HEALTH TIPS

ಆಹಾರ ಸುರಕ್ಷತೆ ನಿಯಮ ಉಲ್ಲಂಘನೆ | ಇನ್‌ಸ್ಟಾಮಾರ್ಟ್‌ ಗೆ FSSAI ನಿಂದ 9 ನೋಟಿಸ್ ಜಾರಿ

 ನವದೆಹಲಿ: ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ(FSSAI)ವು ಜನಪ್ರಿಯ ಕ್ವಿಕ್-ಕಾಮರ್ಸ್ ವೇದಿಕೆ ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006ರ ಅಡಿಯಲ್ಲಿ ನಿಯಮ ಉಲ್ಲಂಘನೆಗಳಿಗಾಗಿ 9 ನೋಟಿಸ್‌ಗಳನ್ನು ಜಾರಿಗೊಳಿಸಿದೆ. 


FSSAI ಪ್ರಕಾರ, ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಮೂಲಕ ಅವಧಿ ಮುಗಿದ, ಹಾಳಾದ, ಕೊಳೆತ, ಕಲುಷಿತ ಹಾಗೂ ಅಸುರಕ್ಷಿತ ಆಹಾರ ಉತ್ಪನ್ನಗಳನ್ನು ಪೂರೈಸಲಾಗುತ್ತಿದೆ ಎಂಬ ಹಲವು ಗ್ರಾಹಕರ ದೂರುಗಳ ಆಧಾರದ ಮೇಲೆ ಈ ನೋಟಿಸ್‌ಗಳನ್ನು ನೀಡಲಾಗಿದೆ. ಅಲ್ಲದೆ, ಪದೇ ಪದೇ ದೂರು ನೀಡಿದರೂ ಕಂಪನಿಯು ಯಾವುದೇ ತೃಪ್ತಿಕರ ಉತ್ತರ ನೀಡಿಲ್ಲ ಎಂದು ಗ್ರಾಹಕರು ಆರೋಪಿಸಿದ್ದಾರೆ.

ಸವಿಸ್ತಾರ ವಿವರಣೆ ಮತ್ತು ಅನುಸರಣೆ ವರದಿಯನ್ನು ಸಲ್ಲಿಸುವಂತೆ ಇನ್‌ಸ್ಟಾಮಾರ್ಟ್‌ಗೆ ನಿರ್ದೇಶನ ನೀಡಲಾಗಿದೆ. ಇದಕ್ಕೆ ವಿಫಲವಾದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ ಎಂದು ಎಫ್‌ಎಸ್‌ಎಸ್‌ಎಐ ಎಕ್ಸ್‌ನಲ್ಲಿ ಪ್ರಕಟಿಸಿರುವ ಹೇಳಿಕೆಯಲ್ಲಿ ತಿಳಿಸಿದೆ.

ಶಿಶು ಆಹಾರ ಉತ್ಪನ್ನವೊಂದು ಅತ್ಯಂತ ಕೆಟ್ಟ ಮತ್ತು ಅಸುರಕ್ಷಿತ ಸ್ಥಿತಿಯಲ್ಲಿ ಕಂಡುಬಂದಿದ್ದು, ಕಲುಷಿತಗೊಂಡಿರುವ ಹಾಗೂ ಅನುಚಿತ ಸಂಗ್ರಹಣೆ ಮತ್ತು ನಿರ್ವಹಣೆಯ ಲಕ್ಷಣಗಳನ್ನು ಹೊಂದಿತ್ತು. ದೋಷಪೂರಿತ ವಸ್ತುವನ್ನು ಹಿಂತಿರುಗಿಸಿದ ಬಳಿಕವೂ ಅದೇ ಉತ್ಪನ್ನವನ್ನು ಮತ್ತೆ ಸರಬರಾಜು ಮಾಡಲಾಗಿದೆ ಎಂದೂ ಗ್ರಾಹಕರು ಆರೋಪಿಸಿದ್ದಾರೆ.

ತಪ್ಪು, ಅಮಾನ್ಯ ಅಥವಾ ಅಸ್ತಿತ್ವದಲ್ಲಿಲ್ಲದ ಎಫ್‌ಎಸ್‌ಎಸ್‌ಎಐ ಪರವಾನಗಿ ಸಂಖ್ಯೆಗಳನ್ನು ಬಳಸಿರುವುದು ಮತ್ತು FSSAI ನೋಂದಣಿಯಲ್ಲಿರುವ ಹೆಸರುಗಳಿಗಿಂತ ಭಿನ್ನವಾದ ಹೆಸರುಗಳಲ್ಲಿ ಆಹಾರ ವ್ಯವಹಾರಗಳನ್ನು ಪಟ್ಟಿ ಮಾಡಿರುವ ಬಗ್ಗೆಯೂ ನೋಟಿಸ್‌ ಗಳಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries