ಕಾಸರಗೋಡು: ಕರ್ನಾಟಕ ಗಮಕ ಕಲಾ ಪರಿಷತ್ ಬೆಂಗಳೂರು, ಕೇರಳ ಗದಿನಾಡ ಘಟಕ ಕಾಸರಗೋಡು ಮತ್ತು ಬೆಂಗಳೂರಿನ ಸಿರಿಗನ್ನಡ ವೇದಿಕೆ ಕೇರಳ ಗದಿನಾಡ ಘಟಕ ಕಾಸರಗೋಡು ಇವುಗಳ ಜಂಟಿ ಆಶ್ರಯದಲ್ಲಿ ಗಮಕ ಶ್ರಾವಣ ಕಾರ್ಯಕ್ರಮ ಆ. 15ರಂದು ಶ್ರೀಎಡನೀರು ಮಠದಲ್ಲಿ ಆರಂಭಗೊಳ್ಳಲಿದೆ. ಎಡನೀರು ಮಠದಲ್ಲಿ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ಜಾತುರ್ಮಾಸ್ಯ ಸಮಾರಂಭದಲ್ಲಿ ಆ. 15ರಂದು 2.30ಕ್ಕೆ ಉದ್ಘಾಟನೆ ನಡೆಯುವುದು. ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಸಮಾರಂಭ ಉದ್ಘಾಟಿಸಿ ಆಶಿರ್ವಚನ ನೀಡುವರು. ಕರ್ನಾಟಕ ಗಮಕ ಕಲಾ ಪರಿಷತ್ತು ಗದಿನಾಡ ಘಟಕದ ಅಧ್ಯಕ್ಷ ತಕ್ಕೇಕೆರೆ ಶಂಕರನಾರಾಯಣ ಭಟ್ ಅಧ್ಯಕ್ಷತೆ ವಹಿಸುವರು.
ವಿ.ಬಿ.ಕಳಶವರ್ಷ ಕುಂಬಳೆ ಪ್ರಸ್ತಾಪಿಸುವರು. ಡಾ. ಪ್ರವೀಣ ಪದ್ಯಾಣ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ರಾಜೇಂದ್ರ ಕಲ್ಲೂರಾಯ, ಯಶೋಧ ಭಟ್ ಉಪ್ಪಂಗಳ ಉಪಸ್ಥಿತರಿರುವರು. ಈ ಸಂದರ್ಭ ತೊರವೆ ರಾಮಾಯಣದಿಂದ ಆಯ್ದ ಭಾಗವನ್ನು ವಿದ್ಯಾರ್ಥಿಗಳಾದ ಪ್ರಣವ್ ಕೆ.ಎಸ್ ವಾಚಿಸಿ, ಚಿನ್ಮಯ್ ಕೆ.ಎಂ ವ್ಯಾಖ್ಯಾನಿಸುವರು.
ಸೆ. 1ರಿಂದ ಅಪರಾಹ್ನ 2.15ರಿಂದ ಕಾರಡ್ಕ ಸರ್ಕಾರಿ ಶಾಲೆಯಲ್ಲಿ, 3ರಂದು ಅಪರಾಹ್ನ 2.30ಕ್ಕೆ ನೀರ್ಚಾಲು ಮಹಾಜನ ಸಂಸ್ಕøತ ಕಾಲೇಜು ಹಯರ್ ಸೆಕೆಂಡರಿ ಶಾಲೆ, 7ರಂದು ಮೀಯಪದವು ಶಾಲೆ, 8ರಂದು ಧರ್ಮತ್ತಡ್ಕ ಶಾಲೆ, 11ರಂದುಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲೆ, 17ರಂದು ಅಪರಾಹ್ನ 2.30ರಿಂದ ಸೂರಂಬೈಲು ಸರ್ಕಾರಿ ಪ್ರೌಢಶಾಲೆಯಲ್ಲಿ ಕಾರ್ಯಖ್ರಮ ನಡೆಯುವುದು.
21ರಂದು ಅಪರಾಹ್ನ 2.30ರಿಂದ ಬೀರಂತಬೈಲು ಕನ್ನಡ ಅಧ್ಯಾಪಕ ಭವನದಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಪ್ರೊ. ಪಿ.ಎನ್. ಮೂಡಿತ್ತಾಯ ಸಮಾರೋಪ ಭಾಷಣ ಮಾಡುವರು.

.jpg)
.jpg)
