HEALTH TIPS

ಸುನೇತ್ರಾ ಪವಾರ್-ಪ್ರಶಾಂತ್ ಕಿಶೋರ್ ಭೇಟಿ: ಬಿಜೆಪಿ ಮೈತ್ರಿಕೂಟದಲ್ಲಿ ಬಿರುಕು?

ಮುಂಬೈ: ಬಿಹಾರ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿದ್ದ ಚುನಾವಣೆ ಚಾಣಕ್ಷ ಖ್ಯಾತಿಯ ಪ್ರಶಾಂತ್ ಕಿಶೋರ್ ಅವರನ್ನು ಎನ್‌ಸಿಪಿ ನಾಯಕಿ ಹಾಗೂ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಸುನೇತ್ರಾ ಪವಾರ್ ಭೇಟಿಯಾಗಿದ್ದು, ಆಡಳಿತಾರೂಢ 'ಮಹಾಯುತಿ' ಮೈತ್ರಿಗೆ ಧಕ್ಕೆ ತರುವಂತಹ ಯಾವುದೇ ಹೆಜ್ಜೆ ಇಡದಂತೆ ಬಿಜೆಪಿ ಎಚ್ಚರಿಕೆ ನೀಡಿದೆ. 


ಮೈತ್ರಿಕೂಟದಲ್ಲಿ ಬಿರುಕು ಮೂಡಿಸುವಂತಹ ಯಾವುದೇ ತೀರ್ಮಾನಗಳನ್ನು ತೆಗೆದುಕೊಳ್ಳಬೇಡಿ ಎಂದು ಮಹಾರಾಷ್ಟ್ರದ ಕಂದಾಯ ಸಚಿವ ಹಾಗೂ ಬಿಜೆಪಿ ನಾಯಕ ಚಂದ್ರಶೇಖರ್ ಬಾವನ್‌ಕುಳೆ ಅವರು ಸುನೇತ್ರಾ ಪವಾರ್ ಅವರಿಗೆ ಸಲಹೆ ನೀಡಿದ್ದಾರೆ.

ಇದು ಅವರ ಪಕ್ಷದ ಆಂತರಿಕ ವಿಚಾರ. ಆದಾಗ್ಯೂ, ಮಹಾಯುತಿ ಮೈತ್ರಿಕೂಟದ ಭಾಗವಾಗಿರುವಾಗ, ಮೈತ್ರಿ ಪಾಲುದಾರರಲ್ಲಿ ಅನುಮಾನ ಮೂಡಿಸುವ ಅಥವಾ ಮೈತ್ರಿಗೆ ಹಾನಿಯಾಗುವಂತಹ ಕ್ರಮಗಳನ್ನು ಕೈಗೊಳ್ಳಬಾರದು. ಪ್ರತಿಯೊಬ್ಬರೂ ಮಹಾಯುತಿಯ ಮೈತ್ರಿ ಧರ್ಮ ಹಾಗೂ ನಿಯಮಾವಳಿಗಳನ್ನು ಪಾಲಿಸಬೇಕು ಎಂದು ಅವರು ತಿಳಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಆಡಳಿತಾರೂಢ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಸುನೇತ್ರಾ ಪವಾರ್ ಅವರ ಎನ್‌ಸಿಪಿ ಹಾಗೂ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಪಾಲುದಾರ ಪಕ್ಷಗಳಾಗಿವೆ.

ಪ್ರಶಾಂತ್ ಕಿಶೋರ್ ಅವರನ್ನು ಏಕೆ ಭೇಟಿಯಾದರು ಎಂಬುದರ ಕುರಿತು ನಾನು ಹೆಚ್ಚೇನೂ ಹೇಳುವುದಿಲ್ಲ. ಆದರೆ ಮೈತ್ರಿಯಲ್ಲಿ ಬಿರುಕು ಅಥವಾ ಅಪನಂಬಿಕೆ ಸೃಷ್ಟಿಸುವಂತಹ ನಡವಳಿಕೆ ಇರಬಾರದು ಎಂದು ಬಾವನ್‌ಕುಳೆ ಪುನರುಚ್ಚರಿಸಿದ್ದಾರೆ.

ದಕ್ಷಿಣ ಮುಂಬೈನಲ್ಲಿರುವ ಸುನೇತ್ರಾ ಪವಾರ್ ಅವರ ಅಧಿಕೃತ ನಿವಾಸ 'ದೇವಗಿರಿ'ಯಲ್ಲಿ ಈ ಭೇಟಿ ನಡೆದಿದೆ ಎಂದು ಎನ್‌ಸಿಪಿ ಮುಖಂಡ ಸಂಜಯ್ ಖೋಡ್ಕೆ ಸ್ಪಷ್ಟಪಡಿಸಿದ್ದಾರೆ. ಆದರೆ, ಈ ಮಾತುಕತೆ ಕುರಿತು ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳಲು ಅವರು ನಿರಾಕರಿಸಿದ್ದಾರೆ.

ಕಳೆದ ಜನವರಿಯಲ್ಲಿ ಬಾರಾಮತಿಯಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಅಂದಿನ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ನಿಧನರಾದ ನಂತರ, ಪ್ರಶಾಂತ್ ಕಿಶೋರ್ ಅವರು ಸುನೇತ್ರಾ ಪವಾರ್ ಅವರನ್ನು ಭೇಟಿಯಾಗುತ್ತಿರುವುದು ಇದು ಎರಡನೇ ಬಾರಿಯಾಗಿದೆ. ನರೇಂದ್ರ ಮೋದಿ, ಮಮತಾ ಬ್ಯಾನರ್ಜಿ ಮತ್ತು ಅರವಿಂದ್ ಕೇಜ್ರಿವಾಲ್ ಅವರಂತಹ ನಾಯಕರಿಗೆ ಚುನಾವಣಾ ತಂತ್ರ ರೂಪಿಸಿ ಗೆಲುವು ತಂದುಕೊಟ್ಟಿದ್ದ ಕಿಶೋರ್, ನಮ್ಮ ಕುಟುಂಬದ ಹಳೆಯ ಸ್ನೇಹಿತರು ಎಂದು ಕೆಲವು ತಿಂಗಳ ಹಿಂದೆ ಸುನೇತ್ರಾ ಅವರ ಪುತ್ರ ಪಾರ್ಥ ಪವಾರ್ ತಿಳಿಸಿದ್ದರು.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries