HEALTH TIPS

ಮೂಕಾಂಬಿಕೆ ದೇವಸ್ಥಾನಕ್ಕೆ ಭೇಟಿ, ನನ್ನ ಹಕ್ಕು: ಸಿ.ಎಂ ಸತೀಶನ್‌

 ತಿರುವನಂತಪುರ (PTI): 'ಮೃದು ಹಿಂದುತ್ವ' ಅನುಸರಿಸುತ್ತಿದ್ದಾರೆ ಎಂಬ ಆರೋಪಗಳ ಕುರಿತು ಪ್ರತಿಕ್ರಿಯಿಸಿದ ಕೇರಳಂ ಮುಖ್ಯಮಂತ್ರಿ ವಿ.ಡಿ.ಸತೀಶನ್ ಅವರು 'ದೇವಸ್ಥಾನಕ್ಕೆ ಹೋಗುವುದು ನನ್ನ ವೈಯಕ್ತಿಯ ಹಕ್ಕು. ದೇವರನ್ನು ನಂಬುವ ಸಾಂವಿಧಾನಿಕ ಹಕ್ಕು ನನಗಿದೆ' ಎಂದು ಹೇಳಿದ್ದಾರೆ. 


ಸತೀಶನ್‌ ಅವರು ಇತ್ತೀಚೆಗೆ ಕರ್ನಾಟಕದ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. 'ಸತೀಶನ್‌ ಅವರು 'ಮೃದು ಹಿಂದುತ್ವ'ವನ್ನು ಅನುಸರಿಸುತ್ತಿದ್ದಾರೆ' ಎಂಬ ಆರೋಪಗಳು ಕೇಳಿಬಂದಿದ್ದವು.

ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು 'ಕಳೆದ 37 ವರ್ಷಗಳಿಂದ ನಾನು ಮೂಕಾಂಬಿಕೆ ದೇವಸ್ಥಾನಕ್ಕೆ ಹೋಗುತ್ತಿದ್ದೇನೆ. ನಾನು ಆ ದೇವಿಯ ಭಕ್ತ. ಇದನ್ನು ನಾನು ಸಂತೋಷದಿಂದ ಹೇಳಿಕೊಳ್ಳುತ್ತೇನೆ. ಇದನ್ನು 'ಮೃದು ಹಿಂದುತ್ವ' ಎಂದು ಕರೆಯಲು ಹೇಗೆ ಸಾಧ್ಯ. ಹೀಗೆ ಹೇಳುವವರು ಯಾವ ಪ್ರಪಂಚದಲ್ಲಿ ಇದ್ದಾರೆ? ಪೂಜಾ ಸ್ಥಳಗಳಿಗೆ ಭೇಟಿ ನೀಡುವ ಎಲ್ಲರನ್ನೂ ಇವರು ಅವಮಾನಿಸುತ್ತಿದ್ದಾರೆ' ಎಂದು ಹೇಳಿದರು.

'ಒಂದು ವೇಳೆ ಮುಖ್ಯಮಂತ್ರಿಯಾದ ಬಳಿಕ ನಾನು ಮೂಕಾಂಬಿಕೆ ದೇವಸ್ಥಾನಕ್ಕೆ ಭೇಟಿ ನೀಡುವುದನ್ನು ನಿಲ್ಲಿಸಿದ್ದರೆ ಅದು ವಿಚಿತ್ರವಾಗಿರುತ್ತಿತ್ತು. 'ಮೃದು ಹಿಂದುತ್ವ' ಎನ್ನುವುದು ಆಧಾರರಹಿತವಾಗಿದೆ' ಎಂದು ಸತೀಶನ್‌ ಹೇಳಿದರು.

'ಜನರು ದೇವಸ್ಥಾನ, ಚರ್ಚ್‌ ಹಾಗೂ ಮಸೀದಿಗಳಿಗೆ ಭೇಟಿ ನೀಡುತ್ತಾರೆ. ನಾನು ಮುಖ್ಯಮಂತ್ರಿಯಾಗಿದ್ದೇನೆ ಎಂಬ ಕಾರಣಕ್ಕೆ ದೇವಸ್ಥಾನಕ್ಕೆ ಹೋಗುವುದನ್ನು ನಿಲ್ಲಿಸಬೇಕು ಎಂದು ಯಾರಾದರೂ ಹೇಳಲು ಸಾಧ್ಯವೇ' ಎಂದು ಪ್ರಶ್ನಿಸಿದರು.

ಆಂತರಿಕ ಕಚ್ಚಾಟದಲ್ಲಿ ಮುಳುಗಿರುವ ವಿರೋಧ ಪಕ್ಷಗಳು ಜನರ ಗಮನವನ್ನು ಬೇರೆಡೆ ಸೆಳೆಯಲು ಈ ರೀತಿ ಆಧಾರರಹಿತ ಆರೋಪ ಮಾಡುತ್ತಿವೆ ಎಂದೂ ಸತೀಶನ್‌ ಟೀಕಿಸಿದರು. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries