ಮುಳ್ಳೇರಿಯ: ಆದೂರು ಪೊಲೀಸ್ ಠಾಣೆ ವ್ಯಾಪ್ತಿಯಿಂದ ನಾಪತ್ತೆಯಾಗಿದ್ದ ಯುವಕನ ಮೃತದೇಹ ರಬ್ಬರ್ ತೋಟದ ಅಂಚಿನ ಮಾವಿನ ಮರದ ಕೊಂಬೆಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ನೆಟ್ಟಣಿಗೆ ಕುಳದಪಾರ ಉನ್ನತಿಯ ಸುನಿಲ್ (26) ಮೃತಪಟ್ಟ ಯುವಕ.
ಆ 12 ರಂದು ಮನೆಯಿಂದ ಹೊರಟಿದ್ದ ಸುನಿಲ್, ಅನಂತರ ನಾಪತ್ತೆಯಾಗಿರುವ ಬಗ್ಗೆ ಇವರ ತಂದೆ ಕೊರಗ ಅವರು ಆದೂರು ಪೆÇಲೀಸ್ ಠಾಣೆಗೆ ದೂರು ನೀಡಿದ್ದರು. ನಂತರ ನಡೆಸಿದ ಹುಡುಕಾಟದ ಮಧ್ಯೆ ಮನೆಯಿಂದ ಅನತಿ ದೂರದಲ್ಲಿರುವ ರಬ್ಬರ್ ತೋಟದ ಮಾವಿನ ಮರದ ಕೊಂಬೆಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.


