HEALTH TIPS

ಕುಂಬಳೆ ಠಾಣೆ ಎಸ್‌ಐ ಆಗಿ ಅನೂಬ್, ಸಿಐ ಆಗಿ ಅನೂಪ್ ಕೃಷ್ಣ ನೇಮಕ

ಕುಂಬಳೆ: ಕುಂಬಳೆ ಪೊಲೀಸ್ ಠಾಣೆಯಲ್ಲಿ ನೂತನ ಎಸ್‌ಐ ಆಗಿ ಎಸ್.ಅನೂಬ್ ಹಾಗೂ ಸರ್ಕಲ್ ಇನ್‌ಸ್ಪೆಕ್ಟರ್ ಆಗಿ ಆರ್.ಪಿ. ಅನೂಪ್‌ಕೃಷ್ಣ ಅಧಿಕಾರ ವಹಿಸಿಕೊಂಡಿ ದ್ದಾರೆ. ಎಸ್‌ಐ ಅನೂಬ್‌ರನ್ನು ವಿದ್ಯಾನಗರ ಪೊಲೀಸ್ ಠಾಣೆಯಿಂದ ಕುಂಬಳೆಗೆ ವರ್ಗಾಯಿಸಲಾಗಿದೆ. ತಿರುವನಂ ತಪುರ ಕಾಟಾಕಡ ನಿವಾಸಿಯಾದ ಇವರು ಈ ಮೊದಲು ಕಲ್ಲಿಕೋಟೆ, ಪಂದಿರಾಕಾವ್, ಫರೂಕ್ ಠಾಣೆಗಳಲ್ಲಿ ಎಸ್‌ಐ ಆಗಿದ್ದರು.   ಸರ್ಕಲ್ ಇನ್‌ಸ್ಪೆಕ್ಟರ್ ಆಗಿ ನೇಮಕಗೊಂಡ ಆರ್‌ಪಿ ಅನೂಪ್‌ಕೃಷ್ಣ ತಿರುವನಂತಪುರ ಕೊಡಪ್ಪನಕುನ್ನು ನಿವಾಸಿಯಾಗಿದ್ದಾರೆ. ಈ ಹಿಂದೆ ತಿರುವನಂತಪುರ, ಕೋಟ್ಟಯಂ, ಕೊಲ್ಲಂ, ಪತ್ತನಂತಿಟ್ಟ, ಕುಂಬಳೆ ಕರಾವಳಿ ಠಾಣೆಗಳಲ್ಲಿ ಸೇವೆ ಸಲ್ಲಿಸಿ ಬಳಿಕ ಬದಿಯಡ್ಕ ಠಾಣೆಯಲ್ಲಿ ನೇಮಕಗೊಂ ಡಿದ್ದರು.  ಇನ್ನು ಮುಂದೆ ಇವರಿಗೆ ಬದಿಯಡ್ಕ ಹಾಗೂ ಕುಂಬಳೆ ಠಾಣೆಯ ಹೊಣೆಗಾರಿಕೆ ಇರುವುದು.  ಇವರಿಗೆ ಈ ಹಿಂದೆ ಎರಡು ಬಾರಿ ಬ್ಯಾಡ್ಜ್ ಆಫ್ ಆನರ್ ಪುರಸ್ಕಾರ ಲಭಿಸಿತ್ತು. ಬದಿಯಡ್ಕ ಠಾಣೆಯಲ್ಲಿ ಇನ್‌ಸ್ಪೆಕ್ಟರ್ ಆಗಿ ನೇಮಕಗೊಂಡ ಬಳಿಕ ಇಲ್ಲಿ ದಾಖಲಿಸಲಾದ ಎಲ್ಲಾ ಪ್ರಕರಣಗಳ ಆರೋಪಿಗಳನ್ನು ಪತ್ತೆಹಚ್ಚಿ ಸೆರೆಹಿಡಿಯಲು ಇವರಿಗೆ ಸಾಧ್ಯವಾಗಿದೆ. 


 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries