ಉಪ್ಪಳ: ಉಪ್ಪಳ ಬಸ್ ನಿಲ್ದಾಣ ವಠಾರದಲ್ಲಿ ಮಂಜೇಶ್ವರ ಠಾಣೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ 180 ಮಿಲಿಯ 20 ಪ್ಯಾಕೆಟ್ ಹಾಗೂ 90 ಮಿಲಿಯ 25 ಪ್ಯಾಕೆಟ್ ಕರ್ನಾಟಕ ನಿರ್ಮಿತ ವಿದೇಶಿ ಮದ್ಯ ವಶಪಡಿಸಿಕೊಂಡು, ಆರೋಪಿಯನ್ನು ಬಂಧಿಸಿದ್ದಾರೆ. ಉತ್ತರ ಪ್ರದೇಶ ನಿವಾಸಿ, ಆರಿಕ್ಕಾಡಿಯ ಕ್ವಾರ್ಟರ್ಸ್‍ನಲ್ಲಿ ವಾಸಿಸುವ ರಾಮ್ ಬಹದ್ದೂರ್ ಕಶ್ಯಪ್ (31)ಬಂಧಿತ. ಭಾನುವಾರ ರಾತ್ರಿ ಉಪ್ಪಳ ಬಸ್ ನಿಲ್ದಾಣ ಬಳಿಯ ಸರ್ವೀಸ್ ರಸ್ತೆಯಲ್ಲಿ ನಿಂತಿದ್ದ ಈತನನ್ನು ಪೋಲೀಸರು ತಪಾಸಣೆ ನಡೆಸಿದಾಗ ಕೈಯಲ್ಲಿದ್ದ ಚೀಲದಲ್ಲಿ ಮದ್ಯ ಪತ್ತೆಯಾಗಿದೆ.

