ಕುಂಬಳೆ: ಎಡನಾಡು ಕಣ್ಣೂರು ಸೇವಾ ಸಹಕಾರಿ ಬ್ಯಾಂಕಿನಲ್ಲಿ ಅಂತಾರಾಷ್ಟ್ರೀಯ ಸಹಕಾರಿ ದಿನದಂದು ಧ್ವಜಾರೋಹಣಗೈಯಲಾಯಿತು. ಬ್ಯಾಂಕಿನ ಅಧ್ಯಕ್ಷ ಶ್ಯಾಮ ರಾಜ ದೊಡ್ಡಮಾಣಿ ಧ್ವಜಾರೋಹಣವನ್ನು ನೆರವೇರಿಸಿದರು. ಬ್ಯಾಂಕ್ ನಿರ್ದೇಶಕ ಶ್ರೀಕೃಷ್ಣಪ್ರಸಾದ್ ಮತ್ತು ಸಿಬಂದಿ ವರ್ಗದವರು ಉಪಸ್ಥಿತರಿದ್ದರು.
ಬ್ಯಾಂಕಿನ ಸೀತಾಂಗೋಳಿ ಶಾಖೆಯಲ್ಲಿ ಉಪಾಧ್ಯಕ್ಷೆ ಹರಿಣಿ ಜಿ.ಕೆ ನಾಯಕ್ ಧ್ವಜಾರೋಹಣಗೈದರು. ನಿರ್ದೇಶಕರಾದ ಅವಿನಾಶ್, ಸುಜಾತಾ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಕಳತ್ತೂರು ಶಾಖೆಯಲ್ಲಿ ನಿರ್ದೇಶಕ ಹರೀಶ್ ಹಳೆಮನೆ ಧ್ವಜಾರೋಹಣಗೈದರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

.jpg)
