HEALTH TIPS

ಇಬ್ಬರು ಮಹಿಳಾ ಪೊಲೀಸ್ ಪೇದೆಗಳು ಮದುವೆಗೆ ಸಜ್ಜು! ಆಶ್ಚರ್ಯ ಮೂಡಿಸಿದ ರಜೆ ಅರ್ಜಿ

 ಪುಣೆ: ಪಿಂಪ್ರಿ-ಚಿಂಚವಾಡ ಪೊಲೀಸ್ ಕಮಿಷನರೇಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇಬ್ಬರು ಮಹಿಳಾ ಪೊಲೀಸ್ ಪೇದೆಗಳು ಆಲಂದಿಯಲ್ಲಿ ಆಗಸ್ಟ್ 30ರಂದು ವಿವಾಹವಾಗಲು ರಜೆ ಕೋರಿ ಅರ್ಜಿ ಸಲ್ಲಿಸಿದ್ದಾರೆ.


ಈ ಘಟನೆ ಪೊಲೀಸ್ ಇಲಾಖೆಯಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಕುಟುಂಬದವರಿಂದ ಆಕ್ಷೇಪವೂ ವ್ಯಕ್ತವಾಗಿದೆ.

ಮಹಾರಾಷ್ಟ್ರದ ಬೇರೆ ಬೇರೆ ಜಿಲ್ಲೆಯವರಾದ ಈ ಇಬ್ಬರು ಮಹಿಳೆಯರು 2018ರಲ್ಲಿ ಪೊಲೀಸ್ ಪಡೆಗೆ ಸೇರ್ಪಡೆಯಾಗಿದ್ದರು. ಕಳೆದ ಮೂರು ವರ್ಷಗಳಿಂದ ಒಂದೇ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇವರಿಬ್ಬರೂ ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾರೆ. ಈ ವೇಳೆ ಇವರಿಬ್ಬರ ನಡುವಿನ ಸ್ನೇಹವು ಪ್ರೀತಿಯಾಗಿ ಬದಲಾಗಿದೆ.

ಇಬ್ಬರೂ ವೈದಿಕ ಸಂಪ್ರದಾಯದಂತೆ ಮದುವೆಯಾಗಲು ನಿರ್ಧರಿಸಿದ್ದಾರೆ. ಮದುವೆ ಕರೆಯೋಲೆಯೊಂದಿಗೆ ಮೇಲಧಿಕಾರಿಗಳಿಗೆ ರಜೆಗಾಗಿ ಅರ್ಜಿ ಸಲ್ಲಿಸಿದ್ದಾರೆ.

ಲಿಂಗ ಪರಿವರ್ತನೆ ಚಿಕಿತ್ಸೆ

ಈ ಇಬ್ಬರಲ್ಲಿ ಒಬ್ಬರು ಮುಂಬೈನ ಪ್ರಮುಖ ಆಸ್ಪತ್ರೆಯೊಂದರಲ್ಲಿ ಲಿಂಗ ಪರಿವರ್ತನೆ ಚಿಕಿತ್ಸೆಗೆ ಒಳಗಾಗಲಿದ್ದಾರೆ. ಆ ಪ್ರಕ್ರಿಯೆ ಪೂರ್ಣಗೊಂಡ ನಂತರ ತಮ್ಮ ಮದುವೆಯನ್ನು ಕಾನೂನುಬದ್ಧವಾಗಿ ನೋಂದಾಯಿಸಲು ಇಬ್ಬರೂ ಯೋಜಿಸುತ್ತಿದ್ದಾರೆ.

ಮತ್ತೊಂದು ಲಿಂಗ ಪರಿವರ್ತನೆ ಪ್ರಕರಣ

ಇದೇ ಪಿಂಪ್ರಿ-ಚಿಂಚವಾಡ ಕಮಿಷನರೇಟ್‌ನಲ್ಲಿ ಮತ್ತೊಬ್ಬ ಮಹಿಳಾ ಸಿಬ್ಬಂದಿ ಸರ್ಕಾರದಿಂದ ಅನುಮತಿ ಪಡೆದು ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಪ್ರಸ್ತುತ ತಮ್ಮನ್ನು ಸೇವಾ ಪುಸ್ತಕದಲ್ಲಿ ಪುರುಷ ಅಧಿಕಾರಿಯೆಂದು ಗುರುತಿಸುವಂತೆ ಅವರು ಸಲ್ಲಿಸಿದ ಅರ್ಜಿ ಪರಿಶೀಲನೆಯಲ್ಲಿದೆ.

ಈ ಎರಡು ಪ್ರತ್ಯೇಕ ಘಟನೆಗಳು ಪೊಲೀಸ್ ಇಲಾಖೆಯಲ್ಲಿ ಲಿಂಗ ಗುರುತು, ಸೇವಾ ದಾಖಲೆಗಳ ನವೀಕರಣ ಮತ್ತು ಸಲಿಂಗಿ ಸಂಬಂಧಗಳ ಕಾನೂನುಬದ್ಧತೆಯ ಕುರಿತು ಹೊಸ ಚರ್ಚೆಯನ್ನು ಹುಟ್ಟುಹಾಕಿವೆ.


A unique wedding within the Pimpri-Chinchwad Police Department has caught attention after two women police employees working at the same police station decided to marry each other. Both have reportedly submitted leave applications to senior officers for the wedding and attached Show more







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries