ಕಾಸರಗೋಡು: ಒಂದು ಕೋಟಿ ರೂಪಾಯಿಗೂ ಹೆಚ್ಚಿನ ಮೊತ್ತದ ಚಿನ್ನ ನೀಡುವುದಾಗಿ ತಿಳಿಸಿ ಜ್ಯುವೆಲ್ಲರಿ ಮಾಲೀಕನಿಂದ 93 ಲಕ್ಷ ರೂಪಾಯಿ ಪಡೆದು ವಂಚಿಸಿರುವ ಬಗ್ಗೆ ವೈದ್ಯ ಸೇರಿದಂತೆ ಇಬ್ಬರ ವಿರುದ್ಧ ಹೊಸದುರ್ಗ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಕುಂಬಳೆಯ ಎಸ್. ಗೋಲ್ಡ್ ಜ್ಯುವೆಲ್ಲರಿ ಮಾಲಿಕ ಮೊಗ್ರಾಲ್ ರಹಮತ್ ನಗರ ನಿವಾಸಿ ಯೂಸಫ್ ಕೋಯಾ ನೀಡಿದ ದೂರಿನನ್ವಯ ಕಾಸರಗೋಡಿನ ವೈದ್ಯ ಮುಹಮ್ಮದ್ ಸಹೀರ್ ಹಾಗೂ ಅಬ್ದುಲ್ಲ ಎಂಬವರಿಗೆ ಈ ಕೇಸು. ವೈದ್ಯ ಮುಹಮ್ಮದ್ ಸಹೀರ್ ಹಾಗೂ ಅಬ್ದುಲ್ಲ ಮೊಬೈಲ್ ಮೂಲಕ ತನ್ನನ್ನು ಸಂಪರ್ಕಿಸಿ, ಒಂದು ಕೋಟಿ ಮೊತ್ತದ ಚಿನ್ನ ತಮ್ಮ ಬಳಿ ಇರುವುದಾಗಿ ತಿಳಿಸಿ 93ಲಕ್ಷ ರೂ. ಪಡೆದು ಚಿನ್ನ ನೀಡದೆ, ಹಣವನ್ನೂ ವಾಪಾಸು ಮಾಡದೆ ವಂಚಿಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.


