HEALTH TIPS

ಕಾಸರಗೋಡು ಜಿಲ್ಲಾ ಮಕ್ಕಳ ಸಾಹಿತ್ಯೋತ್ಸವ, "ಚಿಗುರಿದ ಕನಸು" ಚುಟುಕು ಸಂಕಲನ ಬಿಡುಗಡೆ

ಕಾಸರಗೋಡು: ಮಕ್ಕಳಲ್ಲಿ ಸುಪ್ತವಾಗಿರುವ ಪ್ರತಿಭೆಯನ್ನು ಪೆÇೀಷಿಸುವ ಮೂಲಕ ಗಡಿನಾಡಿನಲ್ಲಿ ಕನ್ನಡವನ್ನು ಕಟ್ಟುವ ಕೆಲಸ ನಡೆಯಬೇಕಾಗಿದೆ ಎಂದು ಕವಿ, ಅಧ್ಯಾಪಕ, ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಹರೀಶ ಸುಲಾಯ ಒಡ್ಡಂಬೆಟ್ಟು ಹೇಳಿದರು.  


ಅವರು ಕಾಸರಗೋಡು ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನದ ಆಶ್ರಯದಲ್ಲಿ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕದ ಸಹಯೋಗದಲ್ಲಿ ಕಾಸರಗೋಡು ಕನ್ನಡ ಗ್ರಾಮದ ಸಭಾಂಗಣದಲ್ಲಿ ನಡೆದ ಚಿಗುರಿದ ಕನಸು ಕೃತಿ ಬಿಡುಗಡೆ ಮತ್ತು ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯೋತ್ಸವದ ಅಧ್ಯಕ್ಷತೆ ವಹಿಸಿ  ಮಾತನಾಡಿದರು.

ವಿಧ್ಯಾರ್ಥಿ ಪ್ರತಿಭೆ ಕು.ಸಮೃದ್ಧಿ ಆಳ್ವ ಅವರ ಚೊಚ್ಚಲ ಕವನ ಸಂಕಲನ "ಚಿಗುರಿದ ಕನಸು" ಕೃತಿಯನ್ನು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಬಿಡುಗಡೆಗೊಳಿಸಿದರು. ಮಂಗಳೂರಿನ ಅನಾವರಣ ಸಾಮಾಜಿಕ, ಸಾಹಿತ್ಯ ಸಾಂಸ್ಕೃತಿಕ ಅಭಿವೃದ್ದಿ ಪ್ರತಿಷ್ಠಾನದ ಅಧ್ಯಕ್ಷೆ , ವಕೀಲೆ ಪರಿಮಳ ರಾವ್ ಕೃತಿ ಪರಿಚಯ ಮಾಡಿದರು ಇದೇ ಸಂದರ್ಭದಲ್ಲಿ  ಕೃತಿ ಕರ್ತೆ ಸಮೃದ್ಧಿ ಆಳ್ವ ಅವರನ್ನು ಸನ್ಮಾನಿಸಲಾಯಿತು.

ಕವಿ, ಪತ್ರಕರ್ತ ರಾಧಾಕೃಷ್ಣ ಕೆ ಉಳಿಯತ್ತಡ್ಕ, ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಗೋಪಾಲಕೃಷ್ಣ ಶಾಸ್ತ್ರಿ, ಧಾರ್ಮಿಕ ಮುಂದಾಳು ಡಾ.ಕೆ. ಏನ್. ವೆಂಕಟ್ರಮಣ ಹೊಳ್ಳ , ಸಂಘಟಕ ಸುಭಾಷ್ ಪೆರ್ಲ, ಪ್ರಾಂಶುಪಾಲ ಬಿಂದುಸಾರ ಶೆಟ್ಟಿ, ಮುಖ್ಯ ಶಿಕ್ಷಕಿ ಸುರೇಖ ಕೆ.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸವಿತಾ ಟೀಚರ್ ಕಾಸರಗೋಡು, ಪತ್ರಕರ್ತ ವೀಜಿ ಕಾಸರಗೋಡು, ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘದ ನಿರ್ದೇಶಕ ಕೆ.ವಿ.ರಮೇಶ,  ಉಳ್ಳಾಲ ತಾಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ , ಮಂಗಳೂರಿನ  ರೇಡಿಯೋ ಸಾರಂಗ್  ಸಂಪಾದಕ ಎಡ್ವರ್ಡ್ ಲೋಬೊ ತೊಕ್ಕೊಟ್ಟು,  ಪ್ರಣವ್ ಕುಮಾರ್ ಆಳ್ವ, ಬಿಂದಿಯಾ ಆಳ್ವ, ಮಾಜಿ ನಗರ ಸಭಾ ಸದಸ್ಯ ಶಂಕರ ಕೆ, ವಿಷ್ಣು ಕೆ ಶ್ಯಾನುಭೋಗ್ , ಯೋಗೀಶ್ ಎನ್. ಕೋಟೆಕಣಿ, ಶ್ರೀಕಾಂತ್ ಕಾಸರಗೋಡು ಉಪಸ್ಥಿತರಿದ್ದರು. 

ಕರಾವಳಿ ಸಾಂಸ್ಕೃತಿಕ  ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಕೆ. ಜಗದೀಶ ಕೂಡ್ಲು ಸ್ವಾಗತಿಸಿದರು. ಕಲಾವಿದ ದಿವಾಕರ ಪಿ.ಅಶೋಕ ನಗರ ವಂದಿಸಿದರು. ಕವಯಿತ್ರಿ ಹರ್ಷಿತಾ ಪೆರ್ಲ ಕಾರ್ಯಕ್ರಮ ನಿರೂಪಿಸಿದರು.  ಕನ್ನಡ ಗ್ರಾಮದ ಕುಶಲ ಕುಮಾರ ಕೆ. ಕಾರ್ಯಕ್ರಮ ಸಂಯೋಜಿಸಿದರು. 

ಈ ಸಂದರ್ಭ ನಡೆದ ಕವಿಗೋಷ್ಠಿಯಲ್ಲಿ ಎಂ.ಎ ಮುಸ್ತಾಫಾ ಬೆಳ್ಳಾರೆ, ರವೀಂದ್ರನ್ ಪಾಡಿ, ಅವನಿ ಕರಿಂಬಿಲ, ಸುಮನಾ ಕರಿಂಬಿಲ, ಸರ್ವಮಂಗಳ ಪುಣಿಂಚಿತ್ತಾಯ , ಎಡ್ವರ್ಡ್ ಲೋಬೊ ತೊಕ್ಕೊಟ್ಟು, ಸಮೃದ್ಧಿ ಆಳ್ವ, ಸುತೀಕ್ಷಾ ಆಳ್ವ, ಶಶಿಕಲಾ ಟೀಚರ್ ಕುಂಬ್ಳೆ, ನೀತಿಕಾ ಚೌಕಿ, ಕೃಪೇಶ್ ಜಿ.ಎಸ್.ಕಲ್ಲಕಟ್ಟ ಸ್ವರಚಿತ ಕವನ ವಾಚಿಸಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries