ಪೆರ್ಲ: ಪೆರ್ಲ ಶ್ರೀ ಸತ್ಯನಾರಾಯಣ ವಿದ್ಯಾಸಂಸ್ಥೆಗಳ ಸಂಸ್ಥಾಪಕ ಪರ್ತಜೆ ವೆಂಕಟ್ರಮಣ ಭಟ್ ಸಂಸ್ಮರಣಾ ಸಮಾರಂಭ ಜುಲೈ 15ರಂದು ಮಧ್ಯಾಹ್ನ 2.30ಕ್ಕೆ ಶಾಲಾ ಗ್ರಂಥಾಲಯ ಸಭಾಂಗಣದಲ್ಲಿ ಜರುಗಲಿರುವುದು.
ಕಾರ್ಯಕ್ರಮಕ್ಕೆ ಮೊದಲು ಶಾಲಾ ಕಚೇರಿ ಬಳಿಯಿರುವ ಸಂಸ್ಥಾಪಕರ ಪ್ರತಿಮೆಗೆ ಹಾರಾಪಣೆ, ಪುಷ್ಪಾರ್ಚನೆ ನಡೆಯುವುದು. ನಂತರ ನಡೆಯುವ ಸಮಾರಂಭದಲ್ಲಿ ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ(ಎಡಿಎಂ)ಉದಯಕುಮಾರ್ ಪೆರ್ಲ ಹಾಗೂ ನಿವೃತ್ತ ಬ್ಯಾಂಕ್ ಅಧಿಕಾರಿ ವಿನೋಬಾ ಶೆಟ್ಟಿ ಅತಿಥಿಯಾಗಿ ಭಾಗವಹಿಸುವರು. ವಿದ್ಯಾಣ್ಯ ವಿದ್ಯಾವರ್ಧಕ ಸಂಘದ ಅಧ್ಯಕ್ಷ ವಿಶ್ವೇಶ್ವರ ಭಟ್ ಕಾರ್ಯಾಡು ಅಧ್ಯಕ್ಷತೆ ವಹಿಸುವರು. ಶಾಲಾ ಸಂಚಾಲಕರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯುವುದು.

