ಮಂಜೇಶ್ವರ: ಮೀಯಪದವು ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಿಂಹ ಮಾಸದ ಬಲಿವಾಡು ಕೂಟದ ಪ್ರಯುಕ್ತ ಮೂಡಂಬೈಲಿನ ವಾಗ್ದೇವೀ ಯಕ್ಷಗಾನ ಕಲಾಸಂಘದವರಿಂದ ಆ. 29 ರಂದು ಪೂರ್ವಾಹ್ನ 10 ರಿಂದ "ಭಾರ್ಗವ ವಿಜಯ" ಎಂಬ ಕಥಾಭಾಗದ ಯಕ್ಷಗಾನ ತಾಳಮದ್ದಳೆ ಜರಗಲಿದೆ. ಹಿಮ್ಮೇಳದಲ್ಲಿ ಭಾಗವತರಾಗಿ ಶುಭಾನಂದ ಶೆಟ್ಟಿ ಕುಳೂರು ಚೆಂಡೆ ಮತ್ತು ಮೃದಂಗದಲ್ಲಿ ಗಣಪತಿ ಭಟ್ ಪೆರ್ಲ ಹಾಗೂ ಸ್ಕಂದರಾಜ್ ಮಯ್ಯ ವರ್ಕಾಡಿ ಭಾಗವಹಿಸುವರು ಎಂದು ಸಂಘಟಕರು ತಿಳಿಸಿದ್ದಾರೆ.

