ಫೋಟೋ ಡಿಲೀಟ್ ಮಾಡದೆ ಫೋನ್ ಸ್ಟೋರೇಜ್ ಖಾಲಿ ಮಾಡಲು ಗೂಗಲ್ ಫೋಟೋಸ್ ಕ್ಲೌಡ್ ಬ್ಯಾಕಪ್ ಬಳಸಿ. ಸಾಮಾಜಿಕ ಆಪ್‌ಗಳ ಅನಗತ್ಯ ಕ್ಯಾಶ್ ಡೇಟಾ ಹಾಗೂ ವಾಟ್ಸಾಪ್ ಜಂಕ್ ಫೈಲ್‌ಗಳನ್ನು ಕ್ಲಿಯರ್ ಮಾಡುವುದರಿಂದ ಮೆಮೊರಿ ಹೆಚ್ಚಾಗಿ, ಮೊಬೈಲ್ ಹ್ಯಾಂಗ್ ಆಗುವ ಸಮಸ್ಯೆಯಿಂದ ಸುಲಭವಾಗಿ ಮುಕ್ತಿ ಪಡೆಯಬಹುದು.
ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಉಪಯುಕ್ತ ಮಾಹಿತಿ:
ಇಂದಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ಗಳಲ್ಲಿ ಕ್ಯಾಮೆರಾ ಕ್ವಾಲಿಟಿ ಹೆಚ್ಚಾಗುತ್ತಿದ್ದಂತೆ, ಫೋಟೋ ಮತ್ತು ವಿಡಿಯೋಗಳು ಅತಿ ಹೆಚ್ಚು ಜಾಗವನ್ನು ಆಕ್ರಮಿಸಿಕೊಳ್ಳುತ್ತವೆ. ಇದರಿಂದಾಗಿ ಫೋನ್ ಮೆಮೊರಿ (Sಣoಡಿಚಿge ಈuಟಟ) ಶೀಘ್ರದಲ್ಲೇ ಭರ್ತಿಯಾಗಿ ಮೊಬೈಲ್ ಹ್ಯಾಂಗ್ ಆಗಲು ಶುರುವಾಗುತ್ತದೆ. ಆದರೆ, ನಿಮ್ಮ ನೆನಪಿನ ಬುತ್ತಿಯಂತಿರುವ ಫೋಟೋಗಳನ್ನು ಡಿಲೀಟ್ ಮಾಡದೆಯೇ ಫೋನ್ ಸ್ಟೋರೇಜ್ ಅನ್ನು ಹೇಗೆ ಹೆಚ್ಚಿಸಿಕೊಳ್ಳಬಹುದು ಎಂಬುದಕ್ಕೆ ಇಲ್ಲಿದೆ ಸರಳ ಪರಿಹಾರಗಳು.
ಕ್ಲೌಡ್ ಸ್ಟೋರೇಜ್‌ಗಳ ಸದುಪಯೋಗ
ಫೋಟೋಗಳನ್ನು ಸುರಕ್ಷಿತವಾಗಿಡಲು ಅತ್ಯುತ್ತಮ ಮಾರ್ಗವೆಂದರೆ ಕ್ಲೌಡ್ ಸೇವೆಗಳನ್ನು ಬಳಸುವುದು. ಆಂಡ್ರಾಯ್ಡ್ ಬಳಕೆದಾರರು ಗೂಗಲ್ ಫೋಟೋಸ್ (Google photos) ಅಥವಾ ಗೂಗಲ್ ಡ್ರೈವ್ ಅನ್ನು ಬಳಸಬಹುದು. ಇದರಲ್ಲಿ 'ಬ್ಯಾಕಪ್' ಆಪ್ಷನ್ ಆನ್ ಮಾಡಿದರೆ, ಫೋಟೋಗಳು ಆನ್‌ಲೈನ್‌ನಲ್ಲಿ ಸೇವ್ ಆಗುತ್ತವೆ. ಆ ನಂತರ ಫೋನ್ ಗ್ಯಾಲರಿಯಿಂದ ಅವುಗಳನ್ನು ಮುಕ್ತವಾಗಿ ಡಿಲೀಟ್ ಮಾಡಬಹುದು. ಆಪಲ್ ಬಳಕೆದಾರರು ಐಕ್ಲೌಡ್ ಬಳಸಬಹುದು.
ಕ್ಯಾಶ್ ಡೇಟಾ ಕ್ಲಿಯರ್ ಮಾಡಿ
ನಾವು ಪ್ರತಿದಿನ ಬಳಸುವ ವಾಟ್ಸಾಪ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್‌ನಂತಹ ಆಪ್‌ಗಳು ಫೋನ್‌ನಲ್ಲಿ ಸಾಕಷ್ಟು 'ಕ್ಯಾಶ್ ಡೇಟಾ'ವನ್ನು ಸಂಗ್ರಹಿಸಿಡುತ್ತವೆ. ಫೋನ್ ಸೆಟ್ಟಿಂಗ್ಸ್‌ಗೆ ಹೋಗಿ, ಆಪ್ ಮ್ಯಾನೇಜರ್ ಮೂಲಕ ಈ ಜಂಕ್ ಫೈಲ್‌ಗಳನ್ನು ಕ್ಲಿಯರ್ ಮಾಡುವುದರಿಂದ ಯಾವುದೇ ಪ್ರಮುಖ ಫೈಲ್ ಡಿಲೀಟ್ ಆಗದೆ ಜಿಬಿ ಗಟ್ಟಲೆ ಸ್ಟೋರೇಜ್ ಸಿಗುತ್ತದೆ.
ವಾಟ್ಸಾಪ್ ಮೀಡಿಯಾ ಮ್ಯಾನೇಜ್‌ಮೆಂಟ್
ನಮ್ಮ ಫೋನ್ ಫುಲ್ ಆಗಲು ಮುಖ್ಯ ಕಾರಣ ವಾಟ್ಸಾಪ್ ಗ್ರೂಪ್‌ಗಳಿಗೆ ಬರುವ ಅನಗತ್ಯ ಗುಡ್ ಮಾರ್ನಿಂಗ್ ಇಮೇಜ್ ಮತ್ತು ವಿಡಿಯೋಗಳು. ವಾಟ್ಸಾಪ್ ಸೆಟ್ಟಿಂಗ್ಸ್‌ನಲ್ಲಿರುವ 'ಡೇಟಾ ಅಂಡ್ ಸ್ಟೋರೇಜ್' ಆಪ್ಷನ್ ಒಳಗೆ ಹೋಗಿ, ಅತಿ ಹೆಚ್ಚು ಸ್ಪೇಸ್ ತಿನ್ನುತ್ತಿರುವ ದೊಡ್ಡ ಫೈಲ್‌ಗಳನ್ನು ಮಾತ್ರ ಆಯ್ದು ಡಿಲೀಟ್ ಮಾಡಬಹುದು.
ಲೈಟ್ ಆಪ್‌ಗಳ ಬಳಕೆ
ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ಗಳಂತಹ ಭಾರೀ ಗಾತ್ರದ ಆಪ್‌ಗಳ ಬದಲಿಗೆ ಅವುಗಳ 'ಲೈಟ್' ಆವೃತ್ತಿಗಳನ್ನು ಬಳಸಿ. ಇವು ಫೋನ್‌ನ ಇಂಟರ್ನಲ್ ಮೆಮೊರಿಯನ್ನು ತುಂಬಾ ಕಡಿಮೆ ಬಳಸಿಕೊಳ್ಳುತ್ತವೆ.



