HEALTH TIPS

ರಾಜ್ಯಸಭೆ ಅಧಿವೇಶನ | ಪ್ರಶ್ನೆಪತ್ರಿಕೆ ಸೋರಿಕೆ ತಡೆ ಮಸೂದೆ ಕುರಿತ ಚರ್ಚೆ ವೇಳೆ ಮನುಸ್ಮೃತಿ ಉಲ್ಲೇಖಿಸಿದ ಖರ್ಗೆ; ನಡ್ಡಾ ಆಕ್ಷೇಪ

ನವದೆಹಲಿ: ಗುರುವಾರ ಸಾರ್ವಜನಿಕ ಪರೀಕ್ಷೆ (ಅಕ್ರಮ ತಡೆ) ತಿದ್ದುಪಡಿ ಮಸೂದೆ, 2026ರ ಕುರಿತು ಚರ್ಚೆಯ ಸಂದರ್ಭದಲ್ಲಿ ಮನುಸ್ಮೃತಿ ಬಗ್ಗೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಗಳಿಗೆ ಆಡಳಿತ ಪಕ್ಷವು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ನಂತರ ವಿರೋಧ ಪಕ್ಷ ಮತ್ತು ಆಡಳಿತ ಪಕ್ಷಗಳ ಸದಸ್ಯರ ನಡುವೆ ಕಾವೇರಿದ ವಾಗ್ವಾದಕ್ಕೆ ರಾಜ್ಯಸಭೆಯು ಸಾಕ್ಷಿಯಾಯಿತು.


ಚರ್ಚೆಯಲ್ಲಿ ಭಾಗವಹಿಸಿದ್ದ ಖರ್ಗೆ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಶಿಕ್ಷಣ ನೀತಿಗಳನ್ನು ಟೀಕಿಸಿದರು. ಬಡವರಿಗೆ ಶಿಕ್ಷಣ ಪಡೆಯುವುದು ಜಟಿಲವಾಗುತ್ತಿದ್ದು, ವಿಶ್ವವಿದ್ಯಾಲಯಗಳ ಪ್ರಮುಖ ಹುದ್ದೆಗಳಿಗೆ ಆರ್‌ಎಸ್‌ಎಸ್‌ನೊಂದಿಗೆ ಗುರುತಿಸಿಕೊಂಡಿರುವ ಜನರನ್ನು ನೇಮಕ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದರು.

ಶಾಲೆ ಮತ್ತು ವಿವಿಗಳ ಪಠ್ಯಕ್ರಮಗಳಲ್ಲಿ ಬದಲಾವಣೆಗಳನ್ನು ಮಾಡಲಾಗುತ್ತಿದೆ ಎಂದು ಪ್ರತಿಪಾದಿಸಿದ ಖರ್ಗೆ ಮನುಸ್ಮೃತಿಯನ್ನು ಉಲ್ಲೇಖಿಸಿ, ಅದು ಶಿಕ್ಷಣದಲ್ಲಿ ಜಾತಿ ತಾರತಮ್ಯವನ್ನು ಉತ್ತೇಜಿಸುತ್ತದೆ ಎಂದು ಆರೋಪಿಸಿದರು. ಇದಕ್ಕೆ ಆಡಳಿತ ಪಕ್ಷವು ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿತು.

ಎನ್‌ಡಿಎ ಸಂಸದರು ಪ್ರತಿಭಟಿಸಿ ಘೋಷಣೆಗಳನ್ನು ಕೂಗತೊಡಗಿದಾಗ ಸದನವು ಪದೇ ಪದೇ ಅಡೆತಡೆಗಳನ್ನು ಎದುರಿಸಿತು.

ಖರ್ಗೆಯವರ ಹೇಳಿಕೆಗಳನ್ನು ತಳ್ಳಿ ಹಾಕಿದ ಸದನ ನಾಯಕ ಜೆ.ಪಿ. ನಡ್ಡಾ ಅವರು, ಈ ಹೇಳಿಕೆಗಳು ಸತ್ಯಕ್ಕೆ ದೂರವಾಗಿವೆ ಮತ್ತು ದೇಶಾದ್ಯಂತ ತಪ್ಪು ಸಂದೇಶವನ್ನು ರವಾನಿಸಬಹುದು ಎಂದು ಹೇಳಿದರು.

ಚರ್ಚೆಯ ಸಂದರ್ಭದಲ್ಲಿ ಮನುಸ್ಮೃತಿ ಉಲ್ಲೇಖವನ್ನು ಆಕ್ಷೇಪಿಸಿದ ನಡ್ಡಾ, ಖರ್ಗೆಯವರು ತನ್ನ ಹೇಳಿಕೆಯನ್ನು ಪ್ರಮಾಣೀಕರಿಸಬೇಕು ಎಂದು ಆಗ್ರಹಿಸಿದರು.

'ನಾವು ವಿಪಕ್ಷ ನಾಯಕರ ಮಾತುಗಳನ್ನು ಶಾಂತಿಯುತವಾಗಿ ಕೇಳುತ್ತಿದ್ದೇವೆ ಮತ್ತು ಪ್ರಜಾಪ್ರಭುತ್ವದಲ್ಲಿ ಹಾಗೆ ಮಾಡುವುದು ಸರಕಾರದ ಜವಾಬ್ದಾರಿಯಾಗಿದೆ. ಆದರೆ ವಿಪಕ್ಷ ನಾಯಕರು ಕೋಪದ ಭರದಲ್ಲಿ ಮಾತನಾಡಬಾರದು ಅಥವಾ ಅಸಂಸದೀಯ ಭಾಷೆಯನ್ನು ಬಳಸಬಾರದು ಎಂದು ನಾನು ವಿನಂತಿಸುತ್ತೇನೆ. ಅವರು ಈಗಷ್ಟೇ ಬಳಸಿದ ವಾಕ್ಯವು ಅಸಂಸದೀಯವಾಗಿದೆ ಮತ್ತು ಅದನ್ನು ನಡಾವಳಿಗಳಿಂದ ತೆಗೆದುಹಾಕಬೇಕು. ಅವರು ಭಾವನಾತ್ಮಕ ಸ್ಥಿತಿಯಲ್ಲಿ ಇಂತಹ ಹೇಳಿಕೆಗಳನ್ನು ನೀಡುವುದನ್ನು ತಪ್ಪಿಸಬೇಕು' ಎಂದು ನಡ್ಡಾ ಹೇಳಿದರು.

ವಾದ-ವಿವಾದಗಳು ಕಾವು ಪಡೆದುಕೊಳ್ಳುತ್ತಿದ್ದಂತೆ ಸಭಾಪತಿ ಸಿ.ಪಿ. ರಾಧಾಕೃಷ್ಣನ್ ಅವರು ಮಧ್ಯಪ್ರವೇಶಿಸಿ, ಮನುಸ್ಮೃತಿಗೆ ಸಂಬಂಧಿಸಿದ ಖರ್ಗೆಯವರ ಹೇಳಿಕೆಗಳು ಮತ್ತು ಉಲ್ಲೇಖಿಸಿದ ವಿಷಯಗಳು ಅಧಿಕೃತ ದಾಖಲೆಯ ಭಾಗವಾಗುವುದಿಲ್ಲ ಎಂದು ಆದೇಶಿಸಿದರು.










ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries