HEALTH TIPS

ಒಂಬತ್ತಕ್ಕಿಂತ ಹೆಚ್ಚು ಸಿಮ್‌ ಕಾರ್ಡ್‌ ಇಲ್ಲ: ಕೇಂದ್ರ ದೂರಸಂಪರ್ಕ ಇಲಾಖೆ

ನವದೆಹಲಿ (PTI): ಒಂಬತ್ತು ಸಿಮ್‌ ಕಾರ್ಡ್‌ಗಳನ್ನು ತಮ್ಮ ಹೆಸರಿನಲ್ಲಿ ಹೊಂದಿರುವವರಿಗೆ ಹೊಸದಾಗಿ ಸಿಮ್ ಕಾರ್ಡ್‌ ವಿತರಣೆ ಮಾಡಬಾರದು ಎಂದು ಕೇಂದ್ರ ದೂರಸಂಪರ್ಕ ಇಲಾಖೆಯು ದೂರಸಂಪರ್ಕ ಸೇವಾ ಕಂಪನಿಗಳಿಗೆ ಸೂಚನೆ ನೀಡಿದೆ. ಈ ಸಂಬಂಧ ಸುತ್ತೋಲೆಯೊಂದನ್ನು ಹೊರಡಿಸಲಾಗಿದೆ.


ಒಂಬತ್ತು ಸಿಮ್‌ ಕಾರ್ಡ್‌ಗಳನ್ನು ಹೊಂದಿದ್ದು, ಇನ್ನೂ ಹೆಚ್ಚಿನ ಸಿಮ್ ಕಾರ್ಡ್‌ ಬೇಕು ಎನ್ನುವವರನ್ನು ಗುರುತಿಸಿ, ಅವರಿಗೆ ಹೊಸ ಸಿಮ್ ಕಾರ್ಡ್‌ ನಿರಾಕರಿಸಲು ಅಗತ್ಯವಿರುವ ತಾಂತ್ರಿಕ ಹಾಗೂ ಸಾಂಸ್ಥಿಕ ಕ್ರಮಗಳನ್ನು ಕೈಗೊಳ್ಳುವಂತೆ ಇಲಾಖೆಯು ಕಂಪನಿಗಳಿಗೆ ತಿಳಿಸಿದೆ. ಇದು ಸೋಮವಾರದಿಂದ (ಆಗಸ್ಟ್‌ 24) ಜಾರಿಗೆ ಬರಬೇಕಿದೆ.

'ನಿಗದಿ ಮಿತಿಗಿಂತ ಹೆಚ್ಚಿನ ಸಂಖ್ಯೆಯ ಸಿಮ್ ಕಾರ್ಡ್‌ಗಳನ್ನು ಈಗಾಗಲೇ ಪಡೆದುಕೊಂಡಿರುವ ಗ್ರಾಹಕರ ವಿವರವು ಡಿಜಿಟಲ್ ಗುಪ್ತಚರ ವೇದಿಕೆಯಲ್ಲಿ (ಡಿಐಪಿ) ಲಭ್ಯವಿದೆ' ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.

ಒಂಬತ್ತು ಸಿಮ್‌ ಕಾರ್ಡ್‌ಗಳನ್ನು ಈಗಾಗಲೇ ಪಡೆದುಕೊಂಡವರ ಪ್ರಾತಿನಿಧಿಕ ಚಿತ್ರವನ್ನು ಡಿಐಪಿ ಮೂಲಕ ಆಗಸ್ಟ್‌ 23ರಿಂದ ಲಭ್ಯವಾಗಿಸಲಾಗುತ್ತದೆ ಎಂದು ಇಲಾಖೆಯು ತಿಳಿಸಿದೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries