ಉಪ್ಪಳ: ಬಿರುಸಿನ ಮಳೆಗೆ ಕುಸಿದು ಬಿದ್ದ ಮಂಗಲ್ಪಾಡಿ ಪಂಚಾಯಿತಿ ಶಿರಿಯಾ ನಿವಾಸಿ ತಿರುಮಲೇಶ್ ಎಂಬುವವರ ಮನೆಗೆ ಬಿಜೆಪಿ ಮುಖಂಡರು ಭೇಟಿ ನೀಡಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್, ಜಿಲ್ಲಾ ಉಪಾಧ್ಯಕ್ಷ ರಮೇಶ್, ಕುಂಬಳೆ ಮಂಡಲ ಪ್ರಧಾನ ಕಾರ್ಯದರ್ಶಿ ವಸಂತಕುಮಾರ್, ಮಂಗಲ್ಪಾಡಿ ಪಂಚಾಯಿತಿ ಸಮಿತಿ ಕಾರ್ಯದರ್ಶಿ ಕಿಶೋರ್ ಕುಮಾರ್, ವಿನು ಮತ್ತು ಭರತ್ ಸೇರಿದಂತೆ ಪ್ರಮುಖರು ಭೇಟಿ ನೀಡಿದ್ದರು.
ಹೆಂಚುಹಾಸಿನ ಮನೆ ಮೇಲ್ಛಾವಣಿಯು ಭಾರಿ ಸದ್ದಿನೊಂದಿಗೆ ಕುಸಿದು ಬೀಳುತ್ತಿದ್ದಂತೆ, ವಯೋಸಹಜ ಕಾಯಿಲೆಗಳಿಂದಾಗಿ ದೃಷ್ಟಿ ಕಳೆದುಕೊಂಡಿರುವ ತಿರುಮಲೇಶ್ ಅವರ ತಾಯಿ ಭಾಗೀರಥಿ, ಪತ್ನಿ ಸುಶ್ಮಿತಾ, ಮಗಳು ಸಾತ್ವಿಕಾ ಮತ್ತು ತಿರುಮಲೇಶ್ ಅವರು ಮನೆಯಿಂದ ಹೊರಗೆ ಧಾವಿಸಿದ ಪರಿಣಾಮ ಪ್ರಾಣಾಪಾಯ ತಪ್ಪಿತ್ತು.


