ಬದಿಯಡ್ಕ: ನಾಗನ ಗುಹಾ ಸಾನ್ನಿಧ್ಯವಿರುವ ವಿಶಿಷ್ಟ ಕ್ಷೇತ್ರವಾದ ನೀರ್ಚಾಲು ಸಮೀಪದ ಕುಕ್ಕ0ಕೂಡ್ಲು ಶ್ರೀ ಕಂಠಪಾಡಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಸೋಮವಾರ ಸಾಂಪ್ರದಾಯಿಕ ಶ್ರದ್ಧಾ ಭಕ್ತಿಗಳೊಂದಿಗೆ ನಾಗರ ಪಂಚಮಿ ಉತ್ಸವ ನೆರವೇರಿತು.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಹಾಲು ಅಭಿಷೇಕ. ಸೀಯಾಳ ಅಭಿಷೇಕ, ಹಾಲುಪಾಯಸ ನೈವೇದ್ಯ, ನಾಗ ತಂಬಿಲ, ಮಹಾಪೂಜೆ ನೆರವೇರಿತು. ಪ್ರಧಾನ ಅರ್ಚಕ ರಾಮಕೃಷ್ಣ ಮಯ್ಯರು ನೇತೃತ್ವ ವಹಿಸಿದ್ದರು. ಭಕ್ತರು ಪೂಜೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.

.jpg)
.jpg)
.jpg)
