ಕಾಸರಗೋಡು: ಮುಸ್ಲಿಂ ಯೂತ್‍ಲೀಗ್‍ನ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ನಕಲಿ ಪೆÇೀಸ್ಟರ್ ಪ್ರಚಾರಪಡಿಸಿರುವ ದೂರಿನನ್ವಯ ವಿದ್ಯಾನಗರ ಠಾಣೆ ಪೆÇಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಮಧೂರು ಚೆಟ್ಟುಂಗುಳಿ ನಿವಾಸಿ ಕಲಂದರ್ ಶಾಫಿ ನೀಡಿದ ದೂರಿನನ್ವಯ ಈ ಕೇಸು. ಸಮಾಜದಲ್ಲಿ ಗಲಭೆ ಸೃಷ್ಟಿಸುವ ರೀತಿಯಲ್ಲಿ ಇನ್‍ಸ್ಟಾಗ್ರಾಮ್‍ನಲ್ಲಿ ನಕಲಿ ಪ್ರಚಾರ ನಡೆಸಿರುವುದಾಗಿ ದೂರಿನಲ್ಲಿ ದೂರಲಾಗಿತ್ತು. ದ ಕಮ್ಯೂನಿಸ್ಟ್ ವೇ, ಡಿವೈಎಫ್‍ಐ ಉಕ್ಕಿನಡ್ಕ, ಲೆಫ್ಟಿಸ್ಟ್, ಕಾಮ್ರೇಡ್ಸ್ ಚೆಟ್ಟುಂಗುಳಿ ಎಂಬೀ ಪೇಜುಗಳ ಮೂಲಕ ಇಂತಹ ಪ್ರಚಾರ ನಡೆಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಸೈಬರ್ ಸೆಲ್ ತನಿಖೆ ಚುರುಕುಗೊಳಿಸಿದೆ.


