ಕಾಸರಗೋಡು: ಕೂಡ್ಲು ಸನಿಹ ಪೆÇಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ನಿರ್ಜನ ಪ್ರದೇಶದ ಹಿತ್ತಿಲಲ್ಲಿ ದಾಸ್ತಾನಿರಿಸಿದ್ದ 86.400 ಲೀಟರ್ ಆಂಧ್ರಪ್ರದೇಶ ನಿರ್ಮಿತ ವಿದೇಶಿ ಮದ್ಯ ವಶಪಡಿಸಿಕೊಂಡಿದ್ದಾರೆ.
ಕೂಡ್ಲು ಉಳಿಯತ್ತಡ್ಕ-ಚೌಕಿ ರಸ್ತೆಯ ನೇಶನಲ್ ನಗರದಲ್ಲಿರುವ ಗ್ರಾಮ ಕಚೇರಿಗೆ ಸಮೀಪದ ನಿರ್ಜನ ಪ್ರದೇಶದ ಹಿತ್ತಿಲಿನಿಂದ ಈ ಮದ್ಯ ಪತ್ತೆಹಚ್ಚಲಾಗಿದೆ. ಹತ್ತು ಕಾರ್ಡ್ ಬೋರ್ಡ್ ಪೆಟ್ಟಿಗೆಗಳಲ್ಲಿ ತುಂಬಿಸಿಡಲಾಗಿದ್ದ 180 ಎಂಎಲ್ನ 480 ಬಾಟಲಿ ಮದ್ಯ ಇಲ್ಲಿಂದ ಪತ್ತೆಹಚ್ಚಲಾಗಿದೆ. ಮದ್ಯವನ್ನು ಹೊರ ರಾಜ್ಯಗಳಿಂದ ವಾಹನಗಳಲ್ಲಿ ಇಲ್ಲಿಗೆ ತಂದು ದಾಸ್ತಾನಿರಿಸಿ, ಇಲ್ಲಿಂದ ಬಿಡಿ ಮದ್ಯ ಮಾರಾಟಗಾರರಿಗೆ ವಿತರಿಸುವ ಯೋಜನೆಯನ್ನಿರಿಸಿಕೊಂಡಿರಬೇಕೆಂದು ಪೆÇಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.
ಕಾಸರಗೋಡು ನಗರರಾಣಿಯ ಎಸ್.ಐ ಮನು ನೇತೃತ್ವದ ಪೆÇಲೀಸರ ತಂಡ ಈ ಕಾರ್ಯಾಚರಣೆ ನಡೆಸಿದೆ. ಈ ಪ್ರದೇಶದಲ್ಲಿ ಅಕ್ರಮ ಮದ್ಯ ಸಾಗಾಟದವರ ಬಗ್ಗೆ ಸ್ಪಷ್ಟ ಮಾಹಿತಿ ಲಭಿಸಿದ್ದು, ಅದರ ಆಧಾರದಲ್ಲಿ ತನಿಖೆ ನಡೆಸಲಾಗುತ್ತಿದೆಯೆಂದೂ ಪೆÇಲೀಸರು ತಿಳಿಸಿದ್ದಾರೆ.

