HEALTH TIPS

ರಾಣಿಪುರಂ ರಸ್ತೆಯಲ್ಲಿ ಕಾರುಗಳಲ್ಲಿ ಅಪಾಯಕಾರಿ ಸ್ಥಿತಿಯಲ್ಲಿ ಸಾಹಸಿಕ ಪ್ರಯಾಣ-ನಾಲ್ವರು ಯುವಕರ ವಿರುದ್ಧ ಕೇಸು, ದಂಡ ವಸೂಲಿ

ಕಾಸರಗೋಡು: ಪ್ರಸಿದ್ಧ ಪ್ರವಾಸಿತಾಣ ರಾಣಿಪುರ ಬೆಟ್ಟಕ್ಕಿರುವ ರಸ್ತೆಯಲ್ಲಿ ಕಾರುಗಳಲ್ಲಿ ಅಪಾಯಕಾರಿ ಹಾಗೂ ಸಾಹಸಿಕ ಪ್ರಯಾಣ ನಡೆಸಿದ ಮಂಜೇಶ್ವರದ ನಾಲ್ವರು ಯುವಕರ ವಿರುದ್ಧ ರಾಜಾಪುರಂ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.  


ಗುರುವಾರ ಬೆಳಗ್ಗೆ ಎರಡು ಕಾರುಗಳಲ್ಲಿ ತೆರಳಿದ್ದ ಯುವಕರು ರಾಣಿಪುರಂ ರಸ್ತೆಯಲ್ಲಿ ಕಾರಿನ ಬಾಗಿಲುಗಳನ್ನು ತೆರೆದು ಅದರ ಮೇಲೆ ಕುಳಿತುಕೊಂಡು ಕಿಲೋ ಮೀಟರ್ ವರೆಗೆ ಅಪಾಯಕಾರಿ ರೀತಿಯಲ್ಲಿ ಕರು ಚಲಾಯಿಸುತ್ತಾ ಮೋಜು ಮಸ್ತಿಯಲ್ಲಿ ತೊಡಗಿಸಿಕೊಂಡಿದ್ದರು. ವಿಶೇಷವೆಂದರೆ, ಇವರ ಅಪಾಯಕಾರಿ ಪ್ರಯಾಣದ ದೃಶ್ಯಗಳನ್ನು ಇವರೇ  ಮೊಬೈಲ್‍ನಲ್ಲಿ ಚಿತ್ರೀಕರಿಸಿ ವಾಟ್ಸಪ್ ಮೂಲಕ ಪೆÇಲೀಸರಿಗೆ ರವಾನಿಸಿದ್ದಾರೆ! ದೃಶ್ಯಗಳು ಲಭಿಸಿದ ತಕ್ಷಣ ರಾಣಿಪುರಂ ತಲುಪಿದ ಪೆÇಲೀಸರು ತಂಡವನ್ನು ಹಾಗೂ ಅವರು ಸಂಚಾರಕ್ಕೆ ಬಳಸಿದ್ದ ವಾಹನ ವಶಪಡಿಸಿಕೊಂಡು, ಕಾನೂನು ಉಲ್ಲಂಘನೆಗೆ ಸಂಬಂಧಿಸಿ ದಂಡ ವಸೂಲು ಮಾಡಿದ್ದಾರೆ. 

ಅತ್ಯಂತ ಕಡಿದಾದ ಹಾಗೂ ತಿರುವುಗಳಿಂದ ಕೂಡಿದ ರಾಣೀಪುರಂ ರಸ್ತೆಗಳಲ್ಲಿ ಯುವಕರ ತಂಡ ಪುಂಡಾಟಿಕೆ ನಡೆಸುತ್ತಿರುವುದರಿಂದ ಇತರ  ವಾಹನಗಳಿಗೆ ಅಪಾಯ ತಂದೊಡ್ಡುವ ಸ್ಥಿತಿ ನಿರ್ಮಣವಾಗುತ್ತಿರುವುದಾಗಿ ಪ್ರವಾಸಿಗರು ದೂರುತ್ತಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries