HEALTH TIPS

ಪರಸ್ಪರ ಗಡಿ ಮಾಹಿತಿ ಹಂಚಿಕೊಂಡ ಎಸ್‌ಸಿಒ ಸದಸ್ಯ ರಾಷ್ಟ್ರಗಳು

 ಇಸ್ಲಾಮಾಬಾದ್ : ಭಾರತ, ಪಾಕಿಸ್ತಾನಗಳೂ ಸೇರಿದಂತೆ ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ಸದಸ್ಯ ರಾಷ್ಟ್ರಗಳು ತಮ್ಮ ಅಂತರರಾಷ್ಟ್ರೀಯ ಗಡಿಗೆ ಸಂಬಂಧಿಸಿದ ಮಾಹಿತಿಯನ್ನು ಪರಸ್ಪರ ಹಂಚಿಕೊಂಡವು. 


'ಸದಸ್ಯ ರಾಷ್ಟ್ರಗಳ ಗಡಿ ಸೇವೆಗಳ ಮುಖ್ಯಸ್ಥರ 12ನೇ ಸಭೆಯು ಪಾಕಿಸ್ತಾನದ ಅಧ್ಯಕ್ಷತೆಯಲ್ಲಿ ಶುಕ್ರವಾರ ಇಲ್ಲಿ ನಡೆಯಿತು.

ಈ ವೇಳೆ ಅಂತರರಾಷ್ಟ್ರೀಯ ಗಡಿಗಳ ಸ್ಥಿತಿಗತಿಗೆ ಸಂಬಂಧಿಸಿದ ಮೌಲ್ಯಮಾಪನ, ಬೆಳವಣಿಗೆಗಳು ಹಾಗೂ ಒಲವುಗಳ ಕುರಿತಾದ ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು' ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.

'ಸದಸ್ಯ ರಾಷ್ಟ್ರಗಳ ಗಡಿ ಸೇವಾ ಸಂಸ್ಥೆಗಳು 2025ರಲ್ಲಿ ಕೈಗೊಂಡ ಜಂಟಿ ಗಡಿ ಕಾರ್ಯಾಚರಣೆಯ ಫಲಿತಾಂಶಗಳ ಕುರಿತು ಚರ್ಚಿಸಲಾಯಿತು. 2026ರಲ್ಲಿ ನಡೆಯಬೇಕಾದ ಕಾರ್ಯಾಚರಣೆಗೆ ಒಪ್ಪಿಗೆ ನೀಡಲಾಯಿತು ಹಾಗೂ 2027ರ ಕಾರ್ಯಾಚರಣೆ ಕುರಿತು ತಾಜಿಕಿಸ್ತಾನ ಮುಂದಿರಿಸಿದ ಪ್ರಸ್ತಾವವನ್ನು ಬೆಂಬಲಿಸಲಾಯಿತು' ಎಂದು ಅದು ತಿಳಿಸಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries