ಕಾಸರಗೋಡು: ವಿವಿಧ ಕಾರ್ಮಿಕ ಕಾನೂನುಗಳನ್ನು ನಾಲ್ಕು ಸಂಹಿತೆಗಳಾಗಿ ವಿಲೀನಗೊಳಿಸುವ ಮೂಲಕ ರಚಿಸಲಾದ ಏಕೀಕೃತ ಕಾರ್ಮಿಕ ಸಂಹಿತೆಯು ಕಾರ್ಮಿಕರ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ನಿಬಂಧನೆಗಳನ್ನು ಪರಿಶೀಲಿಸುವಂತೆ ಬೇಡಿಕೆಯನ್ನು ಬಿಎಂಎಸ್ ಕಾಸರಗೋಡು ಪ್ರಾದೇಶಿಕ ಸಮ್ಮೇಳನದಲ್ಲಿ ಮಂಡಿಸಲಾಯಿತು.
ಬಿಎಂಎಸ್ ಜಿಲ್ಲಾ ಕಾರ್ಯದರ್ಶಿ ಕೆ.ವಿ. ಬಾಬು ಸಮಾರಂಭ ಉದ್ಘಾಟಿಸಿದರು. ಬಿಎಂಎಸ್ ಕಾಸರಗೋಡು ಪ್ರಾದೇಶಿಕ ಸಮಿತಿ ಉಪಾಧ್ಯಕ್ಷ ಜನಾರ್ದನ ಕಡಪ್ಪುರಂ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಜಂಟಿ ಕಾರ್ಯದರ್ಶಿ ಪ್ರದೀಪ್ ಕೆಲೋತ್ ಅವರು ಅಭಿನಂದನಾ ಭಾಷಣ ಮಾಡಿದರು. ವಲಯ ಕಾರ್ಯದರ್ಶಿ ಬಾಬುಮೋನ್ ಚೆಂಗಾಲ ಅವರು ಚಟುವಟಿಕೆಗಳ ವರದಿಹಾಗೂ ವಲಯ ಕೋಶಾಧಿಕರಿ ಪುಷ್ಪರಾಜ್ ಲೆಕ್ಕಪತ್ರ ಮಂಡಿಸಿದರು. ಮುಂದಿನ ಮೂರು ವರ್ಷಗಳ ಅವಧಿಗೆ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಗಿರೀಶ್ ಕುಮಾರ್ ಅಧ್ಯಕ್ಷ, ಜನಾರ್ದನ ಕಡಪ್ಪುರಂ, ವೀಣಾ ನೆಲ್ಲಿಕುನ್ನು, ಅರುಣ್ ಬಿ, ಮತ್ತು ಎಂ.ಎಸ್.ಆರ್.ಎ. ಬಾಲಕೃಷ್ಣನ್ ನೆಲ್ಲಿಕುನ್ನು ಉಪಾಧ್ಯಕ್ಷರು, ಬಾಬುಮೋನ್ ಚೆಂಗಳ ಕಾರ್ಯದರ್ಶಿ, ರಂಜಿತ್ ಚೆರ್ಕಳ ಮತ್ತು ಶಾಂತಕುಮಾರಿ ಜೆ.ಪಿ.ನಗರ ಜಂಟಿ ಕಾರ್ಯದರ್ಶಿಗಳು ಹಾಗೂ ಕೋಶಾಧಿಕಾರಿಯಾಗಿ ಎಸ್.ಪುಷ್ಪರಾಜ್ ಕೊರಕ್ಕೋಡ್ ಅವರನ್ನು ಆಯ್ಕೆ ಮಾಡಲಾಯಿತು.
ಬಿಎಂಎಸ್ ಜಿಲ್ಲಾ ಉಪಾಧ್ಯಕ್ಷ ಅನಿಲ್ ಬಿ.ನಾಯರ್ ಸಮಾರೋಪ ಭಾಷಣ ಮಾಡಿದರು. ಬಿಎಂಎಸ್ ಜಿಲ್ಲಾ ಜಂಟಿ ಕಾರ್ಯದರ್ಶಿ ಭಾಸ್ಕರನ್ ಪೆÇಯಿನಾಚಿ, ಕಾಸರಗೋಡು ನಗರಸಭಾ ಸಮಿತಿ ಅಧ್ಯಕ್ಷ ಎ.ಕೇಶವ, ಮಧೂರು ಪ್ರಾದೇಶಿಕ ಕಾರ್ಯದರ್ಶಿ ಶ್ರೀಧರನ್ ಚೆನಕ್ಕೋಡ್, ಅಧ್ಯಕ್ಷ ವಸಂತ ನಾಯ್ಕ್, ಬಿಎಂಎಸ್ ಚೆಂಗಳ ಪಂಚಾಯತ್ ಕಾರ್ಯದರ್ಶಿ ಅವಿನಾಶ್ ನೆಕ್ರಾಜೆ, ಬಿಎಂಎಸ್ ಚೆಂಗಳ ಪಂಚಾಯತ್ ಅಧ್ಯಕ್ಷ ಪ್ರಜಿತ್ ಉಪಸ್ಥಿತರಿದ್ದರು.
ಜಯಶೀಲನ್ ವಂದೇಮಾತರಂ ಹಾಗೂ ಬಾಬುಮೋನ್ ಚೆಂಗಳ ಮಜ್ದೂರ್ ಗೀತೆ ಹಾಡಿದರು. ಮನೋಜ್ ಜೆ.ಪಿ.ನಗರ ಸ್ವಾಗತಿಸಿದರು. ರಂಜಿತ್ ಚೆರ್ಕಳ ವಂದಿಸಿದರು.

