HEALTH TIPS

'Nudify' ಅಪ್ಲಿಕೇಶನ್‌ ಗಳನ್ನು ಹೋಸ್ಟ್ ಮಾಡುತ್ತಿರುವ Apple, Google ವಿರುದ್ಧ ಅಮೆರಿಕದಲ್ಲಿ ಕಾನೂನು ಕ್ರಮ

 ಸ್ಯಾನ್ ಫ್ರಾನ್ಸಿಸ್ಕೊ ನಗರವು Apple ಮತ್ತು Google ಕಂಪನಿಗಳಿಗೆ ತಮ್ಮ ಆಯಪ್ ಸ್ಟೋರ್‌ಗಳಿಂದ ಡಝನ್ ಗಟ್ಟಲೆ AI-ಚಾಲಿತ 'Nudify' (ನಗ್ನಗೊಳಿಸುವ) ಅಪ್ಲಿಕೇಶನ್‌ ಗಳನ್ನು ತೆಗೆದುಹಾಕುವಂತೆ ಆದೇಶಿಸಿದೆ.


ಅಧಿಕಾರಿಗಳು ಹೇಳಿರುವ ಪ್ರಕಾರ, ಇಂತಹ ಸಾಫ್ಟ್‌ವೇರ್ ಒಪ್ಪಿಗೆಯಿಲ್ಲದ ಖಾಸಗಿ ಡೀಪ್‌ ಫೇಕ್‌ಗಳನ್ನು (non-consensual intimate deepfakes) ರಚಿಸಲು ಅನುವು ಮಾಡಿಕೊಡುತ್ತಿದ್ದು, ಕ್ಯಾಲಿಫೋರ್ನಿಯಾದ ಕಾನೂನನ್ನು ಉಲ್ಲಂಘಿಸುತ್ತದೆ. ಎರಡೂ ಕಂಪೆನಿಗಳಿಗೂ ಈ ಅಪ್ಲಿಕೇಶನ್‌ ಗಳ ಉಪಸ್ಥಿತಿ ಮತ್ತು ಅವುಗಳಿಗೆ ಸಂಬಂಧಿಸಿದ ಕಾನೂನು ಅಪಾಯಗಳ ಬಗ್ಗೆ ತಿಳಿದಿದ್ದರೂ, ಅಂತಹ ಅಪ್ಲಿಕೇಶನ್‌ ಗಳನ್ನು ಹೋಸ್ಟ್ ಮಾಡುವುದು ಮತ್ತು ಅವುಗಳ ಪಾವತಿಯನ್ನು ಸಂಸ್ಕರಿಸುವುದನ್ನು ಮುಂದುವರಿಸಿವೆ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ.

ಸ್ಯಾನ್ ಫ್ರಾನ್ಸಿಸ್ಕೊ ನಗರದ ಅಟಾರ್ನಿ ಡೇವಿಡ್ ಚಿಯು ಅವರ ಪ್ರಕಾರ, ಎರಡೂ ಕಂಪೆನಿಗಳು ಇಂತಹ ಸಾಫ್ಟ್‌ವೇರ್‌ ಗಳಿಂದ ಲಾಭ ಪಡೆಯುತ್ತಿವೆ. ಒಪ್ಪಿಗೆಯಿಲ್ಲದ ಇಂಟಿಮೇಟ್ ಡೀಪ್‌ಫೇಕ್‌ಗಳನ್ನು ರಚಿಸಲು ಅವಕಾಶ ಕಲ್ಪಿಸುವ ಮೂಲಕ ಮಹಿಳೆಯರು ಮತ್ತು ಹುಡುಗಿಯರನ್ನು ಶೋಷಿಸುವ ಅಪ್ಲಿಕೇಶನ್‌ಗಳಿಂದ ಲಾಭ ಗಳಿಸುತ್ತಿವೆ. ಲೈಂಗಿಕ ದೌರ್ಜನ್ಯವನ್ನು ಸಕ್ರಿಯವಾಗಿ ಸುಗಮಗೊಳಿಸುವ ಸಾಫ್ಟ್‌ವೇರ್ ವಿತರಣೆಯನ್ನು ತಡೆಯುವ ಜವಾಬ್ದಾರಿ ಕಂಪೆನಿಗಳ ಮೇಲಿದೆ ಎಂದು ಅವರು ಹೇಳಿದ್ದಾರೆ.

ಡೇವಿಡ್ ಚಿಯು ಅವರ ಕಚೇರಿಯಿಂದ ಎರಡೂ ಕಂಪನಿಗಳಿಗೆ ಪತ್ರಗಳನ್ನು ಕಳುಹಿಸಲಾಗಿದೆ. ಕೃತಕ ಬುದ್ಧಿಮತ್ತೆ ಬಳಸುವ ಇಂತಹ ಸಾಫ್ಟ್‌ವೇರ್‌ಗಳ ಕುರಿತು ಒಂದು ವರ್ಷದ ಹಿಂದೆಯೇ ನೋಟಿಸ್ ನೀಡಲಾಗಿತ್ತು. ಪುನರಾವರ್ತಿತ ಎಚ್ಚರಿಕೆಗಳ ನಂತರವೂ ಕಂಪನಿಗಳು ಅಂತಹ ಸೇವೆಗಳ ಪಾವತಿಯನ್ನು ಪ್ರಕ್ರಿಯೆಗೊಳಿಸುವುದನ್ನು ಮುಂದುವರಿಸಿವೆ ಎಂದು ಅಟಾರ್ನಿ ಹೇಳಿದ್ದಾರೆ.

ಟೆಕ್ ಟ್ರಾನ್ಸ್‌ಪರೆನ್ಸಿ ಪ್ರಾಜೆಕ್ಟ್ (TTP) ವರದಿಯ ಪ್ರಕಾರ, ಜನವರಿ ಮತ್ತು ಏಪ್ರಿಲ್ ನಡುವೆ Apple‌ನ ಆಯಪ್ ಸ್ಟೋರ್ ಮತ್ತು Google‌ನ Google Play ಮೂಲಕ ಲಭ್ಯವಿದ್ದ ಡಝನ್ ಗಟ್ಟಲೆ ಅಪ್ಲಿಕೇಶನ್‌ ಗಳು ಬಳಕೆದಾರರ ಒಪ್ಪಿಗೆಯಿಲ್ಲದೆ ಜನರ AI-ರಚಿತ ನಗ್ನ ಚಿತ್ರಗಳನ್ನು ಸೃಷ್ಟಿಸಲು ಅವಕಾಶ ಮಾಡಿಕೊಟ್ಟಿವೆ. ಈ ವರದಿಯನ್ನು ಅನುಸರಿಸಿ ಅಟಾರ್ನಿ ಕಚೇರಿಯಿಂದ ನೋಟಿಸ್ ಕಳುಹಿಸಲಾಗಿದೆ. ಹುಡುಕಾಟದ ಶಿಫಾರಸುಗಳು ಮತ್ತು ಆಯಪ್ ಪಟ್ಟಿಗಳ ಮೂಲಕ ಎರಡೂ ವೇದಿಕೆಗಳು ಈ ಆಯಪ್‌ಗಳಲ್ಲಿ ಕೆಲವನ್ನು ಪ್ರಚಾರ ಮಾಡಿವೆ ಎಂದು TTP ಆರೋಪಿಸಿದೆ.

ಒಪ್ಪಿಗೆಯಿಲ್ಲದ ಡೀಪ್‌ಫೇಕ್ ಅಶ್ಲೀಲತೆಯ ಸೃಷ್ಟಿಗೆ ತಿಳಿದಿದ್ದೂ ಅನುಕೂಲ ಮಾಡಿಕೊಡುವುದು ಅಥವಾ ಸಹಾಯ ಮಾಡುವುದು ಅಪರಾಧವೆಂದು ಪರಿಗಣಿಸಿರುವ ಕ್ಯಾಲಿಫೋರ್ನಿಯ ಕಾನೂನಿನಡಿ Apple ಮತ್ತು Google ನಾಗರಿಕ ದಂಡವನ್ನು ಎದುರಿಸಬೇಕಾಗಬಹುದು ಎಂದು ಅಟಾರ್ನಿಯವರ ಕಚೇರಿ ಎಚ್ಚರಿಸಿದೆ. ಎರಡೂ ಕಂಪನಿಗಳಿಗೆ ಪ್ರತಿಕ್ರಿಯಿಸಲು 28 ದಿನಗಳ ಕಾಲಾವಕಾಶ ನೀಡಲಾಗಿದೆ.

Apple ಹೇಳಿರುವ ಪ್ರಕಾರ, ನಗ್ನತೆ ರಚಿಸುವ ಅಪ್ಲಿಕೇಶನ್‌ಗಳನ್ನು ತನ್ನ ಆಯಪ್ ಸ್ಟೋರ್‌ನಿಂದ ತೆಗೆದುಹಾಕಿದೆ. ಕ್ಯಾಲಿಫೋರ್ನಿಯಾ ಅಧಿಕಾರಿಗಳು ಉಲ್ಲೇಖಿಸಿದ ಮೂರು ಆಯಪ್‌ಗಳನ್ನು ತೆಗೆದುಹಾಕಲಾಗಿದೆ. ಸಂಬಂಧಿತ ಡೆವಲಪರ್‌ಗಳ ಖಾತೆಗಳನ್ನೂ ರದ್ದುಗೊಳಿಸಲಾಗಿದೆ. ಇತರ ನಾಲ್ಕು ಡೆವಲಪರ್‌ಗಳನ್ನು ಸಂಪರ್ಕಿಸಲಾಗಿದೆ ಎಂದು ಕಂಪನಿ ಹೇಳಿದೆ.

Google ಕೂಡ ಪ್ರತಿಕ್ರಿಯಿಸಿದ್ದು, ಅಟಾರ್ನಿಯವರ ಪತ್ರದಲ್ಲಿ ಉಲ್ಲೇಖಿಸಲಾದ ಐದು Play Store ಅಪ್ಲಿಕೇಶನ್‌ಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದೆ. Google‌ನಲ್ಲಿ 'Nudify' ಎಂಬ ಹುಡುಕಾಟ ಪದವನ್ನು ನಿರ್ಬಂಧಿಸಿದ್ದು, ನೂರಾರು ಅಕ್ಷೇಪಾರ್ಹ ಅಪ್ಲಿಕೇಶನ್‌ಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಕಂಪೆನಿ ಹೇಳಿದೆ. ಅಲ್ಲದೆ, ವರದಿಯಾದ ಉಲ್ಲಂಘನೆಗಳ ಕುರಿತು ತನಿಖೆ ನಡೆಸುವುದಾಗಿ ತಿಳಿಸಿದೆ.

AI-ರಚಿತ ಡೀಪ್‌ಫೇಕ್ ಅಶ್ಲೀಲತೆಯು ಹೆಚ್ಚುತ್ತಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ. ತಾರೆಯರನ್ನು ಆಗಾಗ್ಗೆ ಗುರಿಪಡಿಸಲಾಗುತ್ತಿದ್ದರೂ, AI ಇಮೇಜ್ ರಚಿಸುವ ಸಾಧನಗಳು ಸಾರ್ವಜನಿಕವಾಗಿ ಲಭ್ಯವಿರುವ ಯಾವುದೇ ಫೋಟೋಗಳನ್ನು ಗುರಿಯಾಗಿಸಬಲ್ಲವು..





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries