ಮುಳ್ಳೇರಿಯ: ಪೈಕ ಎ.ಕೆ.ಎಮ್.ಎಮ್.ಎ.ಯು.ಪಿ. ಶಾಲೆಯಲ್ಲಿ 80ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು. ಮುಖ್ಯೋಪಾಧ್ಯಾಯರು ಸ್ವಾಗತಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಹಸೈನಾರ್ ಮಿತ್ತಡಿ ಅಧ್ಯಕ್ಷತೆ ವಹಿಸಿದ್ದರು. ವಾರ್ಡು ಸದಸ್ಯೆ ಶೈಲಜಾ ಉದ್ಘಾಟಿಸಿದರು. ಕುಂಬಳೆ ಉಪಜಿಲ್ಲಾ ಸಹಾಯಕ ಶಿಕ್ಷಣಾಧಿಕಾರಿ ಅಶೋಕ ಎಂ. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ವ್ಯವಸ್ಥಾಪನಾ ದತ್ತಿನಿಧಿ, ಗೋಪಾಲಕೃಷ್ಣ ಭಟ್ ದತ್ತಿನಿಧಿಯನ್ನು ವಿತರಿಸಲಾಯಿತು. ಶಾಲಾ ವ್ಯವಸ್ಥಾಪಕ ಕೃಷ್ಣನ್, ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ರಾಧಾಕೃಷ್ಣ ನಾಯಕ್, ರಕ್ಷಕ ಶಿಕ್ಷಕ ಸಂಘದ ಮಾಜಿ ಸದಸ್ಯ ಬಿ.ಎ.ಅಬ್ದುಲ್ ರಝಾಕ್, ವಕೀಲ ಅಶೋಕ್ ಕುಮಾರ್, ನಿತ್ಯಾನಂದ, ಲಕ್ಷ್ಮೀ ಎಸ್. ನಾಯರ್ ಮೊದಲಾದವರನ್ನು ಸನ್ಮಾನಿಸಲಾಯಿತು. ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಎಸ್.ಆರ್.ಜಿ ಸಂಚಾಲಕಿ ಶಿಕ್ಷಕಿ ಆಶಾ ಕುಮಾರಿ ವಂದಿಸಿದರು.

.jpg)
