ತದಲ್ಲಿ ಸುತ್ತುವ ಕಾರಣ ಜುಲೈ ತಿಂಗಳಿನಲ್ಲಿ ಭೂಮಿ ಸೂರ್ಯನಿಂದ ದೂರ ಸರಿಯತ್ತಾ ಹೋಗಿ ಗರಿಷ್ಠ ದೂರ ತಲುಪುತ್ತದೆ. ಹೀಗಾಗಿ ಜೂನ್ ಅಂತ್ಯ ಹಾಗೂ ಜುಲೈ ತಿಂಗಳಲ್ಲಿ ಸೂರ್ಯನಿಂದ ಗರಿಷ್ಠ ದೂರದಲ್ಲಿ ಭೂಮಿ ಇರಲಿದೆ. ಇದರ ಪರಿಣಾಮ ಸೂರ್ಯನ ಬೆಳಕು ಶೇಕಡಾ 7ರಷ್ಟು ಕಡಿಮೆಯಾಗಿ ಭೂಮಿಗೆ ತಲುಪಲಿದೆ. ವಿಶೇಷ ಅಂದರೆ ಜುಲೈ 6 ರಂದು ಸೂರ್ಯನ ಗಾತ್ರ ಭೂಮಿಯಿಂದ ನೋಡಿದಾಗ ಶೇಕಡಾ 3ರಷ್ಟು ಚಿಕ್ಕದಾಗಿ ಗೋಚರಿಸುತ್ತದೆ. ಆದರೆ ಸೂರ್ಯನ ಬರಿಗಣ್ಣಿನಿಂದ ನೋಡಲು ಸಾಧ್ಯವಾಗದ ಕಾರಣ ಈ ವ್ಯತ್ಯಾಸವನ್ನು ಗಮನಿಸುವುದು ಕಷ್ಟ.







Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries