ಕಾಸರಗೋಡು: ಜಿಲ್ಲಾ ಮೊಗೇರ ಸರ್ವೀಸ್ ಸೊಸೈಟಿ ಆಶ್ರಯದಲ್ಲಿ 'ಆಟಿದ ಕೂಟ',ಕಾರ್ಯಕ್ರಮ ಆಗಸ್ಟ್ 9ರಂದು ಉಳಿಯತ್ತಡ್ಕದ ಆಟಲ್ ಜಿ ಸಭಾಂಗಣದಲ್ಲಿ ಜರುಗಲಿದೆ. 'ಆಟಿದ ಕೂಟ',ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಶ್ರೀಮಧೂರು ಕ್ಷೇತ್ರದ ಮೂಲಸ್ಥಾನ ಉಳಿಯತ್ತಡ್ಕದ ಮದರುಮಾತೆ ಮಂಟಪ ವಠಾರದಲ್ಲಿ ಜರುಗಿತು. ಸಂಘಟನೆ ಉಪಾಧ್ಯಕ್ಷ, ನಿವೃತ್ತ ಪೆÇಲೀಸ್ ಅಧಿಕಾರಿ ಎ.ಪಿ.ಬೇಡು ಕಲ್ಲಕಟ್ಟ ಅವರು ಆಮಂತ್ರಣಪತ್ರಿಕೆ ಬಿಡುಗಡೆಗೊಳಿಸಿದರು. ಮೊಗೇರ್ ಸರ್ವೀಸ್ ಸೊಸೈಟಿ ರಾಜ್ಯ ಸಮಿತಿ ಅಧ್ಯಕ್ಷ ಐ.ಲಕ್ಷ್ಮಣ ಪೆರಿಯಡ್ಕ, ಜಿಲ್ಲಾ ಕಾರ್ಯಡರ್ಶಿ ರಮೇಶ್ ಬನ್ನೂರು ಉಪಸ್ಥಿತರಿದ್ದರು.


