HEALTH TIPS

ಉಪ್ಪಳ ಹಲಸು ಮೇಳಕ್ಕೆ ಚಾಲನೆ

ಉಪ್ಪಳ: ಬೆನಕ ಇವೆಂಟ್ಸ್ ಕುಂದಾಪುರ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಬಂದ್ಯೋಡ್ ಬಳಿಯ ಕುಬಣೂರು ಗ್ರೀನ್ ಗಾರ್ಡನ್ ಸಭಾಂಗಣದಲ್ಲಿ ಪ್ರಥಮ ಬಾರಿಗೆ ನಡೆಯುತ್ತಿರುವ ಮೂರು ದಿನಗಳ ಹಲಸು ಮೇಳಕ್ಕೆ ಭಾನುವಾರ ಅದ್ಧೂರಿ ಚಾಲನೆ ನೀಡಲಾಯಿತು.  ಮಂಗಲ್ಪಾಡಿ ಗ್ರಾಮ ಪಂಚಾಯತಿ ಸದಸ್ಯೆ ಬಿಪಾತುಮ್ಮ ಅಬೂಬಕ್ಕರ್ ರಿಬ್ಬನ್ ಕತ್ತರಿಸುವ ಮೂಲಕ ಮಾರಾಟ ಮಳಿಗೆಯನ್ನು ಉದ್ಘಾಟಿಸಿದರು. ಬಳಿಕ ಹಲಸು ಮೇಳವನ್ನು ಉದ್ಯಾವರ ಮಾಡ ಶ್ರೀ ಅರಸು ಮಂಜೀಷ್ಣಾರ್ ದೈವಗಳ ಕ್ಷೇತ್ರದ ಅಣ್ಣ ದೈವದ ಪಾತ್ರಿ  ರಾಜ ಬೆಲ್ಚಪ್ಪಾಡ ದೀಪ ಬೆಳಗಿಸಿ ಉದ್ಘಾಟಿಸಿದರು. 

ವೇದಿಕೆಯಲ್ಲಿ ಮಂಗಲ್ಪಾಡಿ ಗ್ರಾಮ ಪಂಚಾಯತಿ ಅಧ್ಯಕ್ಷ ಗೋಲ್ಡನ್ ಅಬ್ದುಲ್ ರಹಮಾನ್, ಎಣ್ಮಕಜೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಕುಸುಮಾವತಿ, ಮಂಜೇಶ್ವರ ಗ್ರಾಮ ಪಂಚಾಯತಿ ಮಾಜಿ ಜೀನ್ ಲವಿನಾ ಮೊಂತೆರೋ, ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಉಪ್ಪಳ ಘಟಕ ಕಾರ್ಯದರ್ಶಿ ಅಬ್ದುಲ್ ಜಬ್ಬಾರ್, ಐಲ ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷ ಸುಧೀಶ್ಚಂದ್ರ ಶೆಟ್ಟಿ ಇಚ್ಲಂಗೋಡು, ವಾರ್ಡ್ ಸದಸ್ಯ ಬಶೀರ್, ಕಾರ್ಯದರ್ಶಿ ಶರೀಫ್, ಸಾಮಾಜಿಕ ಕಾರ್ಯಕರ್ತರಾದ ಜೆಸಿಲ್, ಮೊಹಮ್ಮದ್ ಎಂ. ಪಿ, ಮಂಗಲ್ಪಾಡಿ ಗ್ರಾಮ ಪಂಚಾಯತಿ ಕೃಷಿ ಸಂಘದ ಅಧ್ಯಕ್ಷ ಎಸ್. ಐ ಮೊಹಮ್ಮದ್, ಜಿ ಟೆಕ್ ಎಜುಕೇಶನ್ ನ ಮೊಯ್ದಿನ್ ನೌಶಾದ್, ಬ್ಯುಸಿನೆಸ್ ಪ್ರಮೋಟರ್ ಅರ್ಷದ್ ಉಪ್ಪಳ, ಬೆನಕ ಇವೆಂಟ್ಸ್ ಕುಂದಾಪುರದ ಭಾಸ್ಕರ್ ಪೂಜಾರಿ, ಸಂದೇಶ್ ಪುತ್ರನ್, ಸತ್ಯ, ಮೊದಲಾದವರು ಉಪಸ್ಥಿತರಿದ್ದು ಶುಭಾಸಂಶನೆಗೈದರು. ಉಪ್ಪಳ ಹಲಸು ಮೇಳದ ಆಯೋಜಕ, ಪತ್ರಕರ್ತ ರತನ್ ಕುಮಾರ್ ಹೊಸಂಗಡಿ ಸ್ವಾಗತಿಸಿ, ಬೆನಕ ಇವೆಂಟ್ಸ್ ಕುಂದಾಪುರದ ಗಣೇಶ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿ, ಉಪ್ಪಳ ಹಲಸು ಮೇಳದ ಆಯೋಜಕ ಕೀರ್ತನ್ ಕಡಂಬಾರ್ ವಂದಿಸಿದರು. 


ಉದ್ಘಾಟನೆಯ ಮೊದಲೇ ಜನ ಸಂದಣಿ ಆಗಮಿಸಿದ್ದು, ವ್ಯಾಪಾರಿಗಳ ಮುಖದಲ್ಲಿ ಮಂದಹಾಸ ಮೂಡಿದೆ. ಈ ಮೇಳದಲ್ಲಿ ಹಲಸಿನ ಹಣ್ಣಿನ ಅಪ್ಪ, ಜಿಲೇಬಿ, ಹೋಳಿಗೆ, ಕಬಾಬ್, ಮಂಚೂರಿ ಮತ್ತು ಬಿರಿಯಾನಿಯಂತಹ ವೈವಿಧ್ಯಮಯ ತಿನಿಸುಗಳನ್ನು ಸ್ಥಳದಲ್ಲೇ ಸಿದ್ಧಪಡಿಸಿ ಗ್ರಾಹಕರಿಗೆ ಬಡಿಸಲಾಗುತ್ತಿದೆ. ತುಮಕೂರು ಮತ್ತು ಪಾಂಡಿಚೇರಿಯ ಚಂದ್ರ ಹಲಸು ಸೇರಿದಂತೆ ವಿವಿಧ ತಳಿಯ ಹಣ್ಣುಗಳು, ಬೆಂಗಳೂರು ಮತ್ತು ರಾಮನಗರದ ಹತ್ತು ಬಗೆಯ ವಿಶೇಷ ಮಾವಿನ ಹಣ್ಣುಗಳು ಮೇಳದ ಆಕರ್ಷಣೆಯಾಗಿತ್ತು. ಹಪ್ಪಳ, ಚಿಪ್ಸ್, ಜಾಮ್, ಉಪ್ಪಿನಕಾಯಿ, ಹಲಸಿನ ಐಸ್ ಕ್ರೀಮ್ ಮತ್ತು ಅಪ್ಪೆಮಿಡಿ ಚಟ್ನಿ ಸೇರಿದಂತೆ ಹಲವು ಉತ್ಪನ್ನಗಳು ಕಂಡು ಬಂತು. ಮೇಳದಲ್ಲಿ ಇಳಕಲ್ ಮತ್ತು ಮೈಸೂರು ಸಿಲ್ಕ್ ಸೀರೆಗಳು, ಚನ್ನಪಟ್ಟಣದ ಬೊಂಬೆಗಳು, ಮಣ್ಣಿನ ಆಭರಣಗಳು, ಬೇಲೂರಿನ ಶಿಲಾಮೂರ್ತಿಗಳು ಹಾಗೂ ಆಯುರ್ವೇದ ಉತ್ಪನ್ನಗಳ ಮಳಿಗೆಗಳು ಗ್ರಾಹಕರನ್ನು ಕೈಬೀಸಿ ಕರೆಯುತ್ತಿತ್ತು. ಜೊತೆಗೆ, ತೋಟಗಾರಿಕಾ ಆಸಕ್ತರಿಗೆ ವಿವಿಧ ಹಣ್ಣಿನ ಗಿಡಗಳು, ತರಕಾರಿ ಬೀಜಗಳು ಮತ್ತು ಹೂವಿನ ಗಿಡಗಳೂ ಲಭ್ಯವಿವೆ. ಮೇಳಕ್ಕೆ ಆಗಮಿಸುವ ಪ್ರತಿಯೊಬ್ಬರಿಗೂ ಒಂದು ಉಚಿತ ಹಲಸಿನ ಜಿಲೇಬಿ ನೀಡಲಾಗುತ್ತಿದೆ. ಜತೆಗೆ, ಸೆಲ್ಫಿ ಸ್ಟ್ಯಾಂಡ್‍ನಲ್ಲಿ ಫೆÇೀಟೋ ತೆಗೆದು ವಾಟ್ಸಾಪ್ ಸ್ಟೇಟಸ್ ಹಾಕುವವರಿಗೆ ಸದ್ಗುರು ಆಯುರ್ವೇದ ಸಾಬೂನು ಉಚಿತವಾಗಿ ನೀಡಲಾಗುತ್ತಿದೆ. ಅಲ್ಲದೆ, ಸಾರ್ವಜನಿಕರು ತಮ್ಮಲ್ಲಿರುವ ಹಳೆಯ ಜರಿ ರೇಷ್ಮೆ ಸೀರೆಗಳನ್ನು ಇಲ್ಲಿ ನೀಡಿ ಹಣ ಪಡೆಯುವ ಸೌಲಭ್ಯವನ್ನೂ ಕಲ್ಪಿಸಲಾಗಿದೆ. ಈ ಮೇಳವು ಅಗಸ್ಟ್ 11 ರಾತ್ರಿ ತನಕ ಮುಂದುವರಿಯಲಿದೆ. ಪ್ರತಿದಿನ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಸಾರ್ವಜನಿಕರಿಗೆ ಮುಕ್ತವಾಗಿರುತ್ತದೆ. ಬಂದ್ಯೋಡ್ ನ ಕುಬಣೂರಿನಲ್ಲಿ ಪ್ರಥಮ ಬಾರಿಗೆ ನಡೆಯುತ್ತಿರುವ ಈ ವಿಶಿಷ್ಟ ಮೇಳವನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕೆಂದು ಸಂಘಟಕರು ಮನವಿ ಮಾಡಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries