ಕಾಸರಗೋಡು: ಸರ್ಕಾರಿ ನೌಕರರು ಮತ್ತು ಶಿಕ್ಷಕರ ವೇತನ ಪರಿಷ್ಕರಣೆಗಾಗಿ ನೇಮಿಸಲಾಗಿರುವ 12ನೇ ವೇತನ ಆಯೋಗದ ಅವಧಿ ಪೂರ್ತಿಯಾಗಿ ಮೂರು ತಿಂಗಳು ಕಳೆದಿದ್ದು, ಈ ಪರಿಷ್ಕರಣೆ ಜಾರಿಗೆ ತರಲು ಸರ್ಕಾರ ಕ್ರಮ ಕೈಗೊಳ್ಳುವಂತೆ ಕೇರಳ ಎನ್‍ಜಿಒ ಅಸೋಸಿಯೇಷನ್ ಜಿಲ್ಲಾ ಸಮ್ಮೇಳನ ಆಗ್ರಹಿಸಿದೆ.
ಕೇರಳ ಎನ್‍ಜಿಒ ಅಸೋಸಿಯೇಷನ್‍ನ ರಾಜ್ಯಾಧ್ಯಕ್ಷ ಎ.ಪಿ. ಸುನಿಲ್ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಈ ಹಿಂದಿನ ಸರ್ಕಾರದ ವೈಫಲ್ಯದಿಂದಾಗಿ 12ನೇ ವೇತನ ಪರಿಷ್ಕರಣೆಯು ಜಾರಿಯಾಗದೆ ಬಾಕಿ ಉಳಿದಿದ್ದು, ಜುಲೈ 1ಕ್ಕೆ ಎರಡು ವರ್ಷ ಪೂರ್ಣಗೊಂಡಿದ್ದು, ಈ ಬಗ್ಗೆ ತಕ್ಷಣ ವರದಿ ಸಲ್ಲಿಸುವಂತೆ ಆಗ್ರಹಿಸಿದರು. ಕೇರಳ ಎನ್‍ಜಿಒ ಸಂಘದ ಜಿಲ್ಲಾ ಅಧ್ಯಕ್ಷ ಎ.ಟಿ. ಶಶಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಎಸ್. ಉಮಾಶಂಕರ್ ಮುಖ್ಯ ಭಾಷಣ ಮಾಡಿದರು. ಈ ಸಂದರ್ಭ 2026ರ ಸದಸ್ಯತ್ವ ಅಭಿಯಾನದ ರಾಜ್ಯಮಟ್ಟದ ಪ್ರಕ್ರಿಯೆಗೆ ಚಾಲನೆ ನೀಡಿದರು. ಸೇವೆಯಿಂದ ನಿವೃತ್ತರಾಗುತ್ತಿರುವ ರಾಜ್ಯ ಸಮಿತಿ ಸದಸ್ಯೆ ಎಂ.ಟಿ. ಪ್ರಸೀದಾ ಮತ್ತು ಜಿಲ್ಲಾ ಉಪಾಧ್ಯಕ್ಷ ಪಿ. ಕುಞÂಕೃಷ್ಣನ್ ಅವರನ್ನು ಬೀಳ್ಕೊಡಲಾಯಿತು.
ಕೋಶಾಧಿಕಾರಿ ವಿ.ಪಿ. ಬೋಬಿನ್, ರಾಜ್ಯ ಕಾರ್ಯದರ್ಶಿಗಳಾದ ಮೊಬಿಶ್ ಪಿ. ಥಾಮಸ್, ಸುರೇಶ್ ಪೆರಿಯಂಗಾನಂ, ಮುಖಂಡರಾದ ಕೆ.ಸಿ. ಸುಜಿತ್ ಕುಮಾರ್, ವಲ್ಸಲಾ ಕೃಷ್ಣನ್, ಲೋಕೇಶ್ ಎಂ.ಬಿ. ಆಚಾರ್, ಜಯಪ್ರಕಾಶ್ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.
ಸಂಘಟನೆ ಜಿಲ್ಲಾ ಉಪಾಧ್ಯಕ್ಷರನ್ನಾಗಿ ಪ್ರವೀಣ್ ವರಯಿಲ್ಲತ್ ಮತ್ತು ಜತೆ ಕಾರ್ಯದರ್ಶಿಯನ್ನಾಗಿ ಶ್ರೀನಿಮೋನ್ ಕಾಞಂಗಾಡು ಅವರನ್ನು ಆಯ್ಕೆ ಮಾಡಲಾಯಿತು.

