HEALTH TIPS

ಮನೆ ಬಾಗಿಲು ಒಡೆದು ಐದು ಪವನು ಚಿನ್ನಾಭರಣ ಕಳವು-ದೂರು

ಕುಂಬಳೆ: ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಕಯ್ಯಾರಿನಲ್ಲಿ ಮನೆಗೆ ನುಗ್ಗಿ ಐದು ಪವನು ಚಿನ್ನಾಭರಣ ಕಳವುಗೈಯಲಾಗಿದೆ.  ಮಪೈವಳಿಕೆ ಪಂಚಾಯಿತಿ ಕಯ್ಯಾರು ನಿವಾಸಿ ಪಾಲಕ್ಕಾಡ್ನಲ್ಲಿ ಹೋಟೆಲ್ ವ್ಯಾಪಾರಿಯಾಗಿರುವ  ಯೂಸಫ್ ಎಂಬವರ ಮನೆಯಿಂದ ಈ ಕಳವು ನಡೆದಿದೆ. 


ಮನೆಯವರು ಭಾನುವಾರ ಸಂಜೆ ಮಸೀದಿಯಲ್ಲಿ ನಡೆಯುತ್ತಿದ್ದ ಸ್ವಲಾತ್ ಪ್ರಾರ್ಥನೆಗಾಗಿ ತೆರಳಿ, ವಾಪಸಾಗುವಷ್ಟರಲ್ಲಿ ಕಳವು ನಡೆದಿದೆ.  ಯೂಸಫ್ ಅವರ ಪತ್ನಿ ಮೈಮೂನ ಹಾಗೂ ಮೂವರು ಮಕ್ಕಳು ಮನೆಯಲ್ಲಿ ವಾಸಿಸುತ್ತಿದ್ದು, 7.30ಕ್ಕೆ ಮಸೀದಿಗೆ ತೆರಳಿ, 8.30ಕ್ಕೆ ವಾಪಸಾಗುವ ಮಧ್ಯೆ ಕಳವು ನಡೆದಿದೆ. ಟೆರಸ್‍ನ ಮೇಲೆ ಏರಿದ ಕಳ್ಳರು ಅಲ್ಲಿಂದ ಏಣಿ ಮೂಲಕ ಇಳಿದು ಕೊಠಡಿ ಬಾಗಿಲು ಮುರಿದು ಒಳಗೆ ಪ್ರವೇಶಿಸಿದ್ದಾರೆ. ಆನಂತರ ಕೊಠಡಿಯಲ್ಲಿದ್ದ ಕೀಲಿಕ್ಕೆ ಉಪಯೋಗಿಸಿ ಚಿನ್ನಾಭರಣ ದೋಚಲಾಗಿದೆ. 

ಮನೆಯವರು ಆಗಮಿಸಿ ನೋಡಿದಾಗ ಮನೆಯ ಬೆಡ್ ರೂಮ್‍ನ ಕಪಾಟುಗಳು ತೆರೆದಿರುವುದು ಕಂಡುಬಂದಿದ್ದು,  ಪರಿಶೀಲನೆ ವೇಳೆ ಕಪಾಟಿನಲ್ಲಿದ್ದ 5 ಪವನ್ ಚಿನ್ನಾಭರಣ ಕಳವಾಗಿರುವುದು ತಿಳಿದುಬಂದಿದೆ. ಮನೆಯವರು ನೀಡಿದ ದೂರಿನನ್ವಯ ಪೋಲೀಸರು ಸ್ಥಳಕ್ಕಾಗಮಿಸಿ ತಪಾಸಣೆ ನಡೆಸಿದ್ದಾರೆ. 





 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries