HEALTH TIPS

JPEG vs HEIC: 99% ಜನರಿಗೆ ಇದು ಗೊತ್ತಿಲ್ಲ! DSLR ತರ ಫೋಟೋ ಕಾಣಲು ಯಾವುದು ಬೆಸ್ಟ್?

 ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ಗಳು ಅನೇಕ ಶ್ರಮದ ಕೆಲಸಗಳನ್ನು ಸುಲಭಗೊಳಿಸಿವೆ. ಮೊಬೈಲ್ ಕರೆಯಿಂದ ಹಿಡಿದು ವೀಡಿಯೊ ರೆಕಾರ್ಡಿಂಗ್ ಅಥವಾ ಫೋಟೋಶೂಟ್ ವರೆಗೂ ಹೆಚ್ಚಿನ ಜನರು ಸ್ಮಾರ್ಟ್‌ಫೋನ್‌ಗಳನ್ನೇ ಅವಲಂಬಿಸಿದ್ದಾರೆ. ಅದರಲ್ಲೂ ಈ ಜನರೇಷನ್‌ಲ್ಲಿ ಸ್ಮಾರ್ಟ್‌ಫೋನ್ ಫೋಟೋಗ್ರಫಿ ಟ್ರೆಂಡಿಂಗ್ ಆಗಿದೆ. ಆದರೂ ಯಾವ ರೀತಿಯ ಫಾರ್ಮ್ಯಾಟ್ ಫೋಟೋ ಗುಡ್‌ ಕ್ವಾಲಿಟಿ, ಡಿಎಸ್‌ಎಲ್‌ಆರ್ ರೀತಿ ಕಾಣುತ್ತೆ ಅಂತಾ ಬಹಳಷ್ಟು ಜನರಿಗೆ ಗೊತ್ತಿಲ್ಲ. ಇಮೇಜ್ ಕ್ವಾಲಿಟಿ ಕಾಣಲು JPEG ಅಥವಾ HEIC ಇವೆರಡರಲ್ಲಿ ಯಾವುದು ಉತ್ತಮ ಅಂತಾ ತಿಳಿಯೋಣ.


JPEG ಹೆಚ್ಚು ಬಳಸಲಾಗುತ್ತದೇಕೆ?

JPEG ವಿಶ್ವದ ಅತ್ಯಂತ ಜನಪ್ರಿಯ ಇಮೇಜ್ ಫಾರ್ಮ್ಯಾಟ್ ಆಗಿದೆ. ಬಹುತೇಕ ಪ್ರತಿಯೊಂದು ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್, ವೆಬ್‌ಸೈಟ್, ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಇದನ್ನು ಬೆಂಬಲಿಸುವುದೇ ಕಾರಣ. ಇದರ ದೊಡ್ಡ ಪ್ರಯೋಜನವೆಂದರೆ ಎಲ್ಲದಕ್ಕೂ ಹೊಂದಾಣಿಕೆ ಆಗುತ್ತೆ. ಆದರೆ JPEG ಫೋಟೋಗಳನ್ನು ಸೇವ್ ಮಾಡಿದಾಗ ಹೆಚ್ಚು ಸಂಕುಚಿತಗೊಳಿಸುತ್ತದೆ, ನೀವು ಅವುಗಳನ್ನು ಪದೇ ಪದೇ ಸೇವ್ ಮಾಡಿದ್ರೆ ಅವುಗಳ ಗುಣಮಟ್ಟ ಕಡಿಮೆ ಆಗುತ್ತೆ.

HEIC ಎಂದರೇನು?

ಮಾಹಿತಿಯ ಪ್ರಕಾರ, HEIC (ಹೈ ಎಫಿಷಿಯೆನ್ಸಿ ಇಮೇಜ್ ಕಂಟೇನರ್) ಒಂದು ಮುಂದುವರಿದ ಇಮೇಜ್ ಫಾರ್ಮ್ಯಾಟ್ ಆಗಿದೆ ಅದು ವಿಶೇಷವಾಗಿ ಉತ್ತಮ ಗುಣಮಟ್ಟವನ್ನು ನೀಡುವ ಸಾಮರ್ಥ್ಯ ಹೊಂದಿದೆ. ಇದಲ್ಲದೆ, ಇದರ ವೈಶಿಷ್ಟ್ಯವೆಂದರೆ ಅದು ಉತ್ತಮ ಗುಣಮಟ್ಟವನ್ನು ನೀಡುವುದಲ್ಲದೆ ಕಡಿಮೆ ಡಾಟಾ ಸಹ ಬಳಸುತ್ತದೆ. ಇದು ಹೊಸ ಇಮೇಜ್ ಕಂಪ್ರೆಷನ್ ತಂತ್ರಜ್ಞಾನ ಬಳಸುತ್ತದೆ, ಫೋಟೋಗಳಲ್ಲಿ ವಿವರ ಮತ್ತು ಬಣ್ಣ ಎರಡನ್ನೂ ಒರಿಜಿನಲ್ ಆಗಿಯೇ ಸೇವ್ ಮಾಡಿ ಉಳಿಸಬಹುದಾಗಿ ಎಷ್ಟೇ ಸಲ ಸೇವ್ ಮಾಡಿದ್ರೂ ಅದರ ಗುಣಮಟ್ಟ ಕಡಿಮೆ ಆಗುವುದಿಲ್ಲ. ಇದಕ್ಕಾಗಿಯೇ ಹೊಸ ಐಫೋನ್‌ಗಳು, ಕೆಲವು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ಈಗ HEIC ಸ್ವರೂಪದಲ್ಲಿ ಫೋಟೋಗಳನ್ನು ಸೇವ್ ಮಾಡುತ್ತವೆ.

JPEG v HEIC: ಗುಣಮಟ್ಟದಲ್ಲಿ ಯಾವುದು ಉತ್ತಮ?

ಈಗ ಪ್ರಶ್ನೆಯೆಂದರೆ ಎರಡು ಫಾರ್ಮ್ಯಾಟ್‌ಗಳ್ಲಲಿ ಯಾವುದು ಉತ್ತಮವಾಗಿದೆ. ಎರಡು ಫಾರ್ಮ್ಯಾಟ್‌ ಹೋಲಿಸಿದಾಗ, HEIC ಸಾಮಾನ್ಯವಾಗಿ ಸಾಮಾನ್ಯ ಗಾತ್ರಗಳಲ್ಲಿ JPEG ಗಿಂತ ಹೆಚ್ಚಿನ ವಿವರ, ಉತ್ತಮ Dynamic range ಮತ್ತು Excellent color ಇರುತ್ತೆ. ಇದರರ್ಥ ಇದು ಕಡಿಮೆ ಮೆಮೊರಿ ಇದ್ರೂ ಬಳಕೆದಾರರಿಗೆ ಇದು ಉತ್ತಮ. ಆದ್ರೆ HEIC ಫಾರ್ಮ್ಯಾಟ್‌ ಬಳಸುವುದರಿಂದ ಫೋಟೋ DSLR ನಂತೆ ಕಾಣುವುದಿಲ್ಲ. ಫೋಟೋದ ನಿಜವಾದ ಗುಣಮಟ್ಟವು ಕ್ಯಾಮೆರಾ, ಲೆನ್ಸ್, ಇಮೇಜ್ ಫಿಲ್ಟರ್ ಮತ್ತು ಬೆಳಕನ್ನು ಅವಲಂಬಿಸಿರುತ್ತದೆ. ಮತ್ತೊಂದೆಡೆ, JPEG ಬಹುತೇಕ ಪ್ರತಿಯೊಂದು ಸಾಧನ ಮತ್ತು ಪ್ಲಾಟ್‌ಫಾರ್ಮ್‌ನಲ್ಲಿ ತೆರೆದುಕೊಳ್ಳುತ್ತದೆ, ಇದು ಹಂಚಿಕೊಳ್ಳಲು ಹೆಚ್ಚು ಸುಲಭಗೊಳಿಸುತ್ತದೆ.

ಯಾವುದು ನಿಮಗೆ ಉತ್ತಮ?

ನೀವು ಹೊಸ ಸ್ಮಾರ್ಟ್‌ಫೋನ್ ಬಳಸುತ್ತಿದ್ದರೆ, ಫೋಟೋಗಳನ್ನು ಸೇವ್ ಮಾಡುವಾಗ ಮೆಮೊರಿ ಉಳಿಸಲು ಮತ್ತು ಉತ್ತಮ ಗುಣಮಟ್ಟದಲ್ಲಿರಬೇಕೆಂದ್ರೆ HEIC ಉತ್ತಮ. ನೀವು ಸಾಮಾಜಿಕ ಮಾಧ್ಯಮ, ವೆಬ್‌ಸೈಟ್‌ಗಳು ಬಳಸುತ್ತಿದ್ದರೆ ಆಗಾಗ್ಗೆ ಫೋಟೋಗಳನ್ನು ಶೇರ್‌ ಮಾಡಿಕೊಳ್ಳುತ್ತಿದ್ದರೆ ಯಾವುದೇ ಸಮಸ್ಯೆಗಳಿಲ್ಲದೆ ಹೊಂದಿಕೆಯಾಗಲು JPEG ಅತ್ಯುತ್ತಮ ಆಯ್ಕೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries