HEALTH TIPS

ಇವಿಎಂಗೆ ಇಂಟರ್‌ನೆಟ್‌, ಬ್ಲೂಟೂತ್‌, ವೈಫೈ ಸಂಪರ್ಕವಿರಲ್ಲ: ಜ್ಞಾನೇಶ್‌ ಕುಮಾರ್

 ಲಖನೌ: ಭಾರತದ ಎಲೆಕ್ಟ್ರಾನಿಕ್ ಮತ ಯಂತ್ರಗಳನ್ನು(ಇವಿಎಂ) ಸಾರ್ವಜನಿಕ ಕಂಪನಿಗಳು ತಯಾರಿಸುತ್ತವೆ ಮತ್ತು ಆ ಯಂತ್ರಗಳಿಗೆ ಇಂಟರ್‌ನೆಟ್‌, ಬ್ಲೂಟೂತ್‌ ಅಥವಾ ವೈಫೈ ಸಂಪರ್ಕ ಇರುವುದಿಲ್ಲ ಎಂದು ದೇಶದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್ ಅವರು ಸೋಮವಾರ ತಿಳಿಸಿದರು.


ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ, ಚುನಾವಣಾ ಪ್ರಕ್ರಿಯೆ, ಇವಿಎಂಗಳ ವಿಶ್ವಾಸಾರ್ಹತೆ ಬಗ್ಗೆ ಅವರು ಲಖನೌನಲ್ಲಿ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದರು.

'ಯಾವುದೇ ಮಾಹಿತಿಯನ್ನು ಸ್ವೀಕರಿಸುವ ಮತ್ತು ಹಂಚಿಕೊಳ್ಳುವ ಮೊದಲು ಅದರ ಮೂಲ ಮತ್ತು ವಿಶ್ವಾಸಾರ್ಹತೆಯನ್ನು ಪರಿಶೀಲಿಸಬೇಕು' ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

'ದೇಶದಲ್ಲಿ ಸುಮಾರು 100 ಕೋಟಿ ಮತದಾರರಿದ್ದಾರೆ. ಇಷ್ಟು ಪ್ರಮಾಣದ ಮತದಾರರಿಗೆ ಚುನಾವಣೆ ನಡೆಸುವುದು ದೊಡ್ಡ ಸವಾಲಾಗಿರುತ್ತದೆ. ಚುನಾವಣೆಯು ಸುಲಲಿತವಾಗಿ ನಡೆಯಲು ಬೃಹತ್‌ ಪ್ರಮಾಣದಲ್ಲಿ ಅಧಿಕಾರಿಗಳು ಮತ್ತು ನೌಕರರು ಕೆಲಸ ಮಾಡುತ್ತಾರೆ' ಎಂದು ಹೇಳಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries