ಮಂಜೇಶ್ವರ: ದೈಗೋಳೀಯ ಜ್ಞಾನೋದಯ ಸಮಾಜ ಆಶ್ರಯದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ನೇತೃತ್ವದಲ್ಲಿ ಜರಗಲಿರುವ 45ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ದೈಗೋಳಿ ಶ್ರೀ ಗಣೇಶ ಮಂದಿರದಲ್ಲಿ ಇತ್ತೀಚೆಗೆ ನಡೆಯಿತು. ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ನ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ವೇದಮೂರ್ತಿ ವಿದ್ವಾನ್ ರಾಮಮೂರ್ತಿ ಕುರಿಯ ಅವರ ಪೌರೋಹಿತ್ಯದಲ್ಲಿ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಸೆ.14 ರಂದು ಸೋಮವಾರ ಶ್ರೀ ಗಣೇಶ ಮಂದಿರದಲ್ಲಿ ಜರಗಲಿದೆ.
ಸಮಾರಂಭದ ಅಧ್ಯಕ್ಷತೆಯನ್ನು ಗಣೇಶೋತ್ಸವ ಸಮಿತಿ ಅಧ್ಯಕ್ಷ ತಿಲಕ್ ಪ್ರಸಾದ್ ಅಡೆಕಲಕಟ್ಟೆ ವಹಿಸಿ, ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಸಮಿತಿ ಪದಾಧಿಕಾರಿಗಳಾದ ಬಿ.ವಿ. ರಾಜಗೋಪಾಲ,ಸತ್ಯನಾರಾಯಣ ಭಟ್, ಬಜೆ ವೆಂಕಟ್ರಮಣ ಭಟ್, ಗೋಪಾಲ ಕೃಷ್ಣ ಭಟ್ ಪಾರೆ ಕುಂಡಡ್ಕ, ಚಂದ್ರಹಾಸ ಹೆಬ್ಬಾರ್, ಮಾಧವ ನೀರಳಿಕೆ, ಬಾಬು ಮೂಲ್ಯ, ಡಾ.ವಿಜಯಲಕ್ಷ್ಮೀ ಶರ್ಮಾ, ಜಗನ್ನಾಥ ಎಂ, ಕೃಷ್ಣ ಸಾಯಿ ನಿಲಯ, ಸಂತೋಷ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಮಾಧವ ಶೆಟ್ಟಿಗಾರ್ ಸ್ವಾಗತಿಸಿ, ಸಂಘಟನಾ ಕಾರ್ಯದರ್ಶಿ ಸುಧೀರ್ ರಂಜನ್ ದೈಗೋಳಿ ವಂದಿಸಿದರು.

.jpg)
