HEALTH TIPS

ಕಠಿಣ ವಲಸೆ ನೀತಿ: ಅಮೆರಿಕಕ್ಕೆ ಹೋಗುವ ವಿದ್ಯಾರ್ಥಿಗಳ ಸಂಖ್ಯೆ ಶೇ 15ರಷ್ಟು ಕುಸಿತ

ವಾಷಿಂಗ್ಟನ್: ಅಮೆರಿಕದಲ್ಲಿ ಉನ್ನತ ಶಿಕ್ಷಣ ಪಡೆಯಲು ಭಾರತದ ವಿದ್ಯಾರ್ಥಿಗಳು ಹಿಂದೇಟು ಹಾಕುತ್ತಿದ್ದಾರೆಯೇ?

- ಹೌದು ಎನ್ನುತ್ತಿದೆ ಇತ್ತೀಚೆಗೆ ಪ್ರಕಟವಾಗಿರುವ ವರದಿ. 


2025-26ನೇ ಶೈಕ್ಷಣಿಕ ವರ್ಷಕ್ಕೆ ಹೋಲಿಸಿದರೆ 2026-27ರಲ್ಲಿ ಅಮೆರಿಕದ ಕಾಲೇಜುಗಳಿಗೆ ಅರ್ಜಿ ಸಲ್ಲಿಸಿದ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಶೇ 15ರಷ್ಟು ಕಡಿಮೆಯಾಗಿದೆ.

ಕಠಿಣ ವಲಸೆ ನೀತಿ, ವೀಸಾ ನಿಯಮ ಕುರಿತ ಅನಿಶ್ಚಿತತೆಯೇ ಇದಕ್ಕೆ ಕಾರಣ ಎನ್ನಲಾಗಿದೆ.

1,100ಕ್ಕೂ ಹೆಚ್ಚು ಶೈಕ್ಷಣಿಕ ಸಂಸ್ಥೆಗಳನ್ನು ಪ್ರತಿನಿಧಿಸುವ 'ಕಾಮನ್‌ ಆಯಪ್‌' ಈ ವರದಿ ಬಿಡುಗಡೆ ಮಾಡಿದೆ. ಅದರಲ್ಲಿನ ಮಾಹಿತಿ ಪ್ರಕಾರ, ಅಮೆರಿಕದ ಕಾಲೇಜುಗಳ ಪದವಿ ಕೋರ್ಸ್‌ಗಳಿಗೆ 2026-27ನೇ ಸಾಲಿನಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳ ಒಟ್ಟಾರೆ ಸಂಖ್ಯೆ ಏರಿಕೆಯಾಗಿದೆ. ಆದರೆ, ವಿದೇಶಿ ವಿದ್ಯಾರ್ಥಿಗಳಿಂದ ಬಂದಿರುವ ಅರ್ಜಿಗಳ ಒಟ್ಟು ಸಂಖ್ಯೆಯನ್ನು ಗಮನಿಸಿದರೆ ಶೇ 10ರಷ್ಟು ಕುಸಿತವಾಗಿರುವುದು ಗೋಚರಿಸುತ್ತದೆ.

ಅಮೆರಿಕದಲ್ಲಿ ಓದುವ ಅಂತರರಾಷ್ಟ್ರೀಯ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ಭಾರತ ಮೂಲದವರು. 2024-25ನೇ ಶೈಕ್ಷಣಿಕ ವರ್ಷದಲ್ಲಿ 3.63 ಲಕ್ಷಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಅಲ್ಲಿನ ವಿವಿಧ ಸಂಸ್ಥೆಗಳಲ್ಲಿ ದಾಖಲಾಗಿದ್ದರು.

ಆದಾಯವೂ ಇಳಿಕೆ
ವಿದೇಶಿ ವಿದ್ಯಾರ್ಥಿಗಳಿಂದ ಅಮೆರಿಕದ ಆರ್ಥಿಕತೆಗೆ ಬರುತ್ತಿದ್ದ ವರಮಾನವೂ ಇಳಿಕೆಯಾಗಿದೆ. 2025-26ರಲ್ಲಿ ಸುಮಾರು 41.77 ಬಿಲಿಯನ್‌ ಡಾಲರ್‌ (₹ 3.99 ಲಕ್ಷ ಕೋಟಿ) ಕೊಡುಗೆ ಸಿಕ್ಕಿತ್ತು. 2026-27ರಲ್ಲಿ ಅದು 38.37 ಬಿಲಿಯನ್ ಡಾಲರ್‌ಗೆ (₹ 3.67 ಲಕ್ಷ ಕೋಟಿಗೆ) ಇಳಿಕೆಯಾಗುವ ಸಾಧ್ಯತೆ ಇದೆ.

ವಿದೇಶಿ ವಿದ್ಯಾರ್ಥಿಗಳಿಗಾಗಿನ ರಾಷ್ಟ್ರೀಯ ಸಂಘಟನೆ 'ಎನ್‌ಎಎಫ್‌ಎಸ್‌ಎ' ಹಾಗೂ ಜೆಬಿ ಇಂಟರ್‌ನ್ಯಾಷನಲ್ ಪ್ರಕಟಿಸಿರುವ ವರದಿ ಪ್ರಕಾರ, ಕಠಿಣ ವೀಸಾ ನಿಯಮಗಳಿಂದಾಗಿ 2026ರಲ್ಲಿ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆ ಸುಮಾರು 1.1 ಲಕ್ಷದಷ್ಟು ಕುಸಿಯಬಹುದು. ಅಂದರೆ, 2025-26ರಲ್ಲಿ 11.69 ಲಕ್ಷದಷ್ಟಿದ್ದ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆ, ಈ ಸಾಲಿನಲ್ಲಿ 10.57 ಲಕ್ಷಕ್ಕೆ ಇಳಿಯುಬಹುದು ಎನ್ನಲಾಗಿದೆ.

ವಿದ್ಯಾರ್ಥಿಗಳಿಗೆ ಹೊಸ ನಿಯಮ
ಅಮೆರಿಕ ಸರ್ಕಾರ ವಿದೇಶಿ ವಿದ್ಯಾರ್ಥಿಗಳಿಗೆ ಅನ್ವಯವಾಗುವಂತೆಯೂ ವೀಸಾ ನಿಯಮದಲ್ಲಿ ಬದಲಾವಣೆಗಳನ್ನು ತಂದಿದೆ. ಕೋರ್ಸ್‌ಗಳ ಅವಧಿಗೆ ಅನುಗುಣವಾಗಿ ನಾಲ್ಕು ವರ್ಷಗಳ ಮಿತಿ ನಿಗದಿಪಡಿಸುವ ಯೋಜನೆಯನ್ನು ಜುಲೈನಲ್ಲಿ ಪ್ರಕಟಿಸಿದೆ.

ಪದವಿ ಶಿಕ್ಷಣ ಪೂರೈಸಿದ ನಂತರವೂ ಅಮೆರಿಕದಲ್ಲಿ ಐಚ್ಛಿಕ ಪ್ರಾಯೋಗಿಕ ತರಬೇತಿ ಪಡೆಯಲು ಬಯಸಿದರೆ ವಿದೇಶಿ ವಿದ್ಯಾರ್ಥಿಗಳಿಗೆ 1 ಲಕ್ಷ ಡಾಲರ್ (₹ 95 ಲಕ್ಷ) ಶುಲ್ಕ ವಿಧಿಸುವ ಬಗ್ಗೆಯೂ ಅಮೆರಿಕ ಚಿಂತನೆ ನಡೆಸುತ್ತಿದೆ.

ಹಾಗೆಯೇ, ವಿದ್ಯಾಭ್ಯಾಸದ ನಂತರ ಅಮೆರಿಕದಲ್ಲೇ ಉಳಿಯಲು, ಕೆಲಸ ಮಾಡಲು ಬಯಸುವ ವಿದ್ಯಾರ್ಥಿಗಳು ಎಚ್‌-1ಬಿ ವೀಸಾವನ್ನೇ ನೆಚ್ಚಿಕೊಂಡಿದ್ದಾರೆ. ಆದರೆ, ಹೋಮ್‌ಲ್ಯಾಂಡ್‌ ಸೆಕ್ಯುರಿಟಿ ಇಲಾಖೆಯು, ಎಚ್‌-1ಬಿ ವೀಸಾ ಅರ್ಜಿಗಳಿಗೆ ಹೆಚ್ಚುವರಿಯಾಗಿ 1.03 ಲಕ್ಷ ಡಾಲರ್‌ (₹ 98 ಲಕ್ಷ) ವಿಧಿಸುವ ಪ್ರಸ್ತಾವನೆ ಇಟ್ಟಿದೆ.

H-1B Visasದಲ್ಲಿ ಹಗರಣ: ಚೆನ್ನೈನಿಂದ 2 ಲಕ್ಷ ವಿತರಣೆ; US ಆರ್ಥಿಕ ತಜ್ಞನ ಆರೋಪH-1B ವೀಸಾ ದುರುಪಯೋಗ: 175 ಪ್ರಕರಣಗಳ ತನಿಖೆಗೆ ಟ್ರಂಪ್ ಆಡಳಿತ ಆದೇಶ







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries