HEALTH TIPS

ಭಾರತದ ಮಳೆಯ ಮೇಲೆ ಪರಿಣಾಮ ಬೀರಲಿದೆಯೇ ಪೆಸಿಫಿಕ್ ಸಾಗರದ ಮೇಲಿನ ಡಾಲ್ಫಿನ್ ಬಿರುಗಾಳಿ?

 ಭಾರತದಲ್ಲಿ ಈಗಾಗಲೇ ಅನೇಕ ಕಾರಣಗಳಿಂದ ಕುಸಿದಿರುವ ಮಳೆಯ ಪ್ರಮಾಣ ಇನ್ನಷ್ಟು ಕಡಿಮೆಯಾಗುವ ಸಾಧ್ಯತೆಯಿದೆ.

ಬಿರುಗಾಳಿಯೊಂದು ಭಾರತದ ಮಳೆಯ ವ್ಯವಸ್ಥೆಯನ್ನು ನಿಗ್ರಹಿಸಲು ಸಿದ್ಧವಾಗುತ್ತಿದೆ ಎಂದು ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 


ಜಪಾನ್‌ನ ಡೈಟೊ ಮತ್ತು ರ್ಯುಕ್ಯು ದ್ವೀಪಗಳತ್ತ 175 kmph ಗಿಂತ ಹೆಚ್ಚಿನ ವೇಗದ ಗಾಳಿಯೊಂದಿಗೆ ಸಾಗುತ್ತಿರುವ ಸೂಪರ್ ಟೈಫೂನ್ (ಬಿರುಗಾಳಿ) ಪೂರ್ವ ಏಷ್ಯಾದ ಮೇಲೆ ಪ್ರಭಾವ ಬೀರುವುದರ ಜೊತೆಗೆ ಭಾರತದ ಮುಂಗಾರು ಮಳೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಹವಾಮಾನ ತಜ್ಞರು ಗಮನಿಸುತ್ತಿದ್ದಾರೆ.

ಬಿರುಗಾಳಿಯು ಭಾರತಕ್ಕೆ ನೇರವಾಗಿ ಬೆದರಿಕೆ ಒಡ್ಡುವ ಸಾಧ್ಯತೆ ಕಡಿಮೆ. ಆದರೆ ಪಶ್ಚಿಮ ಪೆಸಿಫಿಕ್‌ ನ ಮೇಲೆ ಬೀಸುವ ಪ್ರಬಲ ಬಿರುಗಾಳಿ ತಾತ್ಕಾಲಿಕವಾಗಿ ವಾತಾವರಣದ ಪರಿಚಲನೆಯನ್ನು ಬದಲಿಸಬಹುದು. ಮುಂಗಾರು ಮಳೆಯ ತೇವಾಂಶದ ಪೂರೈಕೆ ಮತ್ತು ಹವಾಮಾನ ವ್ಯವಸ್ಥೆಗಳಿಗೆ ಅಡ್ಡಿಪಡಿಸುವ ಮೂಲಕ ಭಾರತೀಯ ಉಪಖಂಡದ ಕೆಲವು ಭಾಗಗಳಲ್ಲಿ ಮಳೆಯನ್ನು ನಿಗ್ರಹಿಸುವ ಸಾಧ್ಯತೆಯಿದೆ.

ಇತ್ತೀಚಿನ ಮುನ್ಸೂಚನೆಯ ಪ್ರಕಾರ, ಟೈಫೂನ್ ಡಾಲ್ಫಿನ್ ಮಿನಾಮಿಡೈಟೊ ದ್ವೀಪದಿಂದ ಪೂರ್ವಕ್ಕೆ ಸುಮಾರು 540 ಕಿ.ಮೀ. ದೂರದಲ್ಲಿದೆ. ಇದು 17 ಕಿ.ಮೀ. ವೇಗದಲ್ಲಿ ಪಶ್ಚಿಮದತ್ತ ಚಲಿಸುತ್ತಿದೆ. ಬಿರುಗಾಳಿಯು 175 kmph ವೇಗದ ನಿರಂತರ ಗಾಳಿಯೊಂದಿಗೆ ಸಾಗುತ್ತಿದೆ. ಕಳೆದ ವಾರದಲ್ಲಿ ಹಲವು ಬಾರಿ ಸೂಪರ್ ಟೈಫೂನ್ ಆಗಿ ತೀವ್ರಗೊಂಡಿದ್ದ ಈ ಬಿರುಗಾಳಿಯ ಗಾಳಿಯ ವೇಗ 210 kmph ತಲುಪಿದೆ.

ಡಾಲ್ಫಿನ್ ಬಿರುಗಾಳಿಯು ಗುರುವಾರ ಡೈಟೊ ದ್ವೀಪಗಳನ್ನು ಸಮೀಪಿಸಲಿದ್ದು, ಶುಕ್ರವಾರ ಓಕಿನಾವ ತಲುಪುವ ನಿರೀಕ್ಷೆಯಿದೆ. ಈ ವ್ಯವಸ್ಥೆಯು ನಾಶಕಾರಿ ಗಾಳಿ, 100-200 mm ಧಾರಾಕಾರ ಮಳೆ, ಪ್ರತ್ಯೇಕ ಪ್ರದೇಶಗಳಲ್ಲಿ 350 mmವರೆಗೆ ಒಟ್ಟು ಮಳೆ ಹಾಗೂ ರ್ಯುಕ್ಯು ಮತ್ತು ಅಮಾಮಿ ದ್ವೀಪ ಸರಪಣಿಯಾದ್ಯಂತ 10ರಿಂದ 11 ಮೀಟರ್‌ಗಳಷ್ಟು ಎತ್ತರದ ಅಲೆಗಳನ್ನು ಉಂಟು ಮಾಡುವ ಮುನ್ಸೂಚನೆ ಇದೆ.

ಜಪಾನ್ ಆಚೆಗೆ ಏಷ್ಯಾದ ಮುಂಗಾರು ಮಳೆ ವ್ಯವಸ್ಥೆಯೊಂದಿಗೆ ಬಿರುಗಾಳಿ ಹೇಗೆ ಸಂವಹನ ನಡೆಸಬಹುದು ಎಂಬುದನ್ನು ಹವಾಮಾನ ತಜ್ಞರು ಗಮನಿಸುತ್ತಿದ್ದಾರೆ. ಬಿರುಗಾಳಿಗಳು ಮತ್ತು ಭಾರತೀಯ ಮುಂಗಾರು ಮಳೆಯ ನಡುವೆ ಶಾಖ, ತೇವಾಂಶ ಹಾಗೂ ವಾತಾವರಣದ ಶಕ್ತಿಗಾಗಿ ಒಂದು ರೀತಿಯ ಸ್ಪರ್ಧೆ ಇರುತ್ತದೆ. ಪಶ್ಚಿಮ ಉತ್ತರ ಪೆಸಿಫಿಕ್‌ ನಲ್ಲಿ ತೀವ್ರವಾದ ಬಿರುಗಾಳಿ ರೂಪುಗೊಂಡಾಗ, ಬಂಗಾಳ ಕೊಲ್ಲಿಯ ಮೇಲಿನ ಗುಡುಗು ಸಹಿತ ಮೋಡಗಳ ಚಟುವಟಿಕೆಯನ್ನು ನಿಗ್ರಹಿಸುವ ಮೂಲಕ ಆ ಪ್ರದೇಶದ ಮೇಲೆ ಸಂವಹನ (ದ್ರವ ಅಥವಾ ಅನಿಲದಲ್ಲಿ ತಾಪಮಾನ ವ್ಯತ್ಯಾಸದಿಂದ ಸಾಂದ್ರತೆಯಲ್ಲಿ ಬದಲಾವಣೆಯಾಗಿ ಮೇಲಿನ ಅಣುಗಳು ಕೆಳಕ್ಕೂ, ಕೆಳಗಿನವು ಮೇಲಕ್ಕೂ ಚಲಿಸುವಿಕೆ ಅಥವಾ ಅದರಿಂದಾಗುವ ಶಾಖದ ಸಾಗಣೆ) ಹೆಚ್ಚಿಸುತ್ತದೆ.

ಬಂಗಾಳ ಕೊಲ್ಲಿ ಮುಂಗಾರು ವಾಯುಭಾರ ಕುಸಿತದ ವ್ಯವಸ್ಥೆಗಳು ಹಾಗೂ ಮಧ್ಯ, ಪೂರ್ವ ಮತ್ತು ಉತ್ತರ ಭಾರತದಾದ್ಯಂತ ವ್ಯಾಪಕ ಮಳೆ ನೀಡುವ ತಗ್ಗುಗಳು ರೂಪುಗೊಳ್ಳುವ ಪ್ರಮುಖ ಪ್ರದೇಶವಾಗಿದೆ. ಈ ವ್ಯವಸ್ಥೆಗಳು ಅಭಿವೃದ್ಧಿಗೊಳ್ಳಲು ವಿಫಲವಾದರೆ, ಮುಂಗಾರು ಮಳೆ ತಾತ್ಕಾಲಿಕವಾಗಿ ದುರ್ಬಲಗೊಳ್ಳಬಹುದು.

ಬಲವಾದ ಬಿರುಗಾಳಿಯು ಮುಂಗಾರು ತೊಟ್ಟಿಯ ಸ್ಥಾನವನ್ನು ಬದಲಿಸಬಹುದು ಮತ್ತು ಮೇಲ್ಮಟ್ಟದ ಗಾಳಿಯ ಮಾದರಿಗಳನ್ನು ಮಾರ್ಪಡಿಸಬಹುದು. ಇದರಿಂದ ಬಂಗಾಳ ಕೊಲ್ಲಿಯ ಮೇಲೆ ಹೊಸ ಮಳೆ-ಉಂಟುಮಾಡುವ ವ್ಯವಸ್ಥೆಗಳು ರೂಪುಗೊಳ್ಳುವ ಸಾಧ್ಯತೆ ಮತ್ತಷ್ಟು ಕಡಿಮೆಯಾಗಬಹುದು. ಆದರೆ ಡಾಲ್ಫಿನ್ ಬಿರುಗಾಳಿ ಸದ್ಯದ ಮಟ್ಟಿಗೆ ಭಾರತದ ಮೇಲೆ ದೀರ್ಘಕಾಲದ ಮುಂಗಾರು ವಿರಾಮವನ್ನು ಪ್ರಚೋದಿಸುವ ಸಾಧ್ಯತೆ ಇಲ್ಲ ಎಂದು ತಜ್ಞರು ಹೇಳಿದ್ದಾರೆ.

ಬಿರುಗಾಳಿ ಎಷ್ಟು ಕಾಲ ತೀವ್ರವಾಗಿ ಮುಂದುವರಿಯುತ್ತದೆ ಹಾಗೂ ಅದು ದಕ್ಷಿಣ ಚೀನಾ ಸಮುದ್ರದ ಕಡೆಗೆ ಪಶ್ಚಿಮಕ್ಕೆ ಮುಂದುವರಿಯುತ್ತದೆಯೇ ಅಥವಾ ಪೂರ್ವ ಚೀನಾದ ಕಡೆಗೆ ತಿರುಗುತ್ತದೆಯೇ ಎಂಬುದರ ಮೇಲೆ ಅದರ ಪರಿಣಾಮ ಅವಲಂಬಿತವಾಗಿರುತ್ತದೆ. ಕೆಲವರು ಬಿರುಗಾಳಿ ವೆನ್‌ಝೌ ಬಳಿ ಭೂಕುಸಿತ (ಲ್ಯಾಂಡ್‌ಫಾಲ್) ಮಾಡಬಹುದು ಎಂದು ಊಹಿಸಿದರೆ, ಇನ್ನು ಕೆಲವರು ಚೀನಾದ ಪೂರ್ವ ಕರಾವಳಿಯ ತೈಝೌ ಸಮೀಪ ಕರಾವಳಿಯನ್ನು ದಾಟಬಹುದು ಎಂದು ಅಂದಾಜಿಸಿದ್ದಾರೆ.

ಭಾರತದ ಮುಂಗಾರು ಈಗಾಗಲೇ Indian Ocean Dipole (IOD), ವಿಕಸನಗೊಳ್ಳುತ್ತಿರುವ ಎಲ್ ನಿನೊ ಹಾಗೂ ಬಂಗಾಳ ಕೊಲ್ಲಿಯ ವಾಯುಭಾರ ಕುಸಿತದ ವ್ಯವಸ್ಥೆಗಳಂತಹ ಪ್ರಮುಖ ಹವಾಮಾನ ಅಂಶಗಳಿಂದ ಪ್ರಭಾವಿತವಾಗಿದೆ. ಇಂತಹ ಸಂದರ್ಭದಲ್ಲಿ ಡಾಲ್ಫಿನ್ ಬಿರುಗಾಳಿ ಬಂಗಾಳ ಕೊಲ್ಲಿಯ ಮೇಲೆ ಹೊಸ ಹವಾಮಾನ ವ್ಯವಸ್ಥೆಗಳ ರಚನೆಯನ್ನು ಅಲ್ಪಾವಧಿಗೆ ನಿಗ್ರಹಿಸಬಹುದು. ಇದರಿಂದ ಭಾರತದ ಕೆಲವೆಡೆ ಮಳೆ ತಾತ್ಕಾಲಿಕವಾಗಿ ಕಡಿಮೆಯಾಗುವ ಸಾಧ್ಯತೆಯಿದೆ.

ಬಿರುಗಾಳಿ ದುರ್ಬಲಗೊಂಡು ಉಷ್ಣವಲಯದಿಂದ ಹೊರ ಹೋದ ಬಳಿಕ ಮುಂಗಾರು ಮತ್ತೆ ಚೇತರಿಸಿಕೊಳ್ಳಬಹುದು ಎಂದು ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries